ಕೃಷ್ಣ ಕೃಷ್ಣ ಕೃಷ್ಣಯೆಂದು ಮೂರುಬಾರಿ ನೆನೆಯಿರೊ ಪ
ಭಾರ ಹೊರುವನೋಅ.ಪ
ಸಕಲ ವೇದ ಶಾಸ್ತ್ರ ಪಠಿಸಿ ಸಾರವನ್ನು ತಿಳಿದರೇನುಮಕರ ಕುಂಡಲಧರನ ನಾಮಕೆ ಸರಿಯಿಲ್ಲವೊ 1
ಕಮಲನಾಭನ ಚಿನ್ಹೆಯನ್ನು ಧರಿಸಿಕೊಂಡು ಮೆರೆಯಿರೊಯಮನ ಭಟರು ನೋಡಿ ಅಂಜಿ ಅಡವಿ ಹೊಗುವರೋ2
ಜನ್ಮವೆತ್ತಿ ಮಧ್ವಮತವ ಅನುಸರಿಸಿ ನಡೆಯಿರೊಸುಮ್ಮಾನದಿ ಸಿರಿಕೃಷ್ಣ ತನ್ನ ಲೋಕ ಕೊಡುವನೋ3