ಒಟ್ಟು 12 ಕಡೆಗಳಲ್ಲಿ , 9 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುರಾಸುರಾರ್ಚಿತ ಸರೋಜಲೋಚನ ಸರಾಗದಿಂದೆನ್ನನೀಕ್ಷಿಸೈ ಪರಾಪರೇಶನೆ ಪರಾತ್ಪರನೆ ನೀ ಪರಾಕುಮಾಡದೆ ಪಾಲಿಸೈ ಪ ವಿರಾಜಮಾನ ಸುವಿರಾಜವಾಹನ ವಿರಾಟ್ಪುರುಷ ವಿಶ್ವಂಧರ ಕರಾರವಿಂದದಿ ಕರಾದಿಗಳ ಪಿಡಿ ಧರಾತಿಮರ್ದನ ಧುರಂಧರ 1 ಧರಾಧರಣಿಪಟು ಧರಾಧರಾಧಿಪ ಧುರಾವಹನ ದುರ್ಧರ್ಷಣ ಧರಾಮರರ ಬಹುಪರಾಭವವ ಬಲು ಸರಾಗದಲಿ ನಿರ್ವಾಪಣ 2 ಜರಾಮರಣಗಳ ನಿರಾಕರಿಸಿ ವಸುಂಧರಾಭರಣ ಗುಣಭೂಷಣ ಸುರಾರಿಮರ್ದನ ಶರಾಸನಾಂಚಿತ ಕರಾನಿಹಿತ ಮಣಿಕಂಕಣ 3 ಶಿರೀಷ ಕುಸುಮದ ಸರಿಸುಕೋಮಲಶರೀರ ನಿನ್ನದು ಈ ಪರಿ ಸಿರಿಯುದರದೊಳೇ ಸಿರಿಯಧರಿಸಿದ ಪರಿಯದೆಂತುಟೋ ಕೇಳ್ ಹರಿ 4 ಪಯೋಧಿತನಯಾ ವಯೋಸುರೂಪನೆ ದಯಾನಿಧೇ ಧರ್ಮಾತ್ಮನೆ ದಯಾರಸದಿ ಹೃತ್ಪಯೋಜಮಧ್ಯದಿ ನಿಯಾಮಿಸುವ ನಿರ್ಮಾಯನೆ 5 ವರೇಣ್ಯ ಸಜ್ಜನ ಶರಣ್ಯ ಪುಲಿಗಿರಿಯರಣ್ಯ ಮಧ್ಯವಿರಾಜಿತ ಹಿರಣ್ಮಯಾಂಬರ ಹಿರಣ್ಯಕಾಂತಕ ಹಿರಣ್ಯಗರ್ಭಸುಪೂಜಿತ 6 ವ್ಯಾಘ್ರನೆಂಬುವತ್ಯುಗ್ರ ದೈತ್ಯನಂ ನಿಗ್ರಹಗೈದ ಮಹಾತ್ಮನೆ ಶೀಘ್ರದಿ ಭಕ್ತಾನುಗ್ರಹಮಾಳ್ಪ ಸುರಾಗ್ರಗಣ್ಯ ಪುಣ್ಯಾತ್ಮನೆ 7 ಸುರರು ನರರು ನಿನ್ನರಿಮೆಯನರಿಯದೆ ನಿರುತವು ಸನ್ನುತಿಗೈವರೆ ಪರಮಪುರುಷ ಸುಖಕರ ನೀನೆನ್ನುತ ಪರಿಪರಿ ನಿನ್ನನೆ ಪೊಗಳ್ವರೆ 8 ಮೂಜಗ ಮಾಡುವ ಪೂಜೆಯಿಂದ ನೀನೀ ಜಗದಲಿ ಒಲಿದಿರ್ಪೆಯ ಮೂಜಗ ಪೂಜಿಪ ವ್ಯಾಜದಿಂದ ನಿಜಪೂಜೆಯ ನೀ ಕೈಗೊಂಬೆಯ 9 ನಿಜಪದದೊಳು ನೀನಜಭವ ಮುಖಸುರವ್ರಜಗೋಚರನಾಗಿಲ್ಲವೈ ಸುಜನರ ಪೊರೆಯವ ನಿಜಮತಿಯಿಂದಲಿ ತ್ರಿಜಗಕ್ಕೆ ಗೋಚರನಾಗಿಹೈ10 ನಿತ್ಯತೃಪ್ತ ನೀನತ್ಯುತ್ತಮ ನಿಜಭೃತ್ಯನಮತ್ರ್ಯನು ಮೋದದಿ ನಿತ್ಯದಿ ನಿನ್ನತ್ಯುತ್ತಮ ಪದದೊಳು ಭಕ್ತಿಯ ಪಾಲಿಸು ನೇಮದಿ 11 ಧರಣಿಯೊಳುರುತರ ಮೆರೆಯುವ ಫಣಿಭೂ ಧರದೊಳು ನಿರುತವು ಭಕ್ತರ ಸಿರಿವಲ್ಲಭ ವರದ ವಿಠಲ ಕರುಣಾಕರ 12
--------------
ವೆಂಕಟವರದಾರ್ಯರು
ಕರುಣಿಸಬಾರದೆ ಕಂಜನಾಭನೆ ಕೈಯ ಮುಗಿವೆನಯ್ಯಾಪ. ವರ ಫಣಿಗಿರಿ ಸುಸ್ಥಿರಮಂದಿರ ಶ್ರೀ ಗುರು ಜನಾರ್ದನಾಮರಗಣ ಪಾಲಕಅ.ಪ. ಅಪರಾಧಗಳಾಲೋಚಿಸುವರೆ ಸರೀ- ಸೃಪರಾಜನಿಗಳವೆ ಕೃಪೆಯಿಂದಲಿ ಸಂರಕ್ಷಿಸದಿದ್ದರೀ- ಯಪಕೀರ್ತಿಯು ಶ್ರೀಹರಿ ನಿನಗಲ್ಲವೆ 1 ಪುರಂದರ ಮುಖ್ಯ ದಾಸರಂತೆ ಗುಣವೆನಗಿನಿತಿಲ್ಲ ಜನರ ವಿಡಂಬನಕೆ ದಾಸನಾದರೂ ಘನ ಕೃಪಾರ್ಣವನೆ ಕನಕಾಂಬರಧರ2 ಲಕ್ಷ ಮಾತ್ಯಾತಕೆ ಲಕ್ಷ್ಮೀನಾರಾಯಣ ರಕ್ಷಾಮಣಿ ನೀನೆ ಪಕ್ಷೀಂದ್ರವಾಹನ ಪಾಪವಿಮೋಚನ ತ್ರ್ಯಕ್ಷಮಿತ್ರನೆನ್ನಕ್ಷಿಗೋಚರನಾಗಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಚರಣದಾಸರ ಸದುಹೃದಯ ನಿವಾಸನೆ ಸಿರಿರಾಮ ಪರಮ ಪಾವನೆ ವರಜಾಹ್ನವೀ ಜನಕನೆ ಸಿರಿರಾಮ ಪ ಶರಣಜನರ ಮೇಲ್ನುಡಿಯೋಳ್ಸಂಚಾರನೆ ಸಿರಿರಾಮ ನೆರೆನಂಬಿ ಭಜಿಪರ ಭವಮಲಹರಣನೆ ಸಿರಿರಾಮ ಕರುಣದೊದೆದು ಯುವತಿಕುಲವನುದ್ಧರಿಸದನೆ ಸಿರಿರಾಮ ವರದ ವಾಸುಕಿಶಾಯಿ ಜಗದೇಕ ಬಂಧುವೇ ಸಿರಿರಾಮ 1 ಧುರಧೀರವಾಲಿಯ ಗರುವನಿವಾರನೆ ಸಿರಿರಾಮ ಮರೆಬಿದ್ದ ಸುಗ್ರೀವನ ದು:ಖಪರಿಹಾರನೆ ಸಿರಿರಾಮ ಪರಮಭಕ್ತ್ಹನುಮಗೆ ಕರವಶನಾದನೆ ಸಿರಿರಾಮ ಶರಣುಬಂದಸುರಗೆ ಸ್ಥಿರಪಟ್ಟವಿತ್ತನೆ ಸಿರಿರಾಮ 2 ಶರಧಿಮಥನಮಾಡಿ ಸುರರ ರಕ್ಷಸಿದನೆ ಸಿರಿರಾಮ ಹರನಕೊರಳ ಉರಿ ಕರುಣದ್ಹಾರಿಸಿದನೆ ಸಿರಿರಾಮ ವರಗಿರಿನಂದನೆಮನ ಸೂರೆಗೈದನೆ ಸಿರಿರಾಮ ಸರುವದೇವರದೇವ ಅದ್ಭುತಮಹಿಮನೆ ಸಿರಿರಾಮ 3 ಕರಿಯ ರಕ್ಷಣೆಗಾಗಿ ಕಾಸಾರಕ್ಕಿಳಿದನೆ ಸಿರಿರಾಮ ತರುಣಿಮೈಗಾವಗೆ ಚರನಾಗಿ ನಿಂತನೆ ಸಿರಿರಾಮ ಚರಣದಾಸರಮನೆ ತುರಗವ ಕಾಯ್ದನೆ ಸಿರಿರಾಮ ಪರಮಭಾಗವತರನರೆಲವ ಬಿಟ್ಟಿರನೆ ಸಿರಿರಾಮ 4 ಅನುಪಮ ವೇದಗಳಗಣಿತಕ್ಕೆ ಮೀರಿದನೆ ಸಿರಿರಾಮ ಸನಕಸನಂದಾದಿ ಮನುಮುನಿ ವಿನಮಿತನೆ ಸಿರಿರಾಮ ವನರುಹ ಬ್ರಹ್ಮಾಂಡ ಬಲುದರದಿಟ್ಟಾಳ್ವನೆ ಸಿರಿರಾಮ ಮನಮುಟ್ಟಿ ಭಜಿಪರ ಘನಮುಕ್ತಿ ಸಾಧ್ಯನೆ ಸಿರಿರಾಮ 5
--------------
ರಾಮದಾಸರು
ನಮೋ ನಮೋ ನಾರದವಂದ್ಯ ನಮೋ ನಮೋ ನಿಗಮನಿಕರವೇದ್ಯ ಪ ಭವಭಯರೋಗವೈದ್ಯ ಅ.ಪ ಹರಿಚರನಾಗಿ ವೇದವ ತಂದೆ ಹರಿಪತಿಯನು ಮೇಲಾಂತು ನಿಂದೆ ಹರಿವಂಶಜರನೆಲ್ಲರ ತರಿದೆ ಹರಿವಾಹಿನಿಯ ನೀನಾಳ್ದೆ ಹರಿಸುತಗೊಲಿದು ಹೆಂಗಳ ವ್ರತಕೆಡಿಸಿದೆ ಹರಿವಾಹನ ಜಯತು 1 ಶಿವವಾಹನ ಧ್ವಜರೂಪ ಶಿವಧರನೆನಿಪ ಯುಗ ಪ್ರತಾಪ ಶಿವಭಕ್ತನ ಕೊಂದೆ ಶಿವನ ರೂಪಾದೆ ನೀಂ ಪದಕಡಿಯನಿಟ್ಟೆ ಶಿವವೈರಿಯ ರಿಪುವೆನಿಸಿದೆ ಶಿವನ ಬಿಲ್ಲನು ಬಾಗಿಸಿ ಮುರಿದೆ ಶಿವನ ತುಳಿದೆ ನೀ ಶಿವನಿಗೆ ಸಖನಾದೆ ಶಿವವಾಹನ ಜಯತು2 ಸುರಜ್ಯೇಷ್ಠನಿಗೆ ಶ್ರುತಿಯನಿತ್ತೆ ಸುರರಿಗೆ ಸುಧೆಯನು ಕರೆದೆರೆದೆ ಸುರನಗವರ್ಣ ಹಿರಣ್ಯಾಕ್ಷನ ಕೊಂದೆ ಸುರಸಿಂಧುವಪಡೆದೆ ಸುರಭಿಯ ನೆವದಿ ಭೂಪರನೆಲ್ಲ ತರಿದೆ ಸುರರಿಪು ದಶವದನನ ತರಿದೆ ಸುರನಗವರ್ಣ ಸರ್ವಜ್ಞ ಹಯಾರೂಢ ಸುರಪುರ ಲಕ್ಷ್ಮೀಶ 3
--------------
ಕವಿ ಲಕ್ಷ್ಮೀಶ
ಬಾರೋ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವತೋರೋ ಎನಗೆ ಮುಕುಂದ ನಲಿದಾಡು ಮನದಲಿಮಾರಪಿತ ಆನಂದನಂದನ್ನ ಕಂದ ಪ ಭವ ಘೋರ ನಾಶನವಾರಿಜಾಸನ ವಂದ್ಯ ನೀರಜಸಾರ ಸದ್ಗುಣ ಹೇ ರÀಮಾಪತೆ ಅ.ಪ. ನೋಡೋ ದಯದಿಂದೆನ್ನ-ಕರಪದುಮ ಶಿರದಲಿನೀಡೋ ಭಕ್ತಪ್ರಸನ್ನ-ನಲಿದಾಡೊ ಮನದಲಿಬೇಡಿಕೊಂಬೆನೊ ನಿನ್ನ-ಆನಂದ ಘನ್ನಮಾಡದಿರು ಅನುಮಾನವನು ಕೊಂ -ಡಾಡುವೆನು ತವ ಪಾದಮಹಿಮೆಗಳನುಜೋಡಿಸುವೆ ಕರಗಳನು ಚರಣಕೆಕೂಡಿಸೊ ತವ ದಾಸಜನರೊಳು 1 ಹೇಸಿ ವಿಷಯಗಳಲ್ಲಿ-ತೊಳಲ್ಯಾಡಿ ನಾ ಬಲುಕ್ಲೇಶ ಪಡುವುದು ಬಲ್ಲಿ-ಘನಯುವತಿಯರ ಸುಖಲೇಸು ಎಂಬುದನ್ನು ಕೊಲ್ಲಿ-ಆಸೆ ಬಿಡಿಸಿಲ್ಲಿಏಸು ಜನುಮದ ದೋಷದಿಂದಲಿಈಸುವೆನು ಇದರೊಳಗೆ-ಇಂದಿಗೆಮೋಸವಾಯಿತು ಆದುದಾಗಲಿಶ್ರೀಶ ನೀ ಕೈಪಿಡಿದು ರಕ್ಷಿಸು 2 ನೀನೆ ಗತಿಯೆನಗಿಂದು ಉದ್ಧರಿಸೊ ಬ್ಯಾಗನೆದೀನ ಜನರಿಗೆ ಬಂಧು-ನಾ ನಿನ್ನ ಸೇವಕಶ್ರೀನಿವಾಸ ಎಂದೆಂದು-ಕಾರುಣ್ಯ ಸಿಂಧುಪ್ರಾಣಪತಿ ಹೃದಯಾಬ್ಜಮಂಟಪ-ಸ್ಥಾನದೊಳಗಭಿವ್ಯಾಪ್ತ ಚಿನುಮಯಧ್ಯಾನಗೋಚರನಾಗಿ ಕಣ್ಣಿಗೆಕಾಣಿಸುವೆ ಶ್ರೀರಂಗವಿಠಲ 3
--------------
ಶ್ರೀಪಾದರಾಜರು
ಲಕ್ಷ್ಮಿ ನರಹರಿ ವಿಠಲ | ರಕ್ಷಿಸೋ ಇವಳ ಪ ತ್ರ್ಯಕ್ಷ ಬಿಂಬನೆ ಸ್ವಾಮಿ | ಪಕ್ಷಿವಹ ಕರುಣಾಕಟಾಕ್ಷ ದಿಂದೇಕ್ಷಿಸುತ | ಕಾಪಾಡೊ ಹರಿಯೇ ಅ.ಪ. ಅಕ್ಷಿ ಮೂರುಳ್ಳ ನಿಟಿ | ಲಾಕ್ಷನೈ ರೂಪದಲಿಅಕ್ಷಿ ಗೋಚರನಾಗಿ | ಸ್ವಚ್ಛ ತೈಜನನೇದೀಕ್ಷೆ ದಾಸತ್ವದಲಿ | ಲಕ್ಷ್ಯವಿಟ್ಟಿಹಳ ಉ-ಪೇಕ್ಷಿಸದೆ ದಯತೋರ್ದೆ | ಲಕ್ಷ್ಮಿ ನರಸಿಂಹಾ 1 ಮನ್ಯು ಸೂಕ್ತದಿಂ ಬ | ಹ್ಪನ್ನ ಭೊಕ್ತøವಿನಿಂದಚೆನ್ನಾಗಿ ಸೇವಿತನೆ | ಅನ್ನಂತ ಮಹಿಮಾಬಿನ್ನವಿಪೆ ನಿನಗೆ ಕಾ | ರುಣ್ಯ ಮೂರುತಿ ಹರಿಯೆಕನ್ಯೆಗಭಯದನೆ ಆ | ಪನ್ನ ಪರಿಪಾಲಾ 2 ಲೌಕಿಕದಿ ಬಹುಪರಿಯ | ಸೌಖ್ಯಗಳ ನೀನಿತ್ತುಪ್ರಾಕ್ಕು ಕರ್ಮವ ಕಳೆದು | ಕಾಪಾಡೊ ಹರಿಯೇ |ಚೊಕ್ಕ ಭಕ್ತಿ ಜ್ಞಾನ | ಅಕ್ಕರದಿ ತವಪದದಿಉಕ್ಕುವ ಪರಿಮಾಡು | ರಕ್ಕಸಾಂತಕನೇ 3 ನೀಚೋಚ್ಚ ತರತಮವು | ಪಂಚ ಬೇದವನರುಹಿಸಂಚಿತವ ದಹಿಸೂವ | ಹಂಚಿಕೆಯನಿತ್ತೂಅಂಚೆವಹಪಿತನೆ ಹೃ | ತ್ಪಂಕಜದಿ ನಿನಕಾಂಬಸಂಚಿಂತನೆಯ ನೀಯೊ | ಪಂಚ ಪ್ರಾಣಾತ್ಮಾ 4 ಪಾವಮಾನಿಯ ಪ್ರೀಯ | ಸಾರ್ವಕಾಲದಿ ನಿನ್ನಪಾವನ ಸ್ಮøತಿಯಿತ್ತು | ಭಾವದಲಿ ತೋರೋ |ನೀವೊಲಿಯುತಿವಳಿನ್ನ | ಕಾವುದೆನೆ ಬಿನ್ನೈಪೆಗೋವಿದಾಂಪತಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವಸುಮತೀಶ ವಿಠ್ಠಲನೇ ನೀನಿವಗೆ | ಎಸೆವ ಜ್ಞಾನವನಿತ್ತುಹಸನಾಗಿ ಕಾಪಾಡಬೇಕೊ ಹರಿಯೆ ಪ ಕುಸುಮ ಸಂಭವ ಪಿತನೆ | ವಾಸುದೇವನೆ ಕೃಷ್ಣನಸು ನಗೆಯಲೀ ನಿನ್ನ ಉಪಾಸನವ ಕೊಡೊ ಹರಿಯೆ ಅ.ಪ. ತರತಮವು ಪಂಚಭೇದದ ಜ್ಞಾನ | ನಿರತಿಶಯ ಹರಿಭಕ್ತಿಗುರುಭಕ್ತಿಗಳ ಕರುಣಿಸೀ ಕಾಪಾಡಬೇಕೊ ಹರಿಯೇ |ವರ ಪ್ರದಾಯಕ ಸ್ವಾಮಿ ವೈರಾಗ್ಯ ಭಾಗ್ಯಗಳ ನೀನಿವರಿಗಿತ್ತುಕರುಣದಿಂ ಕಾಪಾಡಬೇಕೊ ಹರಿಯೇ 1 ನಿನ್ನ ಮೊರೆ ಹೊಕ್ಕವನ | ಇನ್ನು ಕೈ ಪಿಡಿಯುವುದುನಿನ್ನ ಧರ್ಮವಲ್ಲವೆ ಸ್ವಾಮಿ ರಾಮಚಂದ್ರ |ನನ್ನೆಯಿಂದಲಿ ಇವನ ಪಾಪಗಳ ಪರಿಹರಿಸಿನಿನ್ನ ಪದ ಸೇವಕನ ಮಾಡೊ ವೈಕುಂಠ ಪತಿಯೇ 2 ಖಗವರಧ್ವಜ ದೇವ ಜಗಜ್ಜನ್ಮಾದಿ ಕಾರಣನೆಬಗೆಬಗೆಯ ಮಹಿಮೆಗಳ ತೋರಿ ಕಾಪಾಡೊ ಹರಿಯೇ |ಸುಗುಣ ಮೂರುತಿ ದೇವ ತ್ರಿಗುಣ ವರ್ಜಿತ ಸ್ವಾಮಿಹಗರಣಗಳೀಯದಲೆ ಕಾಪಾಡೊ ಹರಿಯೇ 3 ಇಷ್ಟಮೂರುತಿ ದೇವ ಸೃಷ್ಟ್ಯಾದಿ ಕಾರ್ಯಗಳದೃಷ್ಟಿಯಿಂದಲಿ ಮಾಳ್ಪ ಮಹಮಹಿಮ ಹರಿಯೇ |ಕೃಷ್ಣಮೂರುತಿ ಹೃದಯ ಅಷ್ಟದಳ ಮಧ್ಯದಲಿದೃಷ್ಟಿಗೋಚರನಾಗಿ ಕಾಪಾಡೊ ಹರಿಯೇ 4 ಮೂರ್ತಿ ಹಯ ಮೊಗಾತ್ಮಕನೇ |ವೇದಾಣಿ ವಂದ್ಯ ಗುರುಗೋವಿಂದ ವಿಠ್ಠಲನೇನೀ ದಯದಿ ಕೈ ಪಿಡಿದು ಕಾಪಾಡೊ ಹರಿಯೇ 5
--------------
ಗುರುಗೋವಿಂದವಿಠಲರು
ಸರಾಗದಿಂದೆನ್ನ ನೀಕ್ಷಿಸೈ ಪರಾಪರೇಶನೆ ಪರಾತ್ವರನೆ ನೀ-ಪರಾಕು ಮಾಡದೆ ಪಾಲಿಸೈ ಪ ವಿರಾಜಮಾನ ಸುವೀರಾಜವಾಹನ ವಿರಾಟ್ಪುರುಷ ವಿಶ್ವಂಭರ ಕರಾರವಿಂದದಿ ಕರಾದಿಗಳ ಪಿಡಿದರಾತಿ ಮರ್ದನ ಧುರಂಧರ 1 ಧರಾಧರಣಿಪಟು ಧರಾಧರಾಧಿಪ ಧುರಾವಹನ ದುರ್ಧರ್ಷಣ ಧರಾಮರರ ಬಹು ಪರಾಭವವ ಬಲು ಸರಾಗದಲಿ ನಿರ್ವಾಪಣ 2 ಜರಾಮರಣಗಳ ನಿರಾಕರಿಸಿ ವಸುಂಧರಾ ಭರಣ ಗುಣಭೂಷಣ ಸುರಾರಿ ಮರ್ದನ ಶರಾಸನಾಂಚಿತ ಕರಾನಿಹಿತ ಮಣಿಕಂಕಣ 3 ಶಿರೀಷ ಕುಸುಮದ ಸರೀಸುಕೋಮಲ ಶರೀರ ನಿನ್ನದು ಈಪರಿ ಪರಿಯದೆಂತುಟೋ ಕೇಳ್ಹರಿ 4 ಧಯಾನಿಧಿಯೇಧರ್ಮಾತ್ಮನೆ ನಿಯಾಮಿಸುವ ನಿರ್ಮಾಯನೆ 5 ವರೇಣ್ಯಸಜ್ಜನ ಶರಣ್ಯಪುಲಿಗಿರಿಯರಣ್ಯಮಧ್ಯ ವಿರಾಜಿತ ಹಿರಣ್ಯಯಾಂಬರ ಹಿರಣ್ಯಕಾಂತಕ ಹಿರಣ್ಯಗರ್ಭಸುಪೂಜಿತ6 ವ್ಯಾಘ್ರನೆಂಬುವತ್ಯುಗ್ರದೈತ್ಯನಂ ನಿಗ್ರಹಗೈದ ಮಹಾತ್ಮನೆ ಶೀಘ್ರದಿ ಭಕ್ತಾನುಗ್ರಹಮಾಳ್ಪಸುರಾಗ್ರಗಣ್ಯ ಪುಣ್ಯಾತ್ಮನೆ 7 ನಿರುತವು ಸನ್ನುತಿಗೈವರೆ ಪರಿಪರಿ ನಿನ್ನನೆ ಪೊಗಳ್ವರೆ 8 ನೀಜಗದಲ್ಲಿ ಒಲಿದಿರ್ಪೆಯ ನೀ ಕೈಗೊಂಬೆಯ 9 ನಿಜಪರದೊಲುನೀ ನಜಭವಮುಖಸುರವ್ರಜ- ಗೋಚರನಾಗಿಲ್ಲವೈ ತ್ರಿಜಗಕ್ಕೆ ಗೋಚರನಾಗಿಹೈ 10 ನಿತ್ಯತೃಪ್ತನೀನತ್ಯುತ್ತಮ ನಿಜ ಭೃತ್ಯನಮತ್ರ್ಯನು ಮೋದದಿ ನಿತ್ಯದಿ ನಿನ್ನತ್ಯುತ್ತಮ ಪದದೊಳು ಭಕ್ತಿಯ ಪಾಲಿಸು ನೇಮದಿ 11 ಫಣಿಭೂಧರದೊಳು ನಿರುತವು ಭಕ್ತರ ಕರುಣದಿ ಪೊರೆಯುವ ಧೊರೆ ಸಿರಿವಲ್ಲಭವರದ ವಿಠಲ ಕರುಣಾಕರ 12
--------------
ಸರಗೂರು ವೆಂಕಟವರದಾರ್ಯರು
ಹರಿಯೇ ಪೊರೆಯದಿಹುದು ಸರಿಯೆ | ಎನ್ನ ಮರೆತೆ ಯಾತಕೊ ನಾನರಿಯೆ ಪ ಸೂಕರ ಯೋನಿಯಲಿ ಬಂದು | ನಾನು ಮನುಜನಾಗಿ ನಿಂದಿಹೆನಿಂದು ನಿನ ಬೇಡಿಕೊಂಬೆ ದಯಸಿಂಧು | ಎನ್ನ ಪುನಹ ಪುಟ್ಟಿಸಬೇಡವೆಂದು 1 ಮನಸು ವಚನ ಕಾಯಗಳಿಂದ | ನಿನ್ನ ಅನುಚರನಾಗಿಹೆ ಮುದದಿಂದ ದನುಜಾರಿ ಬಿಡಿಸೆನ್ನ ಬಂಧ | ಭವ- ಜನಿತವಾಗಿಹ ಜಾಲದಿಂದ 2 ಹಲವು ಮಾತೇಕೊ ಮಾಲೋಲ | ಮೌನಿ ಅಲವ ಬೋಧಾರ್ಚಿತ ಗೋಪಾಲ ಕಲುಷ ರಾಸಿಗಳನೆಲ್ಲ ಕಳೆದು ಸಲಹೈಯ್ಯಾ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ಕರುಣಿಸಬಾರದೆ ಕಂಜನಾಭನೆ ಕೈಯ ಮುಗಿವೆನಯ್ಯಾ ಪ.ವರಫಣಿಗಿರಿ ಸುಸ್ಥಿರಮಂದಿರ ಶ್ರೀಗುರುಜನಾರ್ದನಾಮರಗಣ ಪಾಲಕಅ.ಪ.ಅಪರಾಧಗಳಾಲೋಚಿಸುವರೆ ಸರೀ-ಸೃಪರಾಜನಿಗಳವೆಕೃಪೆಯಿಂದಲಿ ಸಂರಕ್ಷಿಸದಿದ್ದರೀ-ಯಪಕೀರ್ತಿಯು ಶ್ರೀಹರಿ ನಿನಗಲ್ಲವೆ 1ಕನಕಪುರಂದರಮುಖ್ಯ ದಾಸರಂತೆಗುಣವೆನಗಿನಿತಿಲ್ಲಜನರ ವಿಡಂಬನಕೆ ದಾಸನಾದರೂಘನಕೃಪಾರ್ಣವನೆ ಕನಕಾಂಬರಧರ2ಲಕ್ಷ ಮಾತ್ಯಾತಕೆ ಲಕ್ಷ್ಮೀನಾರಾಯಣರಕ್ಷಾಮಣಿ ನೀನೆಪಕ್ಷೀಂದ್ರವಾಹನ ಪಾಪವಿಮೋಚನತ್ರ್ಯಕ್ಷಮಿತ್ರನೆನ್ನಕ್ಷಿಗೋಚರನಾಗಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ