ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಬಲು ಸುಖದಾಟ ಸಾಧಿಸಿ ನೋಡಿರೋ ನೀಟ ಧ್ರುವ ಕರ್ಮಕಮಂಧವಿಲ್ಲ ವರ್ಮ ತಿಳಿದವ ಬಲ್ಲ ಧರ್ಮ ಗುರುವಿನ ಸರಿ ಇಲ್ಲ ನಿರ್ಮಲ ನಿಜವೆಲ್ಲ 1 ಅನುಭವಕನುಭವದ ಅನಂದೋ ಬ್ರಹ್ಮದ ಬೋಧ ಏನೇಂದ್ಹೇಳಲಿ ಸುಸ್ವಾದ ತಾನೆ ತಾನಾದ 2 ಸಾಧಿಸಿದಲ್ಲದೆ ಖೂನ ಇದರಿಟ್ಟು ಮಹಿಪತಿ ಪೂರ್ಣ ಒದಗಿ ಕೈಗೂಡದು ಧನ ಸದ್ಗುರು ಚರಣ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡೆÀನೀಗ ರಂಗನಾಥನ ಕಾರುಣ್ಯನಿಧಿಯ ಪ. ಮಂಡಲದೊಳುದ್ದಂಡ ಮೂರುತಿ ಹಿಂಡು ದೈತ್ಯರ ತಂಡ ತಂಡದಿ ತುಂಡು ತುಂಡು ಮಾಡಿದ ಸ್ವಾಮಿಯ ಅ.ಪ. ಕೌಸ್ತುಭ ನಾಮವ ನೇಮದಿಂದ ಧರಿಸಿದಾತನ ಹೇಮ ಮಂಟಪದೊಳಗೆ ಕುಳಿತು ಕಾಮಿಸಿದ ಭಕ್ತರಿಗೆ ಕಾಮಿತಾರ್ಥ ಕೊಡುವ ಸ್ವಾಮಿಯ 1 ಗರುಡವಾಹನವೇರಿ ಗಗನದಿ ಚರಿಸುತ್ತ ಬಂದು ಸರಸಿಯೊಳು ಕರಿಯ ಸಲಹಿದೆ ಪರಮಭಕ್ತರ ಕಾವದೇವ ಕರುಣವಾರಿಧಿ ಕಮಲನಯನ ಉರಗಶಯನ ಉದ್ಧಾರಿ ನಿನ್ನ ಮರೆಯಹೊಕ್ಕೆ ಕಾಯೊ ಎನ್ನ2 ಇಂದುಧರನ ಸಖನೆ ಕೇಳಯ್ಯ ಬಂದಂಥ ದುರಿತ ಹಿಂದು ಮಾಡಿ ಮುಂದೆ ಸಲಹಯ್ಯ ಇಂದು ಹೆಳವನಕಟ್ಟೆ ರಂಗ ಆ-ನಂದ ಪಡಿಸೊ ರಾಮಲಿಂಗ ಹೊಂದಿದೆನು ನಿನ್ನ ಚರಣ3
--------------
ಹೆಳವನಕಟ್ಟೆ ಗಿರಿಯಮ್ಮ
ಬಿಟ್ಹ್ಯಾಗೆ ಇರಲಿನ್ನೀ ಚರಣ | ರಂಗ ಪ. ವಿಠ್ಠಲನಾ ಪುಟ್ಟ ಚರಣ ಬಿಟ್ಟು ಗೋಕುಲ ಪುಂಡಲೀಕನಿಗೊಲಿಯುತ ಇಟ್ಟಿಗೆ ಮೇಲ್ಹೊಂದಿ ನಿಂತಂಥ ಚರಣ ಅ.ಪ. ಭಕ್ತರಿಗೊಲಿಯುವ ಚರಣಾ | ವೇದ ಉಕ್ತಿಗೆ ನಿಲುಕದ ಚರಣಾ ಹತ್ತಿ ಪಾರ್ಥನ ರಥ ಮತ್ತೆ ಭೀಷ್ಮನಿಗೊಲಿದು ಹಸ್ತದಿ ಚಕ್ರವ ಪಿಡಿದು ಬಂದಾ ಚರಣ 1 ಬಲಿಯನ್ನು ತುಳಿದಂಥ ಚರಣಾ | ಮೂರು ಇಳೆಯನಳೆದ ಪುಟ್ಟ ಚರಣ ಕುಲಕೋಟಿ ಉದ್ಧಾರಗೈವಂಥ ಗಂಗೆಯ ಚಲುವ ಉಂಗುಟದಲ್ಲಿ ಪಡೆದ ಕೋಮಲ ಚರಣ 2 ಹಸ್ತಿ ಕರೆಯೆ ಬಂದ ಚರಣಾ | ಲಕ್ಷ್ಮಿ ವತ್ತುವೋ ಮೃದುತಳ ಚರಣಾ ಚಿತ್ತದೆ ಚಿಂತಿಪ ಭಕ್ತರ ಮನದೈವ ತೆತ್ತಿಗನಾಗಿ ಐವರ ಪೊರೆದಾ ಚರಣ3 ಭೀಮ ತೀರಾ ವಾಸ ಚರಣಾ | ಭಕ್ತ ರಾಮಯ ಹರಿಸುವ ಚರಣಾ ಕಾಮಜನಕ ಪಾಂಡುರಂಗವಿಠ್ಠಲನೆಂದು ಪ್ರೇಮದಿಂ ಭಜನೆಗೊಂಬುವ ಸ್ವಾಮಿ ಚರಣಾ 4 ಬಿಟ್ಟಿರಲಾರೆ ನೀ ಚರಣ | ಮನದಿ ಕಟ್ಟಿ ಹಾಕೂವೆ ನಾ ನೀ ಚರಣ ದಿಟ್ಟ ಶ್ರೀ ಗೋಪಾಲಕೃಷ್ಣವಿಠ್ಠಲ ಚರಣ ಇಟ್ಟು ಹೃತ್ಕಮಲದಿ ಪೂಜಿಪೆ ನೀ ಚರಣ 5
--------------
ಅಂಬಾಬಾಯಿ
ರಕ್ಷಮಾಂ ರಂಗೇಶ ಪ ರಕ್ಷಮಾಂ ರಂಗೇಶ ರವಿಕೋಟಿಸಂಕಾಶಪಕ್ಷಿವಾಹನ ಶ್ರೀಶ ಭವ್ಯಗುಣಕೋಶಅಕ್ಷರಾದಿ ಪಿಪೀಲಿಕಾಂತ ಸಂ-ರಕ್ಷಕಾಮಯಹರಣ ಸರ್ವಲಕ್ಷಣ ಪರಿಪೂರ್ಣ ಪರಮೇಶ ದಕ್ಷಿಣಾಧೀಶ ಅ.ಪ. ಕಮಲದಳ ನೇತ್ರ ಕಮಲಾರಿ ಸಮವಕ್ತ್ರಕಮಲಾವಿರಚಿತ ಸ್ತೋತ್ರ ಕರಧೃತ ಗೋತ್ರಕಮಲಜ ನುತಿಪಾತ್ರ ಕರಿರಾಜಯಾತ್ರಕಮಲಧರ ಕರಕಮಲ ಸಮಪದಕಮಲ ಸಂನಿಭವಿನುತ ಕಂಧರಕಮಲ ಸಂನಿಭ ಸುಗಾತ್ರ-ಕಮಲಾಕಳತ್ರ 1 ಅನಿಮಿಷ ಸುಪ್ರೀತಾಖಿಳ ದೋಷ ನಿರ್ಧೂತಸನಕಾದಿ ಶೃತಿಗೀತ ಅರ್ಜುನಸೂತದಿನಮಣಿಕುಲಜಾತ ದೇವಕೀ ಪೋತಕನಕವಸನ ಕೀರೀಟಧರ ಕೋ-ಕನದ ಹಿತ ಕಮಲಾಪ್ತ ನಯನವನದವಾಹನವೈರಿಕುಲಘಾತ ವನಜಭವ ತಾತ2 ಅಂಗನಾಂಬರಹರಣಾನುಪಮ ಸಪ್ತಾವರಣಮಂಗಳ ಕರಚರಣ ಭಕ್ತ ಸಂರಕ್ಷಣಗಾಂಗೇಯಕೃತಸ್ಮರಣ ಕರುಣಾಭರಣರಂಗವಿಠಲ ಭುಜಂಗಶಯನ ತು-ರಂಗಧರ ಕಾವೇರಿ ತೀರ ಶ್ರೀ-ರಂಗನಿಲಯ ತುರಂಗ ಸಂಚರಣ-ಗಂಗಾಚರಣ3
--------------
ಶ್ರೀಪಾದರಾಜರು
ಶರಣು ಶರಣು ವಾದಿರಾಜ ಶರಣ ಜನಕೆ ಕಲ್ಪ ಭೂಜ ಪ ಪಂಕಜ ಭವ್ಯತೇಜ ಅ.ಪ ಯೋಗಿವರ ವಾಗೀಶ ಕುವರ ಬಾಗಿ ನಮಿಸಿ ಮುಗಿಯುವೆ ಕರವ ಭೋಗ ರಾಗ ದೂರ ಧೀರ ಭಾಗವತ ಕುಲಾಬ್ಜ ಭಾಸ್ಕರ 1 ಸಿರಿ ವಿಲಸಿತ ಪರಿಪರಿ ಸದ್ಗ್ರಂಥ ರಚಿತ ವರಕವೀಂದ್ರ ಕೀರ್ತಿಸಾಂದ್ರ ಪರಮ ಕುಲಾಂಬುಧಿ ಚಂದ್ರ 2 ಹಯಾಸ್ಯ ಚರಣ ಕವಿ ಜನಾವಳಿ ಭೂಷಣ ಭಾಸುರಾಗ ಪಾಲಿಸು ಕರಿಗಿ ಕಮಲ ಚರಣ3
--------------
ವರಾವಾಣಿರಾಮರಾಯದಾಸರು
ಶುಭನಾಮ ಶೋಭಿತಧಾಮಶ್ರೀ ಭೂಪ ಸಾರಸನಾಭ ವಿಭೋ ವಿಭೋ ಪ.ಅರ್ಭಕಪಾಲಕ ದರ್ಭಶಯನವಿಶ್ವಗರ್ಭ ವಿದಾರಿತ ದುರ್ಭಾಗ್ಯ ದನುಜ 1ದÀÀಂಡಿತ ರಕ್ಷ ಕೋದಂಡಮಂಡಿತಕರದÀಂಡಕಹರ ಕೋಟಿ ಚಂಡಕರಾಭಾ 2ಮರ್ದಿತದುಷ್ಟ ವಿವರ್ಧಿತ ಶಿಷ್ಟ ಕಪರ್ದಿ ವಿರಿಂಚಾಂತಧ್ರ್ಯಾನಚರಣ3ಅಂಜನಾತ್ಮಜ ಕೃತಾಂಜಲಿ ಪುಟಸೇವ್ಯಮಂಜುಳ ಸೂಕ್ತ ಪ್ರಭಂಜಿತಕಲುಷ4ಭದ್ರ ಚರಿತ್ರ ಲಸದ್ರತ್ನ ಭೂಷಣಚಿದ್ರೂಪ ಪ್ರಸನ್ವೆಂಕಟಾದ್ರೀಶಪಾಹಿ5
--------------
ಪ್ರಸನ್ನವೆಂಕಟದಾಸರು