ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈತನೀಗ ವಾಸುದೇವನು ಲೋಕದೊಡೆಯ ಈತನೀಗ ವಾಸುದೇವನು ಪ ಈತನೀಗ ವಾಸುದೇವನೀ ಸಮಸ್ತ ಲೋಕದೊಡೆಯ ದೂತಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ ಅ ದನುಜೆಯಾಳ್ದನಣ್ಣನಯ್ಯನ ಪಿತನ ಮುಂದೆ ಕೌರವೇಂದ್ರನನುಜೆಯಾಳಿದವನ ಶಿರವ ಕತ್ತರಿಸುತ - ತನ್ನಅನುಜೆಯಾಳಿದವನ ಬೆಂಕಿ ಮುಟ್ಟದಂತೆ ಕಾಯ್ದ ರುಕ್ಮನನುಜೆಯಾಳಿದವನ ಮೂರ್ತಿಯನ್ನು ನೋಡಿರೊ1 ನರನ ಸುತನರಣ್ಯದಲ್ಲಿ ಗಿರಿಯೊಳ್ನಿಂತು ತನ್ನ ರೋಷದಿಶರಗಳನ್ನು ತೀಡುತಿಪ್ಪನ ಯೋಚಿಸಿಭರದಲವನ ಕರೆದು ಕುರುಹು ತೋರಿ ಪತ್ರವನ್ನು ಹಾರಿಸಿದವನಶಿರವನ್ನು ಛೇದಿಸಿದ ದೇವ ಕಾಣಿರೊ 2 ವೈರಿ ತೊಡೆಯ ಛೇದಿಸೆಂದು ಬೋಧಿಸಿಕಷ್ಟವನ್ನು ಕಳೆದು ಭಕ್ತರಿಷ್ಟವನ್ನು ಕಾದ ಉ-ತ್ಕøಷ್ಟ ಮಹಿಮನಾದ ದೇವ ಕಾಣಿರೊ 3 ಕ್ರೂರವಾದ ಫಣಿಪಬಾಣವನ್ನು ತರಣಿಜನೆಚ್ಚಾಗವೀರ ನರನತ್ತ ಬಪ್ಪುದನ್ನು ಈಕ್ಷಿಸಿ ಧಾರಿಣಿಯ ಪದದೊಳೌಕಿ ಚರಣಭಜಕ ನರನ ಕಾಯ್ದಭಾರಕರ್ತನಾದ ದೇವನೀತ ಕಾಣಿರೊ4 ವ್ಯೋಮಕೇಶನಿಪ್ಪ ದೆಸೆಯ ಸರ್ವ ಜಗಕೆ ತೋರುತಸಾಮಜವನೇರಿ ಬಹನ ಶಕ್ತಿಯನೀಕ್ಷಿಸಿಪ್ರೇಮದಿಂದ ಉರವನೊಡ್ಡಿ ಡಿಂಗರಿಗನ ಕಾಯ್ದ ಸಾರ್ವ-ಭೌಮ ಬಾಡದಾದಿಕೇಶವನ್ನ ನೋಡಿರೊ 5
--------------
ಕನಕದಾಸ
ನಿನ್ನ ನಂಬಿರುವೆ ಪ್ರಸನ್ನನಾಗು ಬ್ಯಾಗಚನ್ನಿಗವರದ ವಿಜಯರಾಯ ಪ ಮನ್ನಿಸಿ ಎನ್ನ ಪಾವನ್ನ ನೀ ಮಾಡದಿರೆಬೆನ್ನ ಬಿಡೆನೊ ನಿನ್ನ ಜೀಯಾ ಅ.ಪ. ಕರುಣಸಾಗರನೆಂಬೊ ಬಿರಿದು ನಿನಗಿಹುದೆಂದುಹಿರಿಯರಿಂದರಿತಿರುವೆ ಜೀಯಾ ||ಮರೆಯದೇ ಪೊರೆ ನಿನ್ನ ಚರಣಭಜಕನೆಂದುಸರುವ ಅಘವನು ಕ್ಷಮಿಸಿ ರಾಯಾ ||ದುರುಳ ವಿಷಯಕ್ಕಿಳಿವ ಮರುಳ ಮನವನ್ನು ನಿನ್ನಚರಣದಲಿ ನಿಲಿಸಿನ್ನು ಜೀಯಾ ರಾಯಾ 1 ವಿಧಿ ಜಪ ತಪವ ಅರಿಯೆ ಹೋಮ ನೇಮಅರಿಯೆ ಮಂತ್ರ ಸ್ತೋತ್ರವ ||ಬರಿದೆ ಧರಿಯೊಳು ತಿರುಗಿ ಹರಿಯ ಸ್ಮರಿಸದೆ ದಿನವಇರುಳು ಹಗಲು ಕಳದೆನು ||ಕರುಣವಿಲ್ಲವ್ಯಾಕೆ ಶರಣಾಗತನ ಇನ್ನುಪೊರೆಯದೇ ಬಿಡುವದು ಥರವಲ್ಲವೆಂದಿಗೂ 2 ಅಜ ಭವರಿಂದೊಂದ್ಯನಾದ್ವಿಜಯ ಮೋಹನ ವಿಠಲಭಜಕರಿಗೊಲಿದಂತೆ ಉಪಾಯ ||ನಿಜವಾಗಿ ಮಾಡದಿರೆ ಬಿರುದಿಗೆ ಕುಂದುಗಜರಾಜವರದನ ಪ್ರಿಯಾ ||ಕುಜನರ ಮತ ಬಡಿದು ವಿಜಯ ವಿಠಲನೇ ಪರನೆಂದುತ್ರಿಜಗದೊಳು ಮೆರಸಿದ ಭಜಕಾಗ್ರೇಸರ ಗುರುವೆ 3
--------------
ಮೋಹನದಾಸರು
ಸೇವೆ ಮಾಳ್ಪೆ ನಾರಾಯಣಈವುದಯ್ಯ ನಿನ್ನ ಚರಣ ಪ ಸುರಮುನಿಗಳಿಗಿದು ದುರ್ಲಭಸಿರಿದೇವಿಗೆ ಮಾತ್ರ ಸುಲಭಕರುಣಿಸು ಹೇ ಕಮಲನಾಭಇರದೆ ಭೌವ್ಯ ನಿನ್ನ ಚರಣ 1 ತ್ರಿಜಗಂಗಳ ಗೆಲ್ದ ಚರಣಭಜಕ ಗುಹಕಗೊಲಿದ ಚರಣರಜತ ನದಿಯ ಹೆತ್ತ ಚರಣಕಲ್ಲಹಲ್ಯೆ ಪೊರೆದ ಚರಣ2 ಕುರುನೃಪನನು ಕೆಡೆದ ಚರಣಉರಗ ಕಾಳಿ ಹಣಿದ ಚರಣಧರೆಗೆ ಮೆರೆದ ಗದಗು ವೀರನಾರಾಯಣ ನಿನ್ನ ಚರಣ 3
--------------
ವೀರನಾರಾಯಣ