ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಸುಖದಿರವನು ಕರುಣಿಸು ಎನಗೆ ಪರಮಪಾವನ ತವಚರಣಸೇವೆಯೆಂಬ ಪ ಅರಿಷಡ್ವರ್ಗದ ಉರುಬಾಧೆ ತಪ್ಪಿಸಿ ಮೆರೆವೆಂಟುಕೋಣಗಳು ಶಿರತರಿದ್ಹಾರಿಸಿ ಜರೆಮರಣೆಂದೆಂಬ ಉರುಲನು ಜೈಸಿದ ಹರಿಶರಣರ ಮಹ ಕರುಣಕಟಾಕ್ಷವೆಂಬ 1 ಹತ್ತು ಇಂದ್ರಿಯಗಳು ಒತ್ತಿ ಮುರಿದು ನೂಕಿ ಸುತ್ತಿಸುಳಿವ ಕಪಿನ್ಹತ್ತಿರ ಬಂಧಿಸಿ ಭವ ಕತ್ತರಿಸೊಗೆದ ಚಿತ್ತಜತಾತನ ಭೃತ್ಯಂ ನಡೆಯೆಂಬ 2 ಹರಣಪೋದರು ನಿನ್ನ ಚರಣಸ್ಮರಣೆಯನ್ನು ನೆರೆನಂಬಿ ಬಿಡದಂಥ ಪರಮದಟವ ನೀಡೋ ಶಿರದಿ ಹಸ್ತವನಿತ್ತು ವರದ ಶ್ರೀರಾಮ3
--------------
ರಾಮದಾಸರು