ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಧಾನ ಮಾರುತಗೆ ಪ ಮಂಗಳಂ ಪಾವನ ಮೂರುತಿಗೆ | ತ್ರಿವಿಧ ಸತ್ಕೀರ್ತಿಗೆ | ಮಂಗಳಂ ಸದ್ಗುಣ ಕೀರ್ತಿಗೆ ಅ.ಪ. ಮುಕ್ಕೋಟಿ ರೂಪನಿಗೆ ರುಗ್ಮಮಣಿ ಹಾರನಿಗೆ | ಚಿಕ್ಕವನಾಗಿ ಪುರಪೊಕ್ಕವಗೆ || ಸಿಕ್ಕಿ ವೈರಿಯ ಕೈಗೆ ರಕ್ಕಸರ ಎದೆಯಲ್ಲಿ | ನಿಕ್ಕಿಸಿದರಣದ ವಿಷ ಭೋಕ್ತನಿಗೆ 1 ವೃಕೋದರ ಭೀಮಗೆ ವಿಶೋಕನೊಡೆಯಗೆ | ಬಕ ಜರಾಸಂಧ ಕೀಚಕ ವಧೆ ಮಾಡಿದಗೆ || ಸಕಲ ದಳದೊಳಗೆ ನಾಯಕನೇ | ನೀ | ನೇ ಕಲಿಬಂಧಕ ಶಕುತಿಗೆದ್ದ ತಾರಕ ಚರಿತಗೆ 2 ಒಂದೆ ಅಕ್ಷರದಿಂದ ನಂದ ಕೊಡುವವನಿಗೆ ಒಂದೆರಡು ಮೂರಾರು ಮುರಿದವಗೆ || ಒಂದೆ ದೈವ ನಮ್ಮ ವಿಜಯವಿಠ್ಠಲ ಕೃಷ್ಣನ್ನ | ವಂದಿಸುವ ಶ್ರೀಮದಾನಂದತೀರ್ಥಗೆ 3
--------------
ವಿಜಯದಾಸ
ಕನ್ಯಾರತ್ನವನಿತ್ತನು ಹರಿಗೆ ಸತ್ರಾಜಿತರಾಯನು ಪ ಧನ್ಯನು ತಾನೆಂದೆನ್ನುತ ಯದುಕುಲರನ್ನ ಸುಗುಣ ಸಂಪನ್ನಗೆ ಹರುಷದಿ ಅ.ಪ. ಸನ್ನುತ ಚರಣನಿಗೆ ಕಮನೀಯ ಸ್ವರೂಪಗೆ ಕಮಲಾರಮಣಗೆ ಸ್ವರತನಿಗೆ ಕಾಮಿತ ಫಲದಾತಗೆ ಸುಮಬಾಣನ ಪಿತ ಸುಂದರಗೆ ಸುಮದಳನೇತ್ರನಿಗೆ ನಮಿಪ ಜನರ ಸುರದ್ರುಮನೆಂದೆನಿಸುವ ಅಮಿತ ಮಹಿಮಯುತಸಮವಿರಹಿತನಿಗೆ 1 ಬೃಂದಾರಕ ಬೃಂದ ಸುವಂದಿತಗೆ ಶ್ರೀ ಗೋವಿಂದಗೆ ಬೃಂದಾವನ ವಿಹರಣ ವಿಭವಗೆ ವಿಶ್ವಂಭರನಿಗೆ ಮಂದಾಕಿನಿ ಜನಕಗೆ ಮಾಧವಗೆ ಮರಕತಶ್ಯಾಮನಿಗೆ ಮಂದರಧರ ಮುಚುಕುಂದವರದ ಪೂ ರ್ಣೇಂದು ವದನಗುಣಸಾಂದ್ರ ಮುಕುಂದಗೆ 2 ವರಲೀಲಾ ಮಾನುಷ ವೇಷನಿಗೆ ವದನಾಂಬುಜದಲಿ ಸರಸಿಜ ಜಾಂಡವ ತೋರಿಪಗೆ ಸಾರಸನಾಭ ಪರಮಪಾವನ ಚರಿತಗೆ ಪುರುಷೋತ್ತಮನಿಗೆ ಗರುಡಗಮನ ಶ್ರೀ ಕರಿಗಿರೀಶ ಯದು ವರಕುಲಮಣಿ ಮುರಹರನಿಗೆ ಮುದದಲಿ 3
--------------
ವರಾವಾಣಿರಾಮರಾಯದಾಸರು
ಮಂಗಳಂ ನರಶಿಂಗ ಮೂರುತಿಗೆ ಲಕ್ಷ್ಮೀಸಮೇತಗೆ ವಿಹಂಗ ವಾಹನಗೆ ಅಂಗಜನಪಿತಗೆ ಅಂಗುಟದಿ ಗಂಗೆಯನು ಪಡೆದವಗೆ ಮಾ ತಂಗವರದಗೆ ಪ ವಾರಿಜಾಸನ ಮುಖ್ಯಸುರನುತಗೆ ಉ- ದಾರ ಚರಿತಗೆ ಸೇರಿದವರಘದೂರ ಮಾಡುವಗೆ ಕಾರ್ಪರ ಋಷಿಗೆ ಘೋರ ತಪಸಿಗೆ ಒಲಿದು ಬಂದವಗೆ ಅಶ್ವತ್ಥ ರೂಪಗೆ 1 ಕುಕ್ಷಿಯೊಳು ಜಗವಿಟ್ಟು ರಕ್ಷಿಪಗೆ ಕರುಣಾಕ- ಟಾಕ್ಷಗೆ ವಕ್ಷದೊಳು ಶ್ರೀ ವತ್ಸಲಾಂಛನಗೆ ದ್ರೌಪದಿ ದೇವಿಗೆ ಅಕ್ಷಯಾಂಬರವಿತ್ತು ಸಲಹಿದಗೆ ಲಕ್ಷ್ಮೀನೃಸಿಂಹಗೆ 2 ಕೃಷ್ಣವೇಣಿ ತಟವಿರಾಜಿತಗೆ ಸೃಷ್ಟ್ಯಾದಿ ಕರ್ತಗೆ ಶ್ರೇಷ್ಠತರು ಪಿಪ್ಪಲದಿ ಪ್ರಕಟಿತಗೆ ದುಷ್ಟನಿಗ್ರಹಗೆ ದ್ಯಷ್ಟ ಬಾಹುಗಳಿಂದ ಭಜಕರಿಗೆ ಇಷ್ಟಾರ್ಥಗರಿವಗೆ 3 ಹಿಂದೆ ಗೋರೂಪದಲಿ ಬಂದವಗೆ ಬಹುಸುಂದರಾಂಗಗೆ ವಂದಿಸುವೆ ಶೀ ವೇಂಕಟೇಶನಿಗೆ ಮಂದರೋದ್ಧರಗೆ ಭವ ಬಂಧ ಬಿಡಿಸುವಗೆ ಆನಂದವೀವಗೆ 4 ತರುಳ ಪ್ರಹ್ಲಾದನ್ನ ಕಾಯ್ದವಗೆ ಸುರಸಾರ್ವಭೌಮಗೆ ಶರಣು ಜನ ಮಂದಾರನೆನಿಸುವಗೆ ಭೂಸುರರ ಪೊರಿವಗೆ ಧರಣಿಯೊಳು ಕಾರ್ಪರ ಸುಮಂದಿರಗೆ ಶಿರಿನಾರಶಿಂಹಗೆ 5
--------------
ಕಾರ್ಪರ ನರಹರಿದಾಸರು
ಮಂಗಳ ಮಾಧವಗೆ ಮಾರಮಣಗೆ ಮಂಗಳ ಶ್ರೀಧರಗೆ ಪ ಭಂಗ ಭವಗಜ ಸಿಂಗ ಕರುಣಾಪಾಂಗ ಶ್ರೀಶಗೆ ಗಂಗಾಜನಕಗೆ ತುಂಗ ಮಹಿಮಗೆ ಭಂಗರಹಿತಗೆ ಅನಂಗಪಿತನಿಗೆ 1 ಭುವನ ಮೋಹನ ಸುಮನಸರ ಪ್ರಿಯ ಕವಿಜನರ ಹೃದ್ಗøಹ ನಿವಾಸಗೆ ನವನವ ಲೀಲೆಗಳ ತೋರ್ದಗೆ ನವರತುನದಾರತಿಯ ಬೆಳಗಿರೆ 2 ಗರುಡಗಮನಗೆ ಉರಗಶಯನಗೆ ಪರಮಪುರುಷಗೆ ಪುಣ್ಯಚರಿತಗೆ ಉರಗಗಿರಿವಾಸನಿಗೆ ದೇವಗೆ ಸುರರೊಡೆಯ ಶ್ರೀ ಶ್ರೀನಿವಾಸಗೆ3 ಸೌಮ್ಯನಾಮ ಸಂವತ್ಸರದಂದು ನೇಮದಿಂದ ಭಜಿಪ ಭಕುತರ ಕಾಮ್ಯಕರ್ಮವ ತರಿದು ಪೊರೆಯುವ ಕಮಲನಾಭ ವಿಠ್ಠಲನ ಪ್ರತಿದಿನ4
--------------
ನಿಡಗುರುಕಿ ಜೀವೂಬಾಯಿ
ವಂದ್ಯಗೆ ನಮೋ ನಮೋ ನಮೋ ನಮೋ ಪ ದೇಶಿಕವರ್ಯಗೆ ನಮೋ ನಮೋ ದೋಷವಿದೂರಿಗೆ ನಮೋ ನಮೋ ಭಾಸುರ ಚರಿತಗೆ ನಮೋ ನಮೋ 1 ವಸುಧೀಂದ್ರರ ಕರಜಾತನಿಗೆ ವಸುದಿಜೀವರ ಸಂಪ್ರೀತನಿಗೆ ದಶದಿಶೆಯೊಳು ವಿಖ್ಯಾತನಿಗೆ ಕಸವರಭಾಂಗ ಪ್ರಖ್ಯಾತನಿಗೆ 2 ಮರುತ ಮತಾಂಬುಧಿ ಸೋಮನಿಗೆ ತಿಮಿರ ತರಣಿ ನಿಭಗೆ ವರದೇಶ ವಿಠಲನ ಸ್ಮರಿಸುತ ಲಿಂಗಸು - ಗುರುಸುಕ್ಷೇತ್ರ ನಿವಾಸನಿಗೆ 3
--------------
ವರದೇಶವಿಠಲ
ಹಾರುವಗೆ | ಮರದ ಮೇಲಿರುವಗೆ | ಮುದ್ರಿಕೆಯ ತೋರುವಗೆ | ವನ ಕೀರ್ತಿ ತೋರುವವಗೆ | ಹೀರುವವಗಾಕ್ಷಣದಿ | ಚೀರುವಗೆ ಅರ್ಭಟಿಸಿ | ಶುಭ ಮಂಗಳಂ 1 ವೃಕೋದರ ಭೀಮಗೆ | ಅಶೋಕದೊಡೆಯಗೆ | ಬಕಜರಾಸಂಧ ಕೀಚಕವಧನಿಗೆ | ಸಕಲ ದಳದೊಳಗೆ | ನಾಯಕನೆನೆಸಿ ಕಲಿಯ | ಬಂಧಕ ಶಕುತಿಗೆದ್ದ ಲೌಕಿಕ ಚರಿತಗೆ | ನಿತ್ಯ ಶುಭಮಂಗಳಂ2 ಒಂದೆ ಅಕ್ಷರದಿಂದ ಆನಂದ ಕೊಡುವವನಿಗೆ | ಒಂದೆರಡು ಈರೈದು ಮುರಿದವನಿಗೆ | ನಿತ್ಯ ಶುಭಮಂಗಳಂ3
--------------
ವಿಜಯದಾಸ
ಮಂಗಲ ಮೂರುತಿಗೇ ನಮೋ ನಮೋ ಹರೀಮಂಗಲ ಚರಿತಗೆ ನಮೋ ನಮೋಪರಂಗಾ ಕೃಪಾಂಗಾ ಶ್ರೀರಂಗಾ ನರಸಿಂಹಗೆಅಂಗಾ ಶೃಂಗಾರನಿಗೆ ನಮೋ ನಮೋಅ.ಪಶೇಷಶಯನ ವಿಧೀಶ ಸುರಾರ್ಚಿತಕೇಶವ ತ್ರೈಜಗದೀಶ ಜಲಜನಾಭದಾಸರ ಸಾಸಿರ ದೋಷ ವಿನಾಶನಶ್ರೀಶ ಸಂದೇಶಗೆ ನಮೋ ನಮೋ1ಮಾರಜನಕದೈತ್ಯಾರಿ ಚಕ್ರಾಂಕಿತಸಾರಸಾಕ್ಷ ಯತಿ ವಾರವಂದಿತಚರಣಹಾರಾ ಹೀರಾವಳಿ ಕೇಯೂರವ ಧರಿಸಿದಧೀರ ಉದಾರಿಗೆ ನಮೋ ನಮೋ2ಮಂದರೋದ್ಧರ ಭವಬಂಧ ವಿಮೋಚನಇಂದಿರೆಪತಿ ಮಂದಾಕಿನಿಪಿತ ದೇವಾಸಿಂಧುಮಂದಿರದಲಿ ನಿಂದ ಗೋವಿಂದಗೆನಂದನ PÀಂದಗೆ ನಮೋ ನಮೋ3<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ