ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನನುದ್ದರಿಸು ಗುರು ರನ್ನ ಮಹಿಪತಿದೇವ | ಚಿನ್ನನೆನುತಲಿ ಬಿಡದೆ ಘನ್ನ ದಯ ಮಳೆಗರೆದು | ಮುನ್ನಿನಪರಾಧಗಳನಿನ್ನು ಕ್ಷಮೆಯನು ಮಾಡಿ | ನಿನ್ನ ಸ್ಮರಣೆಯೊಳಿಪ್ಪ ಸನ್ಮತಿಯನಿತ್ತು 1 ನಿಚ್ಚಳದ ಪದಗಳಿಗೆ ಮುಚ್ಚಗೊಳ್ಳದೆ ನಿನ್ನ | ಎಚ್ಚರಿಕೆಯನು ತೊರೆದು ಬೆಚ್ಚಿ ಬೆದರುತೆ ವಿಷಯ | ಕಚ್ಚಿ ಬಳಲುವ ಈ ಹುಚ್ಚು ಮನಸ್ಸಿಗೆ ನೀ | ನಿಚ್ಚಟದರಹು ಕೊಟ್ಟು ನಿಶ್ಚಲದಲಿ ಸಲುಹು2 ಕುಂಭಿನಿಲಿ ಧೇನು ಬಸಿರಿಂ ಬಂದ ಕರುವಿಂಗೆ | ಹಂಬಲಿಸಿ ತಿರು ತಿರುಗಿ ಬೆಂಬಿಡದೆ ಬಪ್ಪಂತೆ | ಇಂಬಾಗಿ ಎನಗ ಕರುಣಾಂಬಕದಿ ನೋಡಿ ನೀ | ಸಂಬಾಳಿಸೈ ಕೃಷ್ಣನೆಂಬವನ ಸ್ವಾಮೀ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಮ್ಮಮ್ಮಾ ಎಂಥವನಿವಾ ಚಿನ್ನನೆ| ಗೋಪಿಯ ಕಂದಾ ಅಂತವ ದೋರಗುಡನೆ ಪ ಸಗಟನ ಮುರಿದೊತ್ತಿದ|ಮೊಲೆಯ ಕೊಟ್ಟ| ಮುಗುದೆಯ ಪ್ರಾಣ ಹೀರಿದಾ 1 ವಿಷಮಡು ಕಲಕಿದನೆ|ಕಾಳಿಂಗನಾ| ವಸುಧೆಗೆ ಎಳೆತಂದನೆ 2 ಪಶುಪಕ್ಷಿ ಮೃಗಾಂಗನೇರು|ಕೊಳಲಧ್ವನಿಗೆ| ನಿಸಿದಿನಿ ಮರುಳಹರು3 ತಿನಬ್ಯಾಡಮಣ್ಣವೆಂದರೆ|ಬಾಯೊಳು ಜಗವ| ದೋರಿದ ಜನ ಬೆದರೆ 4 ತಂದೆ ಮಹಿಪತಿ ಸ್ವಾಮಿಯ|ಹೇಳಲಿ ನಾನು ಒಂದೆರಡೆಂದು ಲೀಲೆಯ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಳೆಯನೆನ್ನದಿರಮ್ಮ ಎಲೆಗೋಪಿಕೃಷ್ಣಗೆಕೆಳದೇರುಟ್ಟಿಹವಸನಕಳೆವ ಜಾರಮಣಿಗೆಪ.ನಡುವಿರುಳೆ ಬಂದೆಮ್ಮ ನಲ್ಲರಂತೆ ಮಾತನಾಡಿಪಿಡಿದು ಚುಂಬಿಸಿ ಪರಿಯಂಕದಲ್ಲಿ ಕೂಡಿಮಡದಿಯರಂತ ನಾವು ಮಾಯ ಮೋಸದಿ ಗೆಲ್ಲುವಒಡನೆ ಗೋವಳನಂತೆ ಒಪ್ಪುವ ಗಾಡಿಕಾರಗೆ 1ಬಾಲಕನಂತೆ ಕಂಗೊಳಿಸಿ ಬೀದಿಯೊಳು ಸುಳಿಯಲುನಲವಿಂದೆತ್ತಿಕೊಂಡು ನೇಹ ತೊಡರಿ ಅಪ್ಪಿಕೊಂಡುನೀಲದ ಹಣ್ಣ ನೀಡೆ ತಾನಾಲದ ಹಣ್ಣು ಬೇಡುವಮೇಲಣ ಮಾತೇನೆ ಬೇಗ ಮೊಳೆಮೊಲೆಗ್ಹೆಣಗುವಗೆ 2ರನ್ನದುಂಗುರ ಬೆರಳ ರತಿಗೆ ಮಾರನ ಸರಳಕನ್ನೆಯರನೆಲ್ಲ ಚೆಲ್ವ ಕಣ್ಣ ಸನ್ನೆಲೆ ಮೋಹಿಸುವಚಿನ್ನನೆನ್ನಬಹುದೆ ಇವಗೆಚಟುಲಪ್ರಾಯದವಗೆ ಪ್ರಸನ್ನ ವೆಂಕಟೇಶ ನಮ್ಮ ಸೇರಿ ಬೆನ್ನಬಿಡನಮ್ಮ 3
--------------
ಪ್ರಸನ್ನವೆಂಕಟದಾಸರು
ನಾನೆಲ್ಲ್ಲು ಪೋಗಲಿಲ್ಲ ನಾರಿಯರೆನ್ನದೂರುವರಿದ ನೋಡಮ್ಮ ಪವಾರಿಗೆಯ ಗೆಳತಿಯರು ಸೇರುತಕೂಡಿ ಮಾತುಗಳಾಡಿ ನಗುವರುಚಾಡಿ ಮಾತುಗಳ್ಹೇಳ ಬರುವರುಕೇಳಿಮನದಲಿ ಕೋಪಿಸದಿರುಅ.ಪಬ್ರಹ್ಮನ ಪಿತನೆಂಬೊರೊ ಎನ್ನನು ಪುಟ್ಟಸಣ್ಣ ಕೂಸೆಂದರಿಯರೆಬ್ರಹ್ಮಾಂಡೋದರನೆಂಬೋರೇ ಕೇಳಮ್ಮಯ್ಯಸಣ್ಣುದುರನೆಂದರಿಯರೆಬೆಣ್ಣೆ ಕಳ್ಳನು ಸಣ್ಣವನು ಎಂದುಕಣ್ಣು ಸನ್ನೆಗೆ ಚಂದ ನಗುವರುಚಿನ್ನನೆಂದು ಮುದ್ದಿಸುವರೆನ್ನುತಕನ್ಯೆಯರು ಅಪಹಾಸ್ಯ ಮಾಳ್ಪರು 1ನೀರ ಪೊಕ್ಕವನೆಂಬೋರೆ ವೇದ ತಂದಿತ್ತನಾರುವ ಮಯ್ಯವನೆಂಬೋರೇಭಾರಪೊತ್ತವನೆಂಬೋರೇ ಮೋರೆ ತಗ್ಗಿಸಿದಘೋರರೂಪನು ಎಂಬೋರೇಕೋರೆ ದಾಡಿಯ ನೆಗಹಿ ಧರಣಿಯಶೂರ ಹಿರಣ್ಯಾಕ್ಷಕನ ಸೀಳಿದಕ್ರೂರ ರೂಪವ ಧರಿಸಿ ಕರುಳಿನಮಾಲೆ ಹಾಕಿದ ಧೀರನೆಂಬೋರು 2ಮೂರು ಪಾದದ ಭೂಮಿಯ ಬೇಡಲು ಬ್ರಹ್ಮ-ಚಾರಿಯಾದನು ಎಂಬೋರೇಮೂರು ಏಳೆನಿಸಿಕೊಂಡು ಧರಣಿಯ ಸುತ್ತಿದಧೀರ ರಾಮನು ಎಂಬೋರೇನಾರು ವಸ್ತ್ರವ ಧರಿಸಿವನವನಸೇರಿವಾನರರೊಡನೆ ಚರಿಸಿದನಾರಿಯರ ವಸ್ತ್ರಗಳ ಕದ್ದ ನವ-ನೀತ ಚೋರನೆಂದೆನಿಸುತ ನಗುವರು 3ಬತ್ತಲಿರುವನೆಂಬೋರೇ ತ್ರಿಪುರಗೆದ್ದಉತ್ತಮಹರಿಎಂಬೋರೇಉತ್ತುಮಾಶ್ವವನೇರುತ ಧರೆಯಲಿ ಮೆರೆದಮತ್ತೆ ರಾವುತನೆಂಬೋರೇಹತ್ತು ವಿಧದಲಿ ಅವತರಿಸಿ ನಿಜಭಕ್ತರನು ರಕ್ಷಿಸಿದೆನೆಂಬೋರುಮುಕ್ತಿದಾಯಕ ಹರಿಗೆ ಸಮರುಅಧಿಕರ್ಯಾರಿಲ್ಲೆನುತ ನಗುವರು 4ಮುದ್ದು ಮಾತಗಳಕೇಳಿಸಂಭ್ರಮದಿಂದಎದ್ದು ಮಗನನಪ್ಪುತಶ್ರದ್ಧೆಯಿಂದಲಿ ನೋಡುವ ತೊಡೆಯಲಿಟ್ಟುಮುದ್ದಿಸಿ ನಸುನಗುತಾಪದ್ಮನಾಭಶ್ರೀ ಕಮಲನಾಭನ ವಿ-ಠ್ಠಲನ ಮುಡಿನೇವರಿಸಿ ಹರುಷದಿತಿದ್ದುತಲಿ ಮುಂಗುರಳು ನಗುಮುಖಮುದ್ದಿಸುತ ಮುದದಿಂದ ನಲಿವಳು 5ಲಾಲಿಸಿದಳು ಮಗನ ಗೋಪೀದೇವಿಲಾಲಿಸಿದಳು ಮಗನ
--------------
ನಿಡಗುರುಕಿ ಜೀವೂಬಾಯಿ
ನಿನ್ನ ಮಗನ ಮುದ್ದು ನೀನೆ ಲಾಲಿಸಮ್ಮಚಿನ್ನನೆಂದಾಡಿಸಮ್ಮಬಣ್ಣದ ಬಾಲೇರ ಭೋಗಿಪ ಚದುರತೆಸಣ್ಣವರ ಸರಸೇನಮ್ಮ ಪ.ತಾಳಬೇಕೆಷ್ಟೆಂದು ಗಾಡಿಕಾರನ ಮಾತಹೇಳಲಂಜುವೆವಮ್ಮ ನಮ್ಮಾಳುವ ಇನಿಯರ ವೇಡಿಸಿ ನಮ್ಮ ಲಜ್ಜೆಹಾಳುಮಾಡಿ ಹೋದನೆ 1ಕೃಷ್ಣ ಸಿಕ್ಕಿದನೆಂದು ನಮ್ಮ ಮಕ್ಕಳ ನಾವೆದಟ್ಟಿಸಿ ಕೊಲುವೆವಮ್ಮ ಈದೃಷ್ಟಿ ಮಾಯದಜಾಲನೋಡೆ ನಂದನರಾಣಿಸೃಷ್ಟೀಶರಿಗೆ ತೀರದು 2ಕನ್ನೆಯರೊಗ್ಗೂಡಿ ಕಳ್ಳನ ಕೈಕಟ್ಟಿನಿನ್ನೆಡೆಗೆ ತರುತಿದ್ದೆವೆಕಣ್ಣಿಯ ಕೊರಳಿನ ಕರುವೆಂದು ಜನವಾಡೆಖಿನ್ನರಾಗಿ ಹೋದೆವೆ 3ಆವಾವ ಕೇರೀಲಿಜಾರಚೋರನ ಮಾತುಆವಾವ ಮನೆಗಳಲ್ಲಿಭಾವೆಯರೆಳೆ ಮೊಲೆ ಮೂಗ ಚಿವುಟಿ ಜಾವಜಾವಕಂಜಿಸಿಕೊಂಬನೆ 4ನಾವು ಮಾಡಿದ ಸುಕೃತವೆಂತೊ ಗೋಪಾಲರೇಯಭಾವಕೆ ಮೆಚ್ಚಿದನೆದೇವರ ದೇವ ಪ್ರಸನ್ವೆಂಕಟೇಶಜೀವಕೆ ಹೊಣೆಯಾದನೆ 5
--------------
ಪ್ರಸನ್ನವೆಂಕಟದಾಸರು
ಸಿಕ್ಕಿದೆ ಬಾರೆಲೆ ಹೇ ಕಳ್ಳಾ ನಿನ್ನಚೊಕ್ಕ ಸಹಸಾ ಜರಿವವಳಲ್ಲಭಕುತೀಲೆ ಕಟ್ಟುವೆ ಈರಡಿಯ ನಡೆಅಕ್ಕ ಗೋಪಮ್ಮನಿದ್ದೆಡೆಯ ಪ.ಮುನ್ನಿನಪರಾಧಗಳ ತಾಳ್ದೆ ನಾನಿನ್ನ ದಿಟ್ಟತನ ಬಲವರಿದೆಚಿನ್ನನೆನಬಹುದೇನೊ ನಿನಗೆ ದಿಟ್ಟಗಣ್ಣವ್ಹರಿದೆಮ್ಮಯ ಮೊಲೆಗೆಉನ್ನತ ಗೋಡೆಗೆ ನಿಚ್ಚಣಿಕೆಯಿಕ್ಕದೆ ಪಾರಿದೆಘನ್ನ ಪಾಲು ಮೊಸರ ಗೋಪರೊಡನೆ ಸವಿದೆಉನ್ನತ ಮಹಿಮೆಯೆತ್ತ ಘನ್ನಜಾರತನಯೆತ್ತಬೆನ್ನ ಬಡಿಯುತ ನಗೆ ಬಿಡದಿಹ ಕಳ್ಳಾ 1ಹರಿಮಧ್ಯದಬಲೆಯರೆಳೆದೆ ಪಂಚಶರನ ಭರಕೆ ಮತಿಗಳೆದೆಹರವಿ ತುಪ್ಪಾದರೆ ನೆಗೆದೆ ಈಗಕರೆದರೆ ಬರಲೊಲ್ಲೆ ನಗದೆಚೋರತನವೇಕೆ ಗಂಭೀರತನವೇಕೆಪರಿಪರಿಹಲವಂಗವೇಕೆ ವರಕರುಣೇಕೆಸಿರಿಕಾಂತನಹದೆತ್ತ ದುರುಳತನಗಳೆತ್ತಕ್ರೂರಮುಖಕಂಜಿದಡೆ ಬಿರುದು ಪೋಯಿತಲಾ 2ತೊಂಡಮಕ್ಕಳ ಬಲವ ನೋಡಿದೆ ಬಲುಪುಂಡನಂತೆ ಕದನವನಾಡಿದೆಭಂಡತನದಲೊಬ್ಬನ ಬಡಿದೆ ದೊಡ್ಡಗಂಡಸಿನಂದದಿ ಮೇಲೋಡಿದೆಗಂಡನುಳ್ಳ ಬಾಲೆಯರ ಸದನಕೆ ಗಮಿಸಿ ಪ್ರಚಂಡತನದಿ ಮಿಂಡವೆಣ್ಣುಗಳ ಪಿಡಿದೆತಂಡ ತಂಡದೊಳು ಮುದ್ದುಕೊಡಲೀಸದಿರರು ಬೊಮ್ಮಾಂಡ ಪತಿಯಾದರಿದು ಸಲುವುದೆ ಕಳ್ಳಾ 3ಉತ್ತಮ ಮರ ನೆರಳ ನೋಡಿದೆ ಮರಹತ್ತುತಲೆ ಚಂಡನೀಡಾಡಿದೆಸುತ್ತಲಿಹ ಗೋವರ ಬೇಡಿದೆ ಅವರೆತ್ತಿ ಕೊಡದಿರೆ ಹಗೆವಿಡಿದೆಮತ್ತಮಾವನ್ನೊತ್ತಿ ಮುದುಮುತ್ತನ ಕೈವಿಡಿದೆಕತ್ತಲೆ ಹಕ್ಕಿಯ ಮಾಡಿ ದಿತಿಜರನರಿದೆಎತ್ತಣ ವೈಕುಂಠ ನಿನಗೆತ್ತಣನಂತಾಸನವೊಭಕ್ತರ ಕಾಯ್ದೆ ಆವಪಟ್ಟಲಿಹೆ ಕಳ್ಳಾ 4ಪೊಂದೊಡಿಗೆ ತೊಡದೆ ನಡುವಿರುಳೆ ಬರೆಕುಂದದೆ ವ್ರತಗೆಟ್ಟ ತರಳೆಛಂದವೇನೊ ನಿನಗೀವಾಜರೆಲೆ ಗೋವಿಂದೆರಡು ಕೈಕಟ್ಟಿ ತೋರಲೆಒಂದೊಂದುಸುರಲಿ ನಿನ್ನ ಗುಣಮಾಣಿಕದಖಣಿಅಂಧರಿಗರಿವುದೆ ಪ್ರಸನ್ವೆಂಕಟೇಶಮಂದರಘ ರಂಧ್ರಾವಳಿ ಪೊಂದಿಸಿ ನೋಡಲಾಗದುಇಂದಿರೆಯರಸನೆ ದಾಸವೃಂದವನು ಪೊರೆಯೊ 5
--------------
ಪ್ರಸನ್ನವೆಂಕಟದಾಸರು