ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಟ್ಹಾಂಗಿರಬೇಕು ಮಾಂ ಇಟ್ಹಾಂಗಿರಬೇಕು ಸೃಷ್ಟೀಶ ನಮ್ಮ ಧ್ರುವ ಸಕಳವೆಲ್ಲ ಹರಿ ಸೂತ್ರವು ಇರಲಿಕ್ಕೆ | ವಿಕಳಿತಗೊಂಬುವದ್ಯಾಕೆ ಮಾಂ | ಅಖಿಳ ಭುವನಕೆಲ್ಲ ಸಾಕಿ ಸ - | ಹಕಾರ ನೊಬ್ಬ ಶ್ರೀಪತಿಯ ಮಾಂ | 1 ಯಂತ್ರಜೀವ ತಂತ್ರ ಶಿವ ಇರಲಿಕ್ಕೆ ಸ್ವ | ತಂತ್ರವೆ ನಾನೆಂಬುದ್ಯಾತಕೆ ಮಾಂ | ಚಿತ್ರ ವಿಚಿತ್ರವು ದೋರುವ ಸೂತ್ರವು | ಕರ್ತು ಸದ್ಗುರು ಸುತಂತ್ರವು ಮಾಂ 2 ಅಂತ್ರ ಬಾಹ್ಯ ವ್ಯಾಪಕನಾಗಿರಲಿಕ್ಕೆ | ತಂತ್ರ ಮಂತ್ರಗಳ್ಯಾತಕೆ ಮಾಂ | ಜಂತ್ರ ಮಾಡಿ ಜನ್ಮ ಮರಣದ ತಿರಿಹುವಾ | ಗಂತ್ರವು ಎಂದಿಗೆ ತಿಳಿಯದು ಮಾಂ 3 ಇಟ್ಹಾಂಗ ಇರಬೇಕು ಕೊಟ್ಹಾಂಗ ಕೊಂಡಿನ್ನು | ತುಟ್ಟಿಲೆ ಮಿಸುಕದೆ ಗುಟ್ಟಿಲೆ ಮಾಂ | ಹೊಟ್ಟಿಗಾಗಿ ಅಷ್ಟು ಸಾಯಾಸ | ಬಟ್ಟರೆ ಸಾರುಸದೇ ಅಟ್ಟಿಸುವದು ಮಾಂ 4 ಇಟ್ಹಾಂಗ ಇರೋ ಮಹಿಪತಿ ಸೃಷ್ಟಿಯೊಳಿನ್ನು | ಘಟ್ಟಿಗೊಂಡ ಗುರುಪಾದವು ಮಾಂ | ಮುಟ್ಟಿ ಮುದ್ರಿಸಿ ಕೃಪಾದೃಷ್ಟಿಲೆ ಹೊರೆವನು | ಕೊಟ್ಟು ನಿನಗೆ ಸ್ವಾನುಭವವು ಮಾಂ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಷ್ಟು ಹೇಳಲಿ ವೆಂಕಟಗಿರಿಯ ದೃಷ್ಟಿಗೆ ಬಹು ಸಿರಿಯ ಬೆಟ್ಟವನೆ ಮನಸಿಟ್ಟೇರಲು ಬೇಡಿದ ಇಷ್ಟಾರ್ಥಗಳ ಈಡಾಡುವ ದೊರೆಯ ಪ ಚಿತ್ರ ವಿಚಿತ್ರದ ಮಹಾದ್ವಾರ ಚಿನ್ನದ ಗೋಪುರ ಸ್ವಚ್ಛವಾದ ಸ್ವಾಮಿ ಪುಷ್ಕರಣಿ ತೀರ ಸುತ್ತಲು ಪ್ರಾಕಾರ ಹೆಚ್ಚಿನ ತೀವ್ರತವೆ ಮನೋಹರ ಮಾರುವ ವಿಸ್ತಾರ ಚಿತ್ತಜನಯ್ಯನ ಶೈಲವೆ ದೂರದಿಂ- ದ್ಹತ್ತಿ ಬರುವುದೀತನ ಪರಿವಾರ 1 ಕಟ್ಟಿದ ಉಡಿದಾರ ಉಟ್ಟಿದ್ದ ನಿರಿಜರಪೀತಾಂಬರ ಕೌಂಸ್ತುಭ ಮಣಿಹಾರ ಗಟ್ಟಿ ಕರಕಂಕಣ ಕುಂಡಲಧರ ಚತುರ್ಭುಜದಲಂಕಾರ ವಕ್ಷಸ್ಥಳದಲ್ಲಿ ಹೊಂದಿದ ಶ್ರೀ ಮಹಾ- ಲಕ್ಷ್ಮಿದೇವಿಯರಿಂದೊಲಿವ ಶೃಂಗಾರ 2 ಆಕಾಶರಾಜನ ಕಿರೀಟ ಚಿತ್ರವು ಬಹುಮಾಟ ಹಾಕಿದ್ದ ಹರಿ ಕಡೆಗಣ್ಣಿನ ನೋಟ ಭಕ್ತರ ಕುಣಿದಾಟ ಭವ ಪಡಿಪಾಟ ಬಿಡಿಸುವ ಯಮಕಾಟ ಕೋಟಿ ಜನರ ಓಡ್ಯಾಟವೆ ನಮ್ಮ ಕಿ- ರೀಟಿಯ ಸಖ ಕೇಶವನ ಮಂದಿರದೊಳ್ 3 ತಪ್ಪುಗಾಣಿಕೆಯ ಬೇಡುವ ಸರ್ಪ ಶೈಲದ ತಿಮ್ಮಪ್ಪ ಕಪ್ಪವ ಕಾಸು ಕವಡೆ ಮುಡುಪು ಹಾಕದೆ ತಾನೊಪ್ಪ ಜಪ್ಪಿಸಿ ನೋಡುವ ಜನರ ತಪ್ಪ ಹುಡಿಕ್ಯಾಡುತಲಿಪ್ಪ ಅಪ್ಪ ಮಹಿಮಾನಂತ ಮೂರುತಿ ತಾ- ನೊಪ್ಪಿದರೊಲಿದು ಕೊಡುವ ಸಾರೂಪ್ಯ 4 ದೇಶದೇಶದೊಳು ಈತನ ವಾರುತೆಯು ತುಂಬಿದ ಕೀರುತಿಯು ಆಸೆಯ ದೈವ ಈ ಮೂರುತಿಯು ಫಲ್ಗುಣ ಸಾರಥಿಯು ಲೇಸಾಗಿ ಜನರ ನೋಡುವ ರತಿಯು ಕರ್ಪುರದಾರತಿಯು ವಾಸವಾಗಿರುವ ಈ ಶೇಷಾದ್ರಿಯಲಿ ಭೀ- ಮೇಶ ಕೃಷ್ಣ ಶ್ರೀನಿವಾಸ ಕೃಪಾಳು 5
--------------
ಹರಪನಹಳ್ಳಿಭೀಮವ್ವ
ಕೇಳಿರಿ ಕೌತುಕ ಪೇಳುವೆನೀಗ ಶೀಲ ಶ್ರೀ ಗುರುಗಳ ಕರುಣದಲಿ ಪ. ವ್ಯಾಳಶಯನ ರಂಗ ತಾಳಿ ಕರುಣಿಸಿದ ಮೇಲು ಮೇಲು ಭಕ್ತಿಯ ನೀಡುತಲಿ ಅ.ಪ. ಅರಿಯದ ದೇಶದಿ ಅರಿಯದ ಕಾಲದಿ ಅರಿಯದವಸ್ಥೆಯ ಅನುಭವವು ಸಿರಿಯರಸನ ವ್ಯಾಪಾರವಿದಲ್ಲದಡೆ ನರರಿಗೆ ಸಾಧ್ಯವೆ ನಾಡಿನೊಳು 1 ಸಂಭÀ್ರಮದಲಿ ಸಮಾರಂಭವು ಕಲೆತಿರೆ ಬೆಂಬಿಡದಲೆ ರಕ್ಷಿಸುತಿರಲು ಕುಂಭಿಣಿಯೊಳು ಸ್ಥಿರವಾದ ಪದವಿಗೆ ಅಂಬುಜನಾಭನ ಕರುಣವಿದು 2 ಅಗ್ನಿಗಳೆರಡು ಕಲೆತು ಶಾಂತವಾಗಿ ಭಗ್ನವಿಲ್ಲದ ಆನಂದ ತೋರೆ ವಿಘ್ನವಾಗದ ಕಾಲಗಳೊದಗುತ ಮಗ್ನಗೈಸಿತಾನಂದದಲಿ 3 ಚಲಿಸದ ವಸ್ತುಗಳ್ ಚಲಿಸಿತು ಮತ್ತೆ ಚಲನೆಯಿಲ್ಲದೆ ಸುಸ್ಥಿರವಾಯ್ತು ಬಲು ವಿಚಿತ್ರವು ಭೂತಲದೊಳಗಿದು ನಳಿನನಾಭನ ಸಮ್ಮತವು4 ಬಿಂಬನಾಗಿ ಹೃದಂಬರ ಮಧ್ಯದಿ ಸಂಭ್ರಮಗೊಳಿಸೆಲೊ ಶ್ರೀ ವರನೆ ನಿತ್ಯ ಇಂಬುಗೊಟ್ಟು ಕಾಯೊ ಬಿಂಬ ಶ್ರೀ ಗೋಪಾಲಕೃಷ್ಣವಿಠ್ಠಲ 5
--------------
ಅಂಬಾಬಾಯಿ
ನಂಬಿದೆನೊ ನಿನ್ನ ಅಂಬುಜನಯನ ಕೃ ಪಾಂಬುಧೆ ದೃಢದಲಿ ಪ ಸಂಭ್ರಮದಲಿ ಕಿವಿ ತುಂಬುತಿರುವ ಆ ಡಂಬರ ವಚನಕೆ ಮುಂಬರಗೊಳ್ಳುತ ಅ.ಪ ನವ ಘನ ನಿಭಕಾಯ ನಿನ್ನಯ ಕರುಣಮಯ ಸಹಾಯ ವಿಲ್ಲದೆ ಬಿಗಿಯುತಿರುವ ಮಾಯಾ ಪಾಶವ ತೊರೆಯಲಳವೆ ಜೀಯಾ ನಿನ್ನಯ ದಯವ ಪಡೆದ ಪರಿಯನರುಹುವ ಯತಿವರೇಣ್ಯ ಗುರುಮಧ್ವರಾಯರ ಪರಮ ಸಮಯ ಸಾರಗಳನು ಸಂತತ ಶ್ರವಣ ಮನನ ಧ್ಯಾನಗಳಿಂದ ಪರಿಚಯ ಪಡೆದು ದು ಷ್ಟ ವಿಷಯಗಳಲಿ ಮತಿಯನು ಮುರಿಯುವಂತೆ ಕರುಣಿಸೋ ಸುಗುಣಾಲಯ 1 ನೀರಜದಳ ನೇತ್ರ ವರ ಸುಖ ಚಿನ್ಮಯೈಕ ಗಾತ್ರ ಸುಜನ ಮಿತ್ರ ಸುರವರ ಸರಸಿಜಭವ ಪುತ್ರ ರುಚಿರರ ಮುಕುಟಾಕ್ಷಪಾತ್ರ ನಿನ್ನಯ ವಿವಿಧ ಲೀಲೆಗಳು ಚಿತ್ರವಿಚಿತ್ರವು ಅರಿತೆನೆಂದು ತಿಳಿದು ಮೆರೆಯುತಲಿರುವ ನರರ ಮದವ ಮುರಿದು ದೈನ್ಯದಿಂದಲಿ ಮರೆತೆನೆಂದು ದಿನದಿನದಲಿ ಭಜಿಪರ ಪೊರೆವ ಪರಮ ಕರುಣಾರಸಮಯನೆ 2 ದೀನಭಕುತರನ್ನು ಪೊರೆಯುವ ದಾಸಿಯೆಂದು ನಿನ್ನ ಪೊಗಳುವ ಮಾನತತಿಗಳನ್ನು ಸಂತತ ಧ್ಯಾನ ಮಾಡಿ ಎನ್ನ ಕ್ಲೇಶವ ಮೌನದಿಂದ ಇನ್ನೂ ಸಹಿಸುತ ಜಾನಕೀಶ ತವ ಪಾದಕಮಲದ ರೇಣುವನ್ನು ಶಿರದಿ ಧರಿಸುತಲಿ ಅನು ಮಾನವನ್ನು ತೊರೆದು ಮುದದಿ ಸುವಿಮಲ ಜ್ಞಾನಮೂರ್ತೆ ಜ್ಞಾನಿವರ ಪ್ರಸನ್ನನೆ ನೀನೆ ಎನ್ನ ರಕ್ಷಕನೆಂದರಿಯುತ 3
--------------
ವಿದ್ಯಾಪ್ರಸನ್ನತೀರ್ಥರು
ಹರನ ಪಟ್ಟದ ರಾಣಿ ಪರಮ ಕಲ್ಯಾಣಿಕರುಣದಲಿ ಕರ್ಣೇರದು ನೋಡು ಪನ್ನಗವೇಣಿ ಪಮತಿಪ್ರೇರಕಳು ನೀನು ಪತಿಯ ಮನದ ಅಭಿಮಾನಿಸುತರು ಷಣ್ಮುಖನು ಗಜಮುಖ ಈರ್ವರುಪತಿಯು ನೆತ್ತಿಯಮೇಲೆ ಗಂಗೆಯನ್ನು ಹೊತ್ತಿಹನುಅತಿ 'ಚಿತ್ರವು ನಿನ್ನ ಸಂಸಾರಸೊಬಗು 1ತಂದೆಯ ಅಪಮಾನಹೊಂದಿ ಸ'ಸದೆ ಯಜ್ಞಕುಂಡದೊಳಗೆ ಹಾರಿ ನೀ ದೇಹಬಿಟ್ಟೆಗಂಡನಿಗೆ ಈ ಸುದ್ದಿ ಮುಟ್ಟಿದಾಕ್ಷಣ ನಿನ್ನತಂದೆಯ ರುಂಡವನು ಚೆಂಡಾಡಿದನು ಶಿವನು 2ಶಿವಶಂಕರನು ಅವನು ಬನಶಂಕರಿಯು ನೀನುಭಸಿತ ಭೂತನವನು ಶಶಿಮುಖಿಯು ನೀನುರಾಮಭಕ್ತನು ಅವನು ಪೇಮಪುತ್ಪಳಿ ನೀನುಕಮಲಾಕ್ಷಿ ಭೂಪತಿ 'ಠ್ಠಲಗೆ ಅತಿಪ್ರಿಯರು ನೀವು 3ಶ್ರೀ ದತ್ತಾತ್ರೇಯ
--------------
ಭೂಪತಿ ವಿಠಲರು
ಚಿತ್ರ ವಿಚಿತ್ರವುಹರಿವ್ಯಾಪಾರಚಿತ್ತದಿ ಚಿಂತಿಪರಿಗೆ ಪಸತ್ಯಭಾಮೆಯ ರಮಣನ ಕ್ರಿಯೆಗಳುಉತ್ತಮ ಋಷಿವರರರಿಯರೆನಲು ಬಹು ಅ.ಪಮಿತ್ರೆ ರುಕ್ಮಿಣಿ ಕೂಡುತಹರಿಇರಲು ಪಾರಿಜಾತದ ಹೂಮತ್ತೆ ಮಾಧವಗೀಯಲು ನಾರದರು ಕೌತುಕವನೆ ಕೇಳುತಸತ್ಯಭಾಮೆಯು ಕೋಪವ ತಾಳುತಲಿ ಶಚಿಪತಿಯೊಳು ಕಲಹಉತ್ತಮ ಶ್ರೀಹರಿ ಸಮರದಿ ಸೋಲಲುಮತ್ತೆ ಇಂದ್ರ ಜಯಭೇರಿಯ ಹೊಡಿಸಲುಸತ್ಯಭಾಮೆ ಸಮರದಿ ಗೆಲ್ಲುತ ಪುಷ್ಪವೃಕ್ಷಸಹಿತ ದ್ವಾರಕಿಗೈತರೆ ಬಹು 1ದುರುಳದೈತ್ಯರು ಕೂಡುತ ಗುಂಪಾಗಿ ಶ್ರೀಹರಿಯನು ಪಿಡಿಯಲುಭರದಿಂದೋಡುತ ಬರುತಿರಲದ ನೋಡಿ ಶ್ರೀಹರಿ ತಾ ತಿಳಿದುತ್ವರದಿಂದೋಡುತ ಬರುತಲಿ ಗುಹೆ ಸೇರಿ ಮುಚುಕುಂದರಾಯನಿಗೆಜರದವಲ್ಲಿ ಹೊದಿಸುತ ಮಾಯವಾಗಲುಖಳರು ಬಂದೊದ್ದರು ಮಚುಕುಂದಗೆತೆರೆದು ಕಣ್ಣ ನೋಡಲು ಖಳರೆಲ್ಲರುಉರಿದು ಭಸ್ಮವಾದರು ಕೇಳಿರಿ ಬಹು 2ಮತ್ತೊಮ್ಮೆ ಖಳರೆಲ್ಲರು ಸೇರುತಲಿ ಸತ್ಯೇಶನ ಪಿಡಿಯಲುಸುತ್ತಮುತ್ತ ಚೀರುತ ಬರುತಿರಲು ಹರಿಬೆದರಿದಪರಿಮತ್ತೋಡೂತ ಹಿಂದಕೆ ನೋಡುತ ಓಡುತಲಿ ಪರ್ವತವನೆ ಏರಲುಸುತ್ತಲು ನಿಂತರು ಖಳರೆಲ್ಲರುಹರಿಒತ್ತಿ ತುಳಿಯೆ ಪರ್ವತ ಕುಸಿಯಲು ಜಲಎತ್ತಿ ಮುಖಕೆರಚಲು ಖಳರೋಡಲುಮೆತ್ತನಿಳಿದುದ್ವಾರಕಿ ಸೇರಿದ ಬಹು 3ಚಕ್ರವ್ಯೂಹದಿ ಸಿಕ್ಕಿದ ಅಭಿಮನ್ಯು ಷಡುರಥದೊಳು ಕಾದಿದಿಕ್ಕು ದಿಕ್ಕಿಲಿ ಬಾಣದ ಮಳೆಸುರಿಸಿ ರಥಿಕ ಮಹರಥರÉೂಳುಉಕ್ಕಿ ಬರುತಿಹ ರೋಷದಿ ಹೊಯ್ದಾಡಿ ದುರುಳರ ವಶವಾಗಲುಅಕ್ಕರದಲಿ ದೇವಕಿತನಯ ತನ್ನಮಿತ್ರನ ಸುತನ ವಿಯೋಗ ದು:ಖದತಕ್ಕ ಉಪಾಯದಿ ಪರಿಹರಿಸಲು ಸಾ-ಮಥ್ರ್ಯನಾಗಿರಲು ನರನಂತೆ ನಟಿಸಿದ 4ಹತ್ತು ಹನ್ನೊಂದನೆ ಸಲ ಸಮರದಲಿ ಸರ್ವೇಶನ ಜಯಿಸಲುದೈತ್ಯದಾನವಜರೆಸುತ ಬರುತಿರಲು ಶ್ರೀಹರಿತಾ ತಿಳಿದುಉತ್ತಮ ದ್ವಾರಕಾಪುರ ರಚಿಸುತಲಿ ಜಲಮಧ್ಯದೊಳಿರಲುಪಟ್ಟದರಿಸಿ ಅಷ್ಟ ಸತಿಯರು ಸೌಳಸಾಸಿರ ಸತಿಯರ ಕೂಡುವ ಹರುಷದಿಕರ್ತೃಕಮಲನಾಭ ವಿಠ್ಠಲ ಭಕುತರಇಚ್ಛಿಸಲಿಸಲೀಪರಿ ನಟಿಸಿದ ಬಹು 5
--------------
ನಿಡಗುರುಕಿ ಜೀವೂಬಾಯಿ
ವಿದುರನ ಭಾಗ್ಯವಿದು |ಪದುಮಜಾಂಡ ತಲೆದೂಗುತಲಿದೆ ಕೊ ಪಕುರುರಾಯನು ಖಳನನುಜನು ರವಿಜನು |ಗುರುಗಾಂಗೇಯರು ಎದುರಿರಲು ||ಹರಿಸಿ ರಥವ ನಡು ಬೀದಿಯಲ್ಲಿ ಬಹ |ಹರಿಯ ತಾನು ಕಂಡನು ಹರುಷದಲಿ 1ದಾರಿಯಲಿ ಬಹ ಮುರವೈರಿಯ ಕಾಣುತ |ಹಾರುತ ಚೀರುತ ಕುಣಿಯುತಲಿ ||ವಾರಿಧಾರೆಯನು ನೇತ್ರದಿ ಸುರಿಸುತ |ಬಾರಿಬಾರಿಗೆ ಹಿಗ್ಗುವ ಸುಖದಿ 2ಆಟಕೆ ಲೋಕಗಳೆಲ್ಲಾ ಸೃಜಿಸುವ |ನಾಟಕಧರ ತನ್ನ ಲೀಲೆಯಲಿ ||ನೀಟಾದವರ ಮನೆಗಳ ಜರೆದು |ಕುಟೀರದಲಿ ಬಂದುಹರಿ ಕುಳಿತ3ಅಡಿಗಡಿಗೆ ತನ್ನ ತನುಮನ ಹರಹಿ |ಅಡಗೆಡೆಯುತ ಬಲು ಗದ್ಗದದಿ ||ನುಡಿಗಳ ತೊದಲಿಸಿ ರೋಮವ ಪುಳಕಿಸಿ |ದುಡುದುಡು ಓಡುವ ದಶದಿಶೆಗೆ 4ಕಂಗಳುದಕದಿ ಪದಂಗಳ ತೊಳೆದು |ಗಂಧವ ಪೂಸಿದ ತನುಪೂರಸಿ ||ಮಂಗಳ ಮಹಿಮನ ಚರಣಕೆರಗಿ ಪು-ಷ್ಪಂಗಳಿಂದ ಪೂಜೆಯ ಮಾಡಿದನು 5ನೋಡಿದ ಭಕುತನ ಮನದ ಹವಣಿಕೆಯು |ಪಾಡುವ ಪೊಗಳುವ ಹರುಷದಲಿ ||ನೀಡಿದ ಕರದಲಿ ಬಿಗಿದಪ್ಪಿದ ಕೊಂ -ಡಾಡಿದ ಕರುಣದಿ ಜಗದೊಡೆಯ 6ಕ್ಷೀರವಾರಿಧಿ ಶಯನಗೆ ವಿದುರನು |ಕ್ಷೀರವನುಣ ಬಡಿಸಿದ ನೋಡಾ ||ವಾರಿಜನಾಭನು ಕರಸಂಪುಟದಲಿ |ಆರೋಗಣಿಸಿದ ಘನತೆಯನು 7ಒಂದು ಕುಡಿತೆ ಪಾಲುಹರಿ ತಾ ಸವಿದು |ಮುಂದಕೆ ನಡೆಸಿದ ಧರೆಮೇಲೆ ||ಇಂದಿರೆಯರಸನ ಚರಿತೆ ವಿಚಿತ್ರವು |ಚೆಂದದಿ ಹರಿದುದು ಬೀದಿಯಲಿ 8ಕರುಣಾಕರ ಸಿರಿಹರಿ ತನ್ನ ಭಕುತರ |ಪೊರೆವನುಅನುದಿನ ಆಯತದಿ ||ಸಿರಿಯ ಅರಸು ನಮ್ಮಪುರಂದರ ವಿಠಲನ |ಶರಣರು ಧನ್ಯರು ಮೇಲೆ 9
--------------
ಪುರಂದರದಾಸರು
ಶ್ರೀ ರಾಜಸೂಯಾ ಅಗ್ರಪೂಜಾ ಸ್ತೋತ್ರ59ರಾಜನ ಭಾಗ್ಯವಿದು | ಧರ್ಮರಾಜನ ಭಾಗ್ಯವಿದು ಪರಾಜೀವಜಾಂಡದ ಏಕಸ್ವರಾಟ್ ಶ್ರೀಕೃಷ್ಣನರಾಜೀವಅಂಘ್ರಿಸುಯುಗ್ಮವರಾಜಸೂಯದಿ ತಾ ಪೂಜಿಸಿದ ಅ.ಪಚಿತ್ರವಿಚಿತ್ರವು ಸ್ತಂಭತೋರಣಗಳುರತ್ನ ಮಾಣಿಕ್ಯ ಮರುಗದದಿಚಂದ ಹೊಳೆವ ಸಭೆ ರಾಜರು ಸುತಪೋಧನರು ಕುಳಿತಿರೆ ಮಾಧವಗೆಮೊದಲು ಪೂಜೆಯ ಮಾಡಿ ಯಜÕವಾಚರಿಸಿದವಿಧಿಪೂರ್ವಕದಿ ಶ್ರಧ್ಧೆಯಲಿ1ಶಂತನುಸುತ ಗಾಂಗೇಯರು ನೆರೆದಿದ್ದಸಾಧು ಸನ್ಮುನಿಜನ ಮನದಂತೆಇಂದಿರೆಯರಸ ಶ್ರೀ ಕೃಷ್ಣಗೆ ಸಮರುಅಧಿಕರು ಇಲ್ಲದ ಜಗದೀಶವಿಧಿಈಶಾನದಿ ಸರ್ವನಿಯಾಮಕಕೃಷ್ಣನೇ ಪೂಜ್ಯನು ಎಂದರು ದೃಢದಿ 2ಗಂಗಾಜಲವ ಜಾಂಬೂನದ ಕಲಶದಿಮಾದ್ರೇಯನು ತಾ ತಂದೀಯೇಗಂಗಾಜನಕವರಾಂಗಿ ಸುವಕ್ಷ ಐಶಂಗವಾಸನ ಅರಿಶಂಖವ ಪಿಡಿದವನಅಂಘ್ರಿಸುಕಂಜದ್ವಯವ ಯುದಿಷ್ಠಿರಅವನೀಜನಗೈದ ಭಕ್ತಿಯಲಿ 3ಮನುಷ್ಯವತ್ ಲೀಲಾ ದ್ವಿಭುಜನು ಚಿನ್ಮಯಭಜಕಗೆ ಚತುರ್ಭುಜ ಕಾಣಿಸುವಜ್ಞಾನರೂಪದಿಹರಿವನಜಸಂಭವನಲಿಇಹ ಕ್ರಿಯಾರೂಪದಿ ವಾಯುನಲಿವಾಣೀ ಭಾರತಿಯಲಿ ಇಚ್ಚಾಶಕ್ತಿರೂಪದಿ ಪ್ರಚುರನು ಸರ್ವೇಶ 4ರಥನಾಭಿಯಲಿ ಅರಗಳ ತೆರದಿಸಮಸ್ತವು ಪ್ರತಿಷ್ಠಿತ ವಾಯುನಲಿಕ್ಷಿತಿಯಲಿ ಸ್ವಯಮೇವ ವಾಯುವೆಜನಿಸಿ ಜಗದಂತರಾತ್ಮ ಭೀಮನಾಗಿಯುಧಿಷ್ಠಿರನಲಿ ಸಮಾಭಿಷ್ಟನಾಗಿಹ ಸೌಮ್ಯರೂಪದಿ ಕೃಷ್ಣನ ಸೇವಿಸಲು 5ಸೌಮ್ಯರೂಪದಿ ಒಳಗಿದ್ದು ಶ್ರೀ ಕೃಷ್ಣಗೆಅಗ್ರ ಪೂಜಾದಿ ರಾಜಸೂಯತಾ ಮಾಡಿ ಸ್ವಯಂ ತನ್ನ ಅವತಾರಭೀಮಗೆ ಅಣ್ಣನೆಂದೆನಿಸುತಿಪ್ಪಧರ್ಮರಾಜನ ಕೈಯಿಂದ ಮಾಡಿಸಿದನುಭಕ್ತಾನುಕಂಪಿ ಶ್ರೀಹರಿಯ ಪ್ರೀತಿಸಿದ 6ಮನಶುಚಿಯಲಿ ಈ ನುಡಿಗಳ ಪಠಿಸುವಶ್ರವಣವ ಮಾಡುವ ಸುಜನರಿಗೆವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸಪಾಂಡವ ಪ್ರಿಯ ಶ್ರೀ ರುಕ್ಮಿಣೀಶಮನಶೋಕಾದಿ ತಾಪತ್ರಯ ನೀಗಿಸಿಯೋಗ್ಯವಾಂಛಿತವೀವ ಬಹುದಯದಿ 7
--------------
ಪ್ರಸನ್ನ ಶ್ರೀನಿವಾಸದಾಸರು