ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಚ್ಚರಿಲ್ಲೀ ಮನಕೆ ಯೋಚಿಸಿ ನೋಡದು ಚಿದ್ಫನಕೆ ಧ್ರುವ ನುಡಿದವು ಪರಮಾರ್ಥ ನಡೆಯೊಳಗಿಲ್ಲದೆ ನುಡಿದರ್ಥ ಹಿಡಿದು ವಿಷಯದ ಸ್ವಾರ್ಥಬಡುವುದು ಶ್ರಮತಾನೆ ವ್ಯರ್ಥ 1 ಓದುದು ವೇದಾಂತ ಭೇದಿಸಿ ತಿಳಿಯದೆ ಅದರಂತ ವಾದ ಮಾಡುದು ಭ್ರಾಂತ ಸಾಧಿಸಿ ನೋಡದು ತನ್ನೊಳು ತಾ 2 ಜನಕೇಳುದು ಬುದ್ದಿ ತನಗ ಮಾಡಿಕೊಳ್ಳದು ಸಿದ್ಧಿ ಕಾಣದ್ಹೇಳುದು ಸುದ್ಧಿ ಜ್ಞಾನಕ ಬಾರದು ತಾ ತಿದ್ದಿ 3 ತೊಟ್ಟು ಉತ್ತಮ ವೇಷ ಮುಟ್ಟಿಗಾಣದೆ ಸ್ವಪ್ರಕಾಶ ತುಟ್ಟಿಲಿ ಜಗದೀಶ ಗುಟ್ಟಿಲಿ ಬಲಿವದು ಧನದಾಶೆ 4 ಎಚ್ಚರಿಸಿತು ಖೂನ ನಿಶ್ಚಲ ಮಹಿಪತಿಗೆ ಗುರುಜ್ಞಾನ ಹುಚ್ಚುಗೊಂಡಿತು ಮನ ನೆಚ್ಚಿ ನಿಜಾನಂದದ ಘನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ನಿರಂಜನ ಭಂಜನ ಗುರು ತಾರಕ ಋಷಿಮುನಿ ಜೀವನ ಧ್ರುವ ಅನಂತ ಗುಣ ಪರಿಪೂರ್ಣ ಅನಂದಮಯ ಘನ ಸ್ವಾನಂದ ಸದೋದಿತ ಸದ್ಗುರು ನಿಧಾನ ಅನಾದಿ ಮಹಿಮಾನಂದ ಸುಙÁ್ಞನಾಂಜನ ಅನೇಕ ಸಕಲಾಗುಮಪೂಜಿತ ಸೇವಿತ ತ್ರಿಭುವನ 1 ಕಲ್ಪತರು ಚಿಂತಾಯಕ ಅನಾಥ ರಕ್ಷಣ ತ್ರಿಜಗ ಜೀವನ ಅತೀತ ಸುಙÁ್ಞನ ಭಕ್ತ ಕೃಪಾನಿಧಿ ವಿಶ್ವವಂದನ 2 ಸಜ್ಜನ ಸಂಜೀವನ ಸದ್ಗುರು ಚಿದ್ಫನ ಸಗುಣ ನಿರ್ಗುಣ ಸಹಕಾರ ಸುರಮುನಿ ರಂಜನ ಮಹಿಪತಿ ತಾರಕ ಗುರು ಪತಿತಪಾವನ ಸದ್ಬ್ರಹ್ಮಾನಂದ ಸದೋದಿತ ಸದ್ಗತಿ ಸಾಧನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತನ್ನೊಳು ತಿಳಿಯೊ ಪ್ರಾಣಿ ಪುಣ್ಯಸಾಧನಿ ಧ್ರುವ ತನ್ನಿಂದಲೆ ತಾ ನೋಡುವ ಖೂನ ಚೆನ್ನಾಗ್ಯದನುಭವ ಜ್ಞಾನ ಸನ್ಮತ ಸುಖದೋರುವ ಚಿದ್ಫನ ಭಿನ್ನವಿಲ್ಲದೆ ನೋಡುವದುನ್ಮನ 1 ಮೂಲವಿಡಿದು ನಿಜ ನೋಡುವದರಿಂದ ಮ್ಯಾಲೆ ದೋರುತಲದೆ ಬ್ರಹ್ಮಾನಂದ ಕೀಲು ತಿಳಿದರೆ ಸದ್ಗುರು ಕೃಪೆಯಿಂದ ಒಲಿದು ಬಾಹನು ತಾ ಮುಕುಂದ 2 ಸೆರಗವಿಡಿದು ನೋಡುಲು ಗುರುಮುಖ ಮೂರು ಲೋಕಕ ಬಲು ಪರಮ ವಿವೇಕ ತರಳ ಮಹಿಪತಿ ಆತ್ಮಾನುಭವ ಸುಖ ದೋರುತಲದೆ ತಾ ಘನ ಕೌತುಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು