ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರ್ತಭಾವ ಸುಳಾದಿ ಧ್ರುವತಾಳ ವೊಂದು ತೋರೆನಗರವಿಂದನಯನ ಮಂದಾಕಿನಿಯ ಪಡೆದ ಮುದ್ದು ಚರಣ ಸುಂದರಾಂಗ ತೋರೆನಗೆ ಸುರೇಂದ್ರನಾಥ ಕಂದರ್ಪಪಿತನ ಕಾಲಂದಿಗೆ ರುಳಿ ಗೆಜ್ಜೆ ಚೆಂದುಳ್ಳ ಪದ್ಮರೇಖೆಯಿಂದೊಪ್ಪುವೊ ಇಂದಿರೆ ಕರಕಮಲದಿಂದ ಪೂಜಿತನಾದ ಚಂದ್ರವದನ ನಿನ್ನ ಚೆಲುವ ಪಾದ ಇಂದ್ರಾದಿ ಹರ ನಾರಂದ ಸುರಬ್ರಹ್ಮಾದಿ ವಂದ್ಯ ನಿನಗೆ ಕೋಟಿ ನಮೋ ನಮೋ ಎಂದು ಬೇಡುವೆ ದಯಾಸಿಂಧು ಎನಿಸಿದಾತ ಕಂದನಂದದಿ ನೋಡಿ ಸಲಹೋ ಎನ್ನ ಮಂದಬುದ್ಧಿಯ ಮಹಾಮದಡ ಪಾಮರ ಭವ ಬಂಧನದೊಳು ಸಿಲುಕಿ ನೊಂದೆನಯ್ಯ ಸಂದೇಹ ಮಾಡದೆ ಸಲಹದಿದ್ದರೆ ನಿನ್ನ ಹೊಂದಿ ಬಾಳುವುದೆಂತೊ ಮುಂದರಿಯೆ ಬಿಂದು ಮಾತ್ರದಿ ನಾಮಾಮೃತವ ಭೀಮೇಶಕೃಷ್ಣ ತಂದು ನೀಡೆನಿಗೆ ಇಂದೀವರಾಕ್ಷ 1 ಮಠ್ಯತಾಳ ಯುಗಳ ಪಾದಕೆ ಕೈಯ ಮುಗಿದು ಬೇಡುವೆನಯ್ಯ ಜಗದುದರನೆ ನಿನ್ನ ಜಾಣತನವ ಬಿಟ್ಟು ಅಗಣಿತಗುಣಮಹಿಮ ಅಂತರಾತ್ಮಕ ದೇವ ಬಗೆಬಗೆಯಲಿ ಸಲಹೋ ಭಕ್ತವತ್ಸಲ ನಿನ್ನ ಮಗುವೆಂದೆನ್ನ ಕಾಯೊ ಮಂದರೋದ್ಧರ ದೇವ ನಿಗಮಗೋಚರ ಸ್ವಾಮಿ ನಿಂತು ನೋಡುತ ಎನ್ನ ಚಿಗುರುದೋಷದಕುಡಿಯ ಚಿವುಟಿ ಹಾಕುತ ನಿನ್ನ ಸುಗುಣಗಳನೆ ಬಿಟ್ಟೆನ್ನವಗುಣವೆಣಿಸಿದರೆ ಇಗೋ ನಿನಗಪಕೀರ್ತಿ ಈಗ ಒಪ್ಪಿಸುವೆನು ಬಿಗಿದ ಭವಪಾಶ ಬಿಚ್ಚಿ ಭೀಮೇಶಕೃಷ್ಣ ತೆಗೆಯದೆ ನಿನ್ಹೊರತೀ ಜಗದೊಳಗುಂಟೇನಯ್ಯ 2 ವಚನ ಸಕಲ ಸ್ನಾನವು ನೇಮ ಹೋಮ ಜಪಂಗಳು ಸಕಲ ಪುಣ್ಯಕ್ಷೇತ್ರ ಮೂರ್ತಿನಾಮಂಗಳು ಸಕಲ ಪುರಾಣ ವೇದಾದಿಗ್ರಂಥಗಳು ಸಕಲ ಕಾರ್ಯವು ಸರ್ವೇಷ್ಟ ಫಲಂಗಳು ಸಾಯುಜ್ಯ ಪದವಿಗಳು ಲಕುಮೀಶ ಇವು ನಿನ್ನ ನಖಶಿಖ ಪರಿಯಂತ್ರ ಸಾರಥಿ ಸಮದೃಷ್ಟಿಲಿ ನೋಡಲು ಸಕಲಸಿದ್ಧ್ದಿಯು ಸರಿಯಾಗಿ ಕೈಗೂಡೋದು ಶಕಟಸುರಾಂತಕ ಕಕುಲಾತಿ ಮಾಡದೆ ಬಕನ್ವೈರಿಯೆನ್ನ ಭಾರವ ನೀ ವಹಿಸಲಿ ಬೇಕೊ ಇಕೋ ನಿನ್ನ ಚರಣಕ್ಕೆ ಈ ದೇಹ ಅರ್ಪಿಸುವೆ ಗೋಕುಲಾವಾಸ ನಿನ್ನ ಪಾದಕೆ ನಮಸ್ಕರಿಸುವೆ ಮುಕುತಿದಾಯಕ ಮುದ್ದು ಭೀಮೇಶಕೃಷ್ಣನೆ ಭಕುತಿಜ್ಞಾನದಲಿಡೊ ಭಯಹಾರಿ ಎನ್ನ 3 ಗೋಪಸುತನೆ ನಿನ್ನ ಗುರುವಿನ್ವಲ್ಲಭೆ ಮಹ ದಪರಾಧವೆಣಿಸದೆ ನೀ ಕರುಣದಲೆ ಸಾಂ- ದೀಪಗೆ ಸುತರನಿಟ್ಟ ಪಯಾಂಬುಧಿವಾಸ ಕೋಪದಿ ಬಯ್ದ್ದಾ ಶಿಶುಪಾಲಗೊಲಿದೆಯೊ ಶ್ರೀಪತಿ ಶರಣೆಂದಾ ದ್ರೌಪದಿ ಕಾಯ್ದಂತೆ ಕಾಪಾಡೊ ಈ ಭವಕೂಪದೊಳಗೆ ಬಿದ್ದೆ ನೀ ಪಿಡಿಕೈಯ ದಯಾಪರಮೂರುತಿ ಆಪತ್ತು ಬಾಂಧವ ಈ ದೇಹವೃಕ್ಷದಲಿ ದ್ವಾ- ಸೂಪರಣನಂತೆ ದೂರೇನೋ ಎನ್ನ ಸ- ಮೀಪದಲ್ಲಿದ್ದು ಸ್ವರೂಪ ತೋರದಲೆ ಸಂ- ತಾಪ ಬಡಿಸದಿರೆಂದಾಪನಿತು ಪೇಳ್ವೆ ಭೂಪಾಲ ಭೀಮೇಶಕೃಷ್ಣ ನಿನ್ನ ಪಾದ ನಾ ಪೊಂದಿದೆನೊ ದೊರೆ ನೀ ಪೊರೆಯೆಂದು 4 ಜತೆ ಏಸೇಸು ಕಾಲಕೆ ಬ್ಯಾಸರದೆ ಭೀಮೇಶಕೃಷ್ಣ ಲೇಸು ನೀಡೆನಗೆ ಸದಾ ಸುಮಂಗಳವ 5
--------------
ಹರಪನಹಳ್ಳಿಭೀಮವ್ವ
ಗಾಂಜ ಸೇದುವ ಬನ್ನಿ, ತಿಳಿವಿನ ಗಾಂಜ ಸೇದುವ ಬನ್ನಿಗಾಂಜ ಸೇದಿದರೆ ನಿಮಗೆ ಭವವಿಲ್ಲ ವೆನ್ನಿ ಪ ಅವಗುಣವೆಂಬ ಭೂಮಿ ಶೋಧಿಸಿ ಅಗೆತ ಮಾಡಿದ ಗಾಂಜಸವನಿಸಿದ ಖೂರಾಕು ಹಾಕಿದ ಸತ್ವವಾದ ಗಾಂಜ1 ಸಾಧನೆ ಎಂಬ ನೀರು ಕಟ್ಟಿದ ಸಡಕು ಆದ ಗಾಂಜಭೇದವೆಂಬ ಕಳೆಯ ಕೆತ್ತಿದ ಬೋಧವೆಂಬ ಗಾಂಜ 2 ಭಜನೆ ಭಾವದಿಂದ ಬೆಳೆದ ಬಡಕು ಆದ ಗಾಂಜಕುಜನವೆಂಬ ಎಲೆಗಳ ಚಿವುಟಿದ ಕಡಕು ಆದ ಗಾಂಜ 3 ನಾನು ಎಂಬ ಹೂವು ಉದುರಿದ ನೊಣ ಹಾರದ ಗಾಂಜಜ್ಞಾನವೆಂಬ ಗೊಂಡೆಗಳಳಿದ ಘನ ತಾನಾದ ಗಾಂಜ 4 ಏನೇನ ಅರಿವು ಎಲ್ಲ ಅಡಗಿದ ಏಕವಾದ ಗಾಂಜತಾನೆ ಚಿದಾನಂದ ಸದ್ಗುರು ವಾದ ತಾನೆ ತಾನಾದ ಗಾಂಜ5
--------------
ಚಿದಾನಂದ ಅವಧೂತರು
6 (ಅ)ಸಂಪ್ರದಾಯದ ಹಾಡುಗಳು424ಆದಿನಾಥಗೆ ಜಯಮಂಗಳಶ್ರೀಧರ ಮೂರ್ತಿಗೆ ಶುಭಮಂಗಳ ಪ.ಧರಿಸಿ ನಾವೆಯ ಸತ್ಯವ್ರತನ ಪಾವನ ಮಾಡಿಚರಿಸದೆ ಮಂದರಗಿರಿಯ ಹೊತ್ತುಧರೆಯ ನೆಗಹಿ ಬಂಗಾರಗಣ್ಣಿನವನಹರಿದು ದೈತ್ಯಜಗೊಲಿದು ಬಂದವಗೆ 1ಸುರಪನಂತಸ್ತಾಪ ತರಿದು ಧರಿತ್ರಿಯಸುರರಿಗೆ ಸಕಲ ಪದವಿಯನಿತ್ತುಶರಧಿಯ ದಾಟಿ ದಶಶಿರನ ತಲೆ ಚಿವುಟಿತುರುಗಾಯ್ದ ಗೋಪೇರ ಅರಸನಿಗೆ 2ಅಂತರಾಳ ಪಟ್ಟಣಕಪಾಯವನು ಮಾಡಿಅಂತ್ಯದಿ ಯವನರ ಸವರಿದಗೆಚಿಂತಿಪ ದಾಸರ ಚಿಂತಾಮಣಿಗೆಸಿರಿಕಾಂತ ಪ್ರಸನ್ವೆಂಕಟದಾಸನಿಗೆ 3
--------------
ಪ್ರಸನ್ನವೆಂಕಟದಾಸರು
ನಿನ್ನ ಮಗನ ಮುದ್ದು ನೀನೆ ಲಾಲಿಸಮ್ಮಚಿನ್ನನೆಂದಾಡಿಸಮ್ಮಬಣ್ಣದ ಬಾಲೇರ ಭೋಗಿಪ ಚದುರತೆಸಣ್ಣವರ ಸರಸೇನಮ್ಮ ಪ.ತಾಳಬೇಕೆಷ್ಟೆಂದು ಗಾಡಿಕಾರನ ಮಾತಹೇಳಲಂಜುವೆವಮ್ಮ ನಮ್ಮಾಳುವ ಇನಿಯರ ವೇಡಿಸಿ ನಮ್ಮ ಲಜ್ಜೆಹಾಳುಮಾಡಿ ಹೋದನೆ 1ಕೃಷ್ಣ ಸಿಕ್ಕಿದನೆಂದು ನಮ್ಮ ಮಕ್ಕಳ ನಾವೆದಟ್ಟಿಸಿ ಕೊಲುವೆವಮ್ಮ ಈದೃಷ್ಟಿ ಮಾಯದಜಾಲನೋಡೆ ನಂದನರಾಣಿಸೃಷ್ಟೀಶರಿಗೆ ತೀರದು 2ಕನ್ನೆಯರೊಗ್ಗೂಡಿ ಕಳ್ಳನ ಕೈಕಟ್ಟಿನಿನ್ನೆಡೆಗೆ ತರುತಿದ್ದೆವೆಕಣ್ಣಿಯ ಕೊರಳಿನ ಕರುವೆಂದು ಜನವಾಡೆಖಿನ್ನರಾಗಿ ಹೋದೆವೆ 3ಆವಾವ ಕೇರೀಲಿಜಾರಚೋರನ ಮಾತುಆವಾವ ಮನೆಗಳಲ್ಲಿಭಾವೆಯರೆಳೆ ಮೊಲೆ ಮೂಗ ಚಿವುಟಿ ಜಾವಜಾವಕಂಜಿಸಿಕೊಂಬನೆ 4ನಾವು ಮಾಡಿದ ಸುಕೃತವೆಂತೊ ಗೋಪಾಲರೇಯಭಾವಕೆ ಮೆಚ್ಚಿದನೆದೇವರ ದೇವ ಪ್ರಸನ್ವೆಂಕಟೇಶಜೀವಕೆ ಹೊಣೆಯಾದನೆ 5
--------------
ಪ್ರಸನ್ನವೆಂಕಟದಾಸರು