ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಂಡಾಡಲಳವೆ ನಿನ್ನಯ ಕೀರ್ತಿ ಭೂ- ಮಂಡಲದೊಳು ಹಯಗ್ರೀವಮೂರ್ತಿ ಪ. ವೇದಂಗಳ ಜಲದಿಂದ ತಂದೆ ನೀ ಪೋದ ಗಿರಿಯ ಬೆನ್ನೊಳಾಂತು ನಿಂದೆ ಮೇದಿನಿಯ ಕದ್ದೊಯ್ದನ ಕೊಂದೆ ಸಂ- ವಾದದಿಂದ ಕಂಬದಿಂದಲಿ ಬಂದೆ 1 ಚರಣಾಗ್ರದಲಿ ನದಿಯನು ಪೆತ್ತೆ ತೀಕ್ಷ್ಣ ಪರಶು ಪಿಡಿದು ಬಾಹುಜರ ಕಿತ್ತೆ ನೆರೆನಂಬಿದಗೆ ಸ್ಥಿರಪಟ್ಟವನಿತ್ತೆ ದೊಡ್ಡ ದುರುಳಕಾಳಿಂಗನ ಶಿರದಿ ನಿಂತೆ 2 ಪರವ್ರತೆಯರ ಮಾನಭೇದನ ಚತುರ ತುರಗವೇರಿ ನಲಿವನ ಕ್ಷಿತಿಯೊಳುತ್ತಮ ವಾದಿರಾಜನ ಸ್ವಾಮಿ ಸತತ ರಕ್ಷಿಪ ಶ್ರೀ ಹಯವದನ 3
--------------
ವಾದಿರಾಜ