ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುಡಿಗುಡಿಯನು ಸೇದಿ ನೋಡೋ ನಿನ್ನ ಒಡಲೋಳಗಿರುವ ರೋಗಗಳನೀಗಾಡೋ ಪ ಬುರುಡೆ ಎಂಬುದು ಈ ಶರೀರಪಡೆ ದಿರುವ ಸುಕೃತವೆ ಕೊಳವೆಯಾಕಾರಾ ಹರಿನಾರಾಯಣನೆಂಬ ನೀರಾ ಇದ ನರಿತು ನೀ ಸೇದಿಕೊ ಬಲು ಮೋಜುಗಾರಾ ಗುಡುಗುಡಿ1 ಮನವೆಂಬ ಸಂಚಿಯ ಬಚ್ಚಿ ದಿನ ದಿನದಿ ಪತಾಕವೆಂಬ ಭಂಗಿಯ ಕೊಚ್ಚಿ ತನುವಿನ ಚಿಲುಮೆಯೊಳ್ಬೆಚ್ಚಿ ಗುರು ಧ್ಯಾನದ ಕೆಂಡದುರಿಯ ತಂದ್ಹಚ್ಚಿ ಗುಡುಗುಡಿ2 ಸದ್ಯದಿ ಅಮಲೇರುವುದು ದಾರ್ರಿದ್ರ್ಯ ದುಃಖವ ಸುಟ್ಟು ಹೊಗೆ ಏಳುವುದು ತೋರುವುದು ಗುರು ಬುದ್ಧಿಗೆ ಮಾರ್ಗ ಸಿದ್ಧ ವಿಮಲಾನಂದ ಪದಕೆ ಕೊಡುವುದು ಗುಡುಗುಡಿ 3
--------------
ಭಟಕಳ ಅಪ್ಪಯ್ಯ
ತಾರಕ್ಕ ಬಿಂದಿಗೆ ನೀರಿಗೆ ಹೋಗುವೆ |ತಾರೆ ಬಿಂದಿಗೆಯ ...................... ಪ.ತರಲಾಗದಿದ್ದರೆ ಬಲಿಯಿಟ್ಟು ಬರುವೆನು |ತಾರೆ ಬಿಂದಿಗೆಯ............... ಅಪಅಚ್ಚುತನೆಂಬುವ ಕಟ್ಟೆಯ ನೀರಿಗೆ ತಾರೆಬಿಂದಿಗೆಯ - ಅಲ್ಲಿ - |ಮತ್ಸರ ಕ್ರೋಧವೆಂಬ ಕೊಡವನು ತೊಳೆವೆನು ತಾರೆ 1ರಾಮನಾಯವೆಂಬ ಸಾರದ ನೀರಿಗೆ ತಾರೆಬಿಂದಿಗೆಯ -ಹರಿ - |ರಾಮವೆಂಬುವ ಹರಿದು ಹೋಗುವ ನೀರಿಗೆ ತಾರೆ 2ಅಜ್ಞಾನವೆಂಬ ನೀರ ಚೆಲ್ಲಿಬಂದೆನು ತಾರೆ ಬಿಂದಿಗೆಯ |ಸುಙ್ಞÕವೆಂಬುವ ನೀರಿಗೆ ಹೋಗುವೆ ತಾರೆ 3ಗೋವಿಂದನೆಂಬುವ ಗುಣವುಳ್ಳ ನೀರಿಗೆ ತಾರೆ ಬಿಂದಿಗೆಯ |ಚೆಲ್ವ ಬೆಳದಿಂಗಳೊಳು ಚಿಲುಮೆಯ ನೀರಿಗೆ ತಾರೆ 4ಬಿಂದು ಮಾಧವನ ಏರಿಯ ನೀರಿಗೆ ತಾರೆ ಬಿಂದಿಗೆಯ - ಪು -ರಂದರವಿಠಲನ ಅಭಿಷೇಕಕೆ ಬೇಕು ತಾರೆ 5
--------------
ಪುರಂದರದಾಸರು