ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಜಮುಖೀ ಬೇಗ ಪ. ಚಿತ್ರವಿಚಿತ್ರಮಾಗಿ ಮೆರೆವ ರತ್ನಖಚಿತ ಮಂಟಪದಿ ಕೆತ್ತನೆಯ ಹಸೆಯಮೇಲೆ ರತ್ನಗಂಬಳಿಯ ಹಾಸಿ 1 ಪರಿಪರಿಯ ರಾಗದಿಂದ ತರುಣಿಯರು ನಿನ್ನ ಪಾಡಿ ಕರೆಯುತಿಹರೋಳ್ ಕರುಣೆಯಿರಿಸಿ ಅರಸನೊಡನೆ ಸರಸದಿಂದ2 ಪಂಕಜಾಕ್ಷಿ ನಿನ್ನ ಚರಣಕಿಂಕರರ ಮೊರೆಯ ಕೇಳಿ ಕನಕಪೀಠದಲ್ಲಿ ಕುಳಿತು ಕಾಂಕ್ಷಿತಾರ್ಥವಿತ್ತು ಸಲಹು 3 ಪರಮಪುರುಷ ಶೇಷಶೈಲವರದನರಸಿ ನಿನ್ನ ಗುಣವೆ ಸ್ಮರಿಸಿ ಸ್ಮರಿಸಿ ಕರೆಯುತಿರುವ ತರಳೆಯರಂ ಪೊರೆಯೆ ತಾಯೆ4
--------------
ನಂಜನಗೂಡು ತಿರುಮಲಾಂಬಾ