ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂದೆ ನೀನೆಂದು ನಾ ಬಂದೆ ರಕ್ಷಿಸೆಂದೆ ಪ ಮುಂದೆನ್ನ ಸಲಹುವ ಭಾರವು ನಿಂದೆ ಅ.ಪ. ಮಾತು ಮಾತಿಗೆ ನಾ ನಿನ್ನ ನೆನೆವೆ ಸ್ಮರಿಸುತಿರುವೆ ಜ್ಞಾತಿ ಬಾಂಧವರ ಮತ್ಸರ ಮರೆವೆ ಮಾತಾಪಿತರುಗಳ ಸೇವೆಗೈವೆ ಈ ತನು ನಿನ್ನ ಚರಣಕರ್ಪಿಸಿರುವೆ 1 ಸಾಧನವೇನೆಂಬುದ ನಾನರಿಯೆ ಕೇಳೊ ದೊರೆಯೆ ಮಾಧವ ನಿನ ನಾಮವೆಂದಿಗೂ ಮರೆಯೆ ವೇದಬಾಹಿರರೊಡನಾಡಿ ಮೆರೆಯೆ ಕಾದುಕೋಯೆನ್ನನೆಂಬೆನು ಶ್ರೀಹರಿಯೆ 2 ನಾ ನಿನ್ನ ಕಾಡಿ ಬೇಡುವುದಿಲ್ಲ ದೂರುವನಲ್ಲ ಜ್ಞಾನ ಮಾತುರವಿತ್ತು ಕಾಯಬೇಕಲ್ಲ ನೀ ನನ್ನ ಸಲಹೊ ಲಕ್ಷ್ಮೀ ನಲ್ಲ ಶ್ರೀನಿವಾಸ ರಂಗೇಶವಿಠಲ 3
--------------
ರಂಗೇಶವಿಠಲದಾಸರು