ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಸಿರ ನಾಮವ ಹಾಡೆ | ತಂಗಿ ಪ ದಾಸರು ಬಂದರೆ ಕೈ ಜೋಡಿಸಿ ವಂದಿಸೆ ತೋಷದಿ ವರಗಳ ಸೀಡುವರಮ್ಮ ಅ.ಪ ಪರಿಮಳ ಭರದಲಿ ಮೆರೆಯುವ ಹೂಗಳ ಅರಸಿ ತಂದಿರುವಳು ನೀನಲ್ಲವೇ ಪರಮ ಮಂಗಳಕರ ಸರಸಿಜಪಾದಕೆ ಹರುಷದೊಳರ್ಪಿಸೆ ಮರೆಯದಿರಮ್ಮ 1 ಮಂದರಧರ ಗೋವಿಂದನು ಮನದಲಿ ನಿಂದಿರುವನು ತಾನೆಂದೆಣಿಸಮ್ಮ ಬಂಧಿಸಿ ಪಂಚೇಂದ್ರಿಯಗಳನೆಲ್ಲ ವಂದಿಸಿ ಕೈಪಿಡಿ ಎಂದು ಬೇಡಮ್ಮ 2 ಅಂಗನೆಯರ ಭಾವಭಂಗಿಗೆ ನಲಿಯುವ ಮಾಂಗಿರಿಯರಸನು ನಿಜವಮ್ಮ ಇಂಗಿತವರಿತು ಗೋಪಾಂಗನೆಯರಿಗಾ- ಲಿಂಗನವಿತ್ತವನಿವನಮ್ಮ 3 ಇವನಮ್ಮ ಮನದೈವ ಗೋಪಾಲನು ಇವನಮ್ಮ ಪರದೈವ ನೀಲಾಂಗನು ಭವದೂರ ಸುಕುಮಾರ ಸಿರಿಲೋಲನು ನವನೀತ ದಧಿಚೋರ ಸುವಿಲಾಸನು 4 ಪರಮಾರ್ಥ ಚರಿತಾರ್ಥ ವರದಾತನು ಪರತತ್ವ ಚಿರತತ್ವ ಗುರುವೀತನು ದುರಿತಾರಿ ಉಪಕಾರಿ ಪರಮಾತ್ಮನು ಸಿರಿರಂಗ ಮಾಂಗಿರಿಯ ದೊರೆಯೀತನು 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್