ಒಟ್ಟು 11 ಕಡೆಗಳಲ್ಲಿ , 7 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿಂದ ಬಂದೆ ಮುಂದೆತ್ತ ಪಯಣಇಲ್ಲಿ ನಿನಗೆಷ್ಟು ದಿನವಾಲಸ್ಯ ಮರುಳೆ ಪ ಯೋನಿ ಮುಖ ಮಾರ್ಗವಿಡಿದುಭೂತಳಕೆ ಬಂದ ಹದನೇನ ತೀರಿಸಿಕೊಂಡೆಜಾತಿ ಯಾವುದು ನಿನ್ನ ಹೆಸರೇನು ಮರುಳೆ1 ಮುಂದಾವ ಪಥವ ಸೇರುವೆ ಮರುಳೆ, ಸಾಕಿನ್ನುಹಿಂದೆ ನೆರವಾಗಿ ನಿಂತಾಪ್ತರುಂಟೆಒಂದುಗೂಡಿದ ಪತ್ನಿ ಸುತರೆಲ್ಲ ವರ್ಜಿಪರುನಿಂದು ಮಾತಾಡು ಬರಿದೆ ಬಳಲಿದೆ ಮರುಳೆ 2 ಬರವಿದೇತಕೆ ನಿನ್ನ ಸ್ಥಳವೆಲ್ಲಿ ನೆಲೆಗೊಂಡುಇರುವ ಮಂದಿರವಾವುದದನೆನಗೆ ಪೇಳೊಧರೆಯೊಳಗೆ ವರಕಾಗಿನೆಲೆಯಾದಿಕೇಶವನಸಿರಿ ಚರಣಕಮಲವನು ನೆರೆನಂಬಿ ಸುಖಿಸೊ3
--------------
ಕನಕದಾಸ
ಏನ ಬಣ್ಣಿಪೆನಮ್ಮ ಪ. ಏನ ಬಣ್ಣಿಪೆ ಪೂರ್ಣಪ್ರಜ್ಞ ಪಂಡಿತರಾಯರ ಅ.ಪ. ಮಧ್ವಸರೋವರ ತೀರದ ಮುದ್ದುಕೃಷ್ಣನ ಪ್ರ-ಸಿದ್ಧಿಯಿಂದ ಪೂಜೆಮಾಡಿ ಗೆದ್ದ ಬಲವಂತ ರಾಯರ1 ಭವಬಂಧ ಮಾಯಿಗಳ ಕಾಲಲೊದ್ದು [ಮೂಲೆಲ್ಹಾಕಿ]ಮಧ್ವಶಾಸ್ತ್ರವೆಲ್ಲ ಪ್ರಸಿದ್ಧ ಮಾಡಿದ ಯತಿರಾಯರ 2 ಸಿರಿ ಹಯವದನನ ಚರಣಕಮಲವನುನಿರುತವಾಗಿ ಸೇವಿಸುವ ಅಚ್ಛಿನ್ನ ನಿಜದಾಸರ 3
--------------
ವಾದಿರಾಜ
ಚರಣಕಮಲವನು ತೋರೋ ಪ ಮನವೆಂಬ ಮನೆಯನು ನಿರ್ಮಲಗೊಳಿಸು ತನುಮನಧನದಾಶೆಯ ನೀ ಬಿಡಿಸೊ 1 ಆರು ಮಂದಿಯು ಯನ್ನ ಗಾರುಮಾಡುವರು ಪಾರಗಾಣಿಸು ಬೇಗ ಶ್ರೀ ರಾಮದೇವ 2 ದಶರxಸುತ ನೀನು ಶಶಿಮುಖಕಾಂತನು ಶಶಿಧರನುತನೀ ಅಪಮಸಾಹಸನೊ 3 ಮೂರಾವತ್ಸೇಗಳಲ್ಯು ದೂರಾಪೋಗದೆ ನೀ ಕಾರುಣ್ಯದಿಂದ ಯೆನ್ನ ಶೇರಿರು ಹರುಷದಿ 4 ಸಿರಿವತ್ಸಾಂಕಿತ ನೀನು ತರಣಿಸುತನ ಸರವ ಕರಕರೆ ಬಿಡಿಸಲು ಸುರರ ವೃಂದವ ಬಿಟ್ಟು 5
--------------
ಸಿರಿವತ್ಸಾಂಕಿತರು
ಚರಣಕಮಲವನು ನೆನೆವೆ ನಾ ನಿನ್ನ ಪ. ಚರಣಕಮಲವನು ನೆನೆವೆ ನಾ ದುರಿತರಾಶಿಗಳ ಸಂಹರಿಪನ ಅ.ಪ. ಶ್ರುತಿಯನುದ್ಧರಿಸಿದುದಾರನ ಸಿಂಧು- ಮಥನಕೊದಗಿದ ಗಂಭೀರನ ಕ್ಷಿತಿಯನೆತ್ತಿದ ಬಲುಧೀರನ ಶಿಶು ಸ್ತುತಿಸೆ ಕಂಬದಿ ಬಂದ ವೀರನ 1 ಇಂದ್ರನ ಧಾರೆಯ ನಿಲಿಸಿದನ್ನ ತನ್ನ ತÀಂದೆಯ ಮಾತು ಸಲಿಸಿದನ್ನ ಕಂದರದಶನ ಸೋಲಿಸಿದನ್ನ ವ್ರಜ- ದಿಂದುಮುಖಿಯರ ಪಾಲಿಸಿದನ್ನ 2 ವಧುಗಳ ವ್ರತವ ಖಂಡಿಸಿದನ್ನ ದುಷ್ಟ ರುದಿಸಲು ತುದಿಯ ತುಂಡಿಸಿದನ್ನ ಇದಿರಾದ ಖಳರ ಖಂಡಿಸಿದನ್ನ ಹಯ ವದನಪೆಸರ ಕೊಂಡುದಿಸಿದನ್ನ 3
--------------
ವಾದಿರಾಜ
ಜಯರಾಯ ಜಯರಾಯ ಪ. ಜಯರಾಯ ನಿನ್ನ ದಯವುಳ್ಳ ಜನರಿಗೆಯವಿತ್ತು ಜಗದೊಳು ಭಯಪರಿಹರಿಸುವಅ.ಪ. ಖುಲ್ಲರಾದ ಮಾಯ್ಗಳ ಹಲ್ಲು ಮುರಿದುವಲ್ಲಭ ಜಗಕೆ ಶ್ರೀನಲ್ಲನೆಂದರುಹಿದಿ 1 ಮಧ್ವರಾಯರ ಮತ ಶುದ್ಧಶರಧಿಯೊಳುಉದ್ಭವಿಸಿದ ಗುರು ಸಿದ್ಧಾಂತಸ್ಥಾಪಕ 2 ಸಿರಿಹಯವದನನ ಚರಣಕಮಲವನುಭರದಿ ಭಜಿಸುವರ ದುರಿತಗಳ ಹರಿಸುವ 3
--------------
ವಾದಿರಾಜ
ವರವ ಕೊಡೆ ತಾಯೆ ವರವ ಕೊಡೆ ಪ. ಶರಧಿಯ ಕನ್ನೆ ನೀ ಕೇಳೈ ಸಂಪನ್ನಳೆ ಸೆರಗೊಡ್ಡಿ ಬೇಡುವೆನಮ್ಮ ವರವ ಕೊಡೆ ನೆರೆ ನಂಬಿದೆನು ನಿನ್ನ ಚರಣಕಮಲವನು ಪರಿಹರಿಸೆಮ್ಮ ದಾರಿದ್ರ್ಯ ಕಷ್ಟವ ತಾಯೆ1 ಹೊಳೆವಂಥ ಅರಸಿನ ಹೊಳೆವ ಕರಿಯ ಮಣಿ ಸ್ಥಿರವಾಗಿ ಕಟ್ಟುವಂಥ ವರವ ಕೊಡೆ ತಾಳೋಲೆ ಹೊನ್ನೋಲೆ ತೊಳೆದೊಯ್ದ ಬಿಚ್ಚೋಲೆ ಯಾವಾಗಲಿರುವಂಥ ವರವ ಕೊಡೆ 2 ಬಾಗಿಲ ತೋರಣ ಮದುವೆ ಮುಂಜಿ ನಾಮಕರಣ ಯಾವಾಗಲಾಗುವಂಥ ವರವ ಕೊಡೆ ಬಂಧುಬಳಗ ಹೆಚ್ಚಿ ಹೆಸರುಳ್ಳ ಮನೆ ಕಟ್ಟಿ ಉಂಡಿಟ್ಟಿಡುವಂಥ ವರವ ಕೊಡೆ 3 ಹಾಲ ಕರೆಯುವ ಮೇಲಾದ ಸರಳೆಮ್ಮೆ ಸಾಲಾಗಿ ಕಟ್ಟುವಂಥ ವರವ ಕೊಡೆ ಕಂಡಕಂಡವರಿಗೆ ಕರೆದು ಮೃಷ್ಟಾನ್ನವ ತಿಳಿ ನೀರು ಕೊಡುವಂಥ ವರವ ಕೊಡೆ 4 ಲಕ್ಷ್ಮೀನಾರಾಯಣನ ವಕ್ಷಸ್ಥಳದಲ್ಲಿ ಲಕ್ಷ್ಮಣವಾಗಿರುವಂಥ ಮಹಾಲಕ್ಷ್ಮಿ ಅಷ್ಟೈಶ್ವರ್ಯವು ಪುತ್ರಸಂತಾನವ ಕೊಟ್ಟು ರಕ್ಷಿಸುವವಮ್ಮ ವರವ ಕೊಡೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಶರಣಾಗತ ರಕ್ಷಕ ಕರುಣಾಂಬುಧೆ ಪರಿಪಾಲಿಸುವ ಮೊರೆ ಪಂಕಜಾಕ್ಷ ಪೊರೆವುದು ಲೇಸು ನಿರಾಕರಿಸದೆ ಹರಿ ನಿನ್ನ ಚರಣಕಮಲವನು ಸ್ಮರಿಸುತಲಿರುವೆನು ಪ ನಂದನಂದನ ಮುನಿವೃಂದ ವಂದಿತ ರಾಕೇಂದುವದನ ಗೋ ವಿಂದ ಕೃಷ್ಣಾ ಮಂದರಧರ ಮುಚುಕುಂದವರದ ಸಂ- ಕುಂದರದನ ಶ್ರೀ ಮುಕುಂದ ಶೌರಿ ಬಂಧನ ಮೋಚನ ಆಪದ್ಭಾಂಧವ ಶೌರೇ 1 ವೇಣುಗೋಪಾಲ ಪುರಾಣಪುರುಷ ಸುಮ- ಬಾಣಜನಕ ಸಾಮಗಾನ ಲೋಲ ಮಾಧವ ಚತು- ವಿನುತ ವiಹಾನುಭಾವ ಶ್ರೀನಿ- ವಾಸಾಚ್ಯುತಾಶ್ರೀತ ಕಲ್ಪತರು ಚಕ್ರಪಾಣಿ ಪದ್ಮೋದರ ಘೋರರೂಪ ಭಂಜನ ದೇವಾದಿದೇವ ವಿಷ್ವಕ್ಸೇನ ಜನಾರ್ದನ ಶ್ರೀ ವತ್ಸಲಾಂಛನ 2 ಹರಿಸರ್ವೋತ್ತಮ ಮರುತಾಂತರ್ಗತ ಪರಮಾತ್ಮ ಗರುಡವಾಹನ ಶುಭಕರಚರಿತ ಮುರಸೂದನಾನಂತ ಮುಕ್ತಿದಾಯಕ ಜಗದ್ಭರಿತ ಕೇಶವ ಕೌಸ್ತುಭಾಲಂಕೃತ ವರದ ಅಹೋಬಲ ಗಿರಿವಾಸ ವಸುಧೇಶ ಭಾಸುರ ಕೀರ್ತಿಸಾಂದ್ರ 3
--------------
ಹೆನ್ನೆರಂಗದಾಸರು
ನಾರಾಯಣ ನಿನ್ನ ನಾಮದ ಸ್ಮರಣೆಯ |ಸಾರಮೃತವೆನ್ನ ನಾಲಗೆಗೆ ಬರಲಿ ಪಕೂಡುವಾಗಲು ನಿಂತಾಡುವಾಗಲು ಮತ್ತೆ |ಹಾಡುವಾಗಲು ಹರಿದಾಡುವಾಗ ||ಖೋಡಿವಿನೋದದಿ ನೋಡದೆ ನಾ ಬಲು |ಮಾಡಿದ ಪಾಪ ಬಿಟ್ಟೋಡಿ ಹೋಗುವ ಹಾಗೆ 1ಊರಿಗೆ ಹೋಗಲಿ ಊರೊಳಗಿರಲಿ-|ಕಾರಾಣಾರ್ಥಗಳೆಲ್ಲ ಕಾದಿರಲಿ ||ವಾರಿಜನಾಭನರಸಾರಥಿಸನ್ನುತ|ಸಾರಿಸಾರಿಗೆ ನಾ ಬೇಸರಿಸದ ಹಾಗೆ 2ಹಸಿವು ಇದ್ದಾಗಲಿ ಹಸಿವಿಲ್ಲದಾಗಲಿ |ರಸ-ಕಸವಿರಲಿ ಹರುಷವಿರಲಿ ||ವಸುದೇವಾತ್ಮಜ ಶಿಶುಪಾಲಕ್ಷಯ ||ಅಸುರಾಂತಕ ನಿನ್ನ ಹೆಸರು ಮರೆಯದಂತೆ 3ಕಷ್ಟದಲ್ಲಿರಲಿ ಉತ್ಕøಷ್ಟದಲ್ಲಿರಲಿ-|ಎಷ್ಟಾದರು ಮತಿಗೆಟ್ಟಿರಲಿ ||ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ |ಅಷ್ಟಾಕ್ಷರ ಮಹಾಮಂತ್ರದ ನಾಮದ 4ಕನಸಿನೊಳಾಗಲಿ ಕಳವಳಿಕಾಗಲಿ |ಮನಸುಗೊಟ್ಟಿರಲಿ ಮುನಿದಿರಲಿ ||ಜನಕಜಾಪತಿ ನಿನ್ನ ಚರಣಕಮಲವನು |ಮನಸಿನೊಳಗೆ ಒಮ್ಮೆ ನೆನೆಸಿಕೊಳ್ಳುವ ಹಾಗೆ 5ಜ್ವರ ಬಂದಾಗಲು ಚಳಿ ಬಂದಾಗಲು |ಮರಳಿ ಮರಳಿ ಮತ್ತೆ ನಡೆವಾಗಲು ||ಹರಿನಾರಾಯಣದುರಿತನಿವಾರಣ |ಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ 6ಸಂತತಹರಿನಿನ್ನ ಸಾಸಿರನಾಮವ |ಅಂತರಂಗದಾ ಒಳಗಿರಿಸಿ ||ಎಂತೋ ಪುರಂದರವಿಠಲರಾಯನೆ |ಅಂತ್ಯಕಾಲದಲಿ ಚಿಂತಿಸುವಂತೆ 7
--------------
ಪುರಂದರದಾಸರು
ಮರೆಯದಿರು ಶ್ರೀ ಹರಿಯನು ಪ.ಮರೆಯದಿರು ಶ್ರೀ ಹರಿಯ ಮರಣಾತುರದಿ ಮಗನಕರೆದವಗೆ ಸಾಯುಜ್ಯವಿತ್ತ ನಾರಾಯಣನಸ್ಮರಣೆಯನು ಮಾಡುವರಚರಣ ಸೇವಕರಿಂಗೆಪರಮಪದವೀವ ಹರಿಯಅಪದೇವಕಿಯ ಬಂಧುವನು ಪರಿದವನ ಪೂತನಿಯಜೀವರಸವೀಂಟಿದನ ಮಾವನನು ಮಡುಹಿದನಪಾವನ ತರಂಗಿಣಿಯ ಪದನಖದಿ ಪಡೆದವನಗೋವರ್ಧನೋದ್ಧಾರನ ||ದಾವಾನಲನ ಪಿಡಿದು ನುಂಗಿದನ ಲೀಲೆಯಲಿಗೋವತ್ಸ ಗೋಪಾಲ ರೂಪವನು ತಾಳ್ದವನದೇವಮುನಿ ಮುಖ್ಯ ಸುರರಾರಾಧಿಸುವನ ಶ್ರೀ ಪಾದವನುಭಜಿಸು ಮನವೆ 1ಕಂಜಸಂಭವಪಿತನ ಕರುಣಾಪಯೋನಿಧಿಯಕುಂಜರನ ನುಡಿಕೇಳಿ ಒದಗಿದನ ರಣದೊಳು ಧ-ನಂಜಯನ ಜೀವವಂ ಕೃಪೆಯಿಂದ ಕಾಯ್ದವನಆಂಜನೇಯನ ನಾಳ್ದನ ||ರಂಜಿಸುವ ಕೌಸ್ತುಭವಿಭೂಷಣನ ಜಲಧಿಯಲಿನಂಜಿನೊಡೆಯನ ಮೇಲೆ ಮಲಗಿದನ ತಮದೊಳಗೆ ಪ -ರಂಜ್ಯೋತಿಮಯನಾಗಿ ಬೆಳಗುವನಶ್ರೀ ಚರಣಕಂಜವಂ ಭಜಿಸು ಮನವೆ 2ವಾರಿಧಿಯೊಳಾಡಿದನ ವರಗಿರಿಯ ತಾಳಿದನಧಾರಿಣಿಯ ತಂದವನ ದೈತ್ಯನನು ಕೊಂದವನಮೂರಡಿಯಲಳೆದವನ ಮೊನೆಗೊಡಲಿ ಪಿಡಿದವನ ನೀರಧಿಯಬಂಧಿಸಿದನ||ದ್ವಾರಕೆಯನಾಳ್ದವನ ತ್ರಿಪುರಗಳ ಜಗುಳ್ದವನಚಾರುಹಯವೇರಿದನ ಸಕಲ ಸುಜನರ ಪೊರೆವಧೀರ ಪುರಂದರವಿಠಲನ ಚರಣಕಮಲವನುನಂಬಿ ನೀ ಭಜಿಸು ಮನವೇ 3
--------------
ಪುರಂದರದಾಸರು
ವರವ ಕೊಡೆ ತಾಯೆ ವರವ ಕೊಡೆ ಪ.ಶರಧಿಯ ಕನ್ನೆ ನೀ ಕೇಳೈ ಸಂಪನ್ನಳೆಸೆರಗೊಡ್ಡಿ ಬೇಡುವೆನಮ್ಮ ವರವ ಕೊಡೆನೆರೆನಂಬಿದೆನು ನಿನ್ನ ಚರಣಕಮಲವನುಪರಿಹರಿಸೆಮ್ಮ ದಾರಿದ್ರ್ಯ ಕಷ್ಟವ ತಾಯೆ 1ಹೊಳೆವಂಥ ಅರಸಿನ ಹೊಳೆವ ಕರಿಯಮಣಿಸ್ಥಿರವಾಗಿ ಕಟ್ಟುವಂಥ ವರವ ಕೊಡೆತಾಳೋಲೆ ಹೊನ್ನೋಲೆ ತೊಳೆದೊಯ್ದ ಬಿಚ್ಚೋಲೆಯಾವಾಗಲಿರುವಂಥ ವರವ ಕೊಡೆ 2ಬಾಗಿಲ ತೋರಣ ಮದುವೆ ಮುಂಜಿ ನಾಮಕರಣಯಾವಾಗಲಾಗುವಂಥ ವರವ ಕೊಡೆಬಂಧುಬಳಗ ಹೆಚ್ಚಿ ಹೆಸರುಳ್ಳಮನೆಕಟ್ಟಿಉಂಡಿಟ್ಟಿಡುವಂಥ ವರವ ಕೊಡೆ 3ಹಾಲ ಕರೆಯುವ ಮೇಲಾದ ಸರಳೆಮ್ಮೆಸಾಲಾಗಿ ಕಟ್ಟುವಂಥ ವರವ ಕೊಡೆಕಂಡಕಂಡವರಿಗೆ ಕರೆದು ಮೃಷ್ಟಾನ್ನವತಿಳಿ ನೀರು ಕೊಡುವಂಥ ವರವ ಕೊಡೆ 4ಲಕ್ಷ್ಮೀನಾರಾಯಣನ ವಕ್ಷಸ್ಥಳದಲ್ಲಿಲಕ್ಷ್ಮಣವಾಗಿರುವಂಥ ಮಹಾಲಕ್ಷ್ಮಿಅಷ್ಟೈಶ್ವರ್ಯವು ಪುತ್ರಸಂತಾನವಕೊಟ್ಟು ರಕ್ಷಿಸುವವಮ್ಮ ವರವ ಕೊಡೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ