ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಧನ್ಯರೋ ಸುಖಿಸುವರು ಗೋಕುಲದವರು | ಗೋವಿಂದನೊಳು ಕ್ರೀಡಿಸುವರು ಗೋಗೋವಳರು ಧ್ರುವ ಭಾವಿಸೆ ಮಖದಲ್ಲಿದಾವ ಸಾರಾಯ ಕೊಂಬಾ | ದೇವಗೋಪಾಲಕರ ಕರಿಸಿ | ಬುತ್ತಿಯ ತರಿಸಿ | ಸವಿಸವಿದುಂಬುವರ ವೆರಸಿ | ಕೈಯೊಳಿರಿಸಿ | ಅವರತನ್ನಂಜಲೆಂಬ ದೂರಿಸಿ ನಲುವಾದರಿಸಿ 1 ಸಿರಿರಮಣಿಯ ಕೂಡ ಸರಸದಿ ಕುಚವಿಡಿದಾ | ಕರದಿನವೀನ ತೃಣವಾ ಕಡಿದು ಕವಳವಿಡಿದು | ಕರೆದು ಆವಿನ ಪೆಸರಾ ನುಡಿದು ಕುಡವಾವಿ ನಡೆದು | ಕರುಣದಿ ಚಪ್ಪರಿಸುವಾ ಜಡಿದು ಮೈಯನಡದು 2 ಅನಂದಿನ ಧ್ಯಾಯಿಸುವಾ ಮುನಿಮನದಲ್ಲಿ ಹೊಳೆಯಾ | ಚಿನುಮಯ ಗೋಪಿಯರಾವಳಿಯಾ ಯೋದ್ಧುಳಿಯಾ | ಅನುವಾಗಿದೋವರ್ತನಕಳಿಯಾ ವರ ಬಳಿಯಾ | ಘನಮಹಿಪತಿ ಸ್ವಾಮಿ ನೆಲಿಯಾ ಬೊಮ್ಮತಾ ತಿಳಿಯಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗೋಪಿ ಹಾಡಿ ದಣಿಯಳೂ ಪ ನೋಡಿ ಹಾಡಿ ಹೊಗಳಿ ಕೃಷ್ಣಗೆ ಮಾಡಿ ಮಾಡಿ ಸಿಂಗರವನು ಅ.ಪ ಮಣ್ಣತಿಂದು ಚಪ್ಪರಿಸುವ ಚಿಣ್ಣನೆಡೆಗೆ ಓಡಿಬಂದು ಸಣ್ಣಬಾಯ ಬಿಡಿಸಿ ವಿಶ್ವವ ಕಣ್ಣಿನಿಂದ ಕಂಡು ನಲಿದು 1 ವಿಕಳೆಯಸುವ ಹೀರಿ ಕುಣಿದು ಶಕಟಖಳನನೊದ್ದು ಕೊಂದು ಬಕನ ಸೀಳಿ ಫಣಿಯ ತುಳಿದ ವಿಕಸಿತಾಂಗನ ಹಾಡಿ ಹೊಗಳಿ 2 ಗಿರಿಯನೆತ್ತಿ ಬೆರಳಿನಿಂದ ಕರದಮುರಳಿನಾದದಿಂದ ಧರೆಯ ದಿವಿಯಗೈದ ಮಾಂಗಿರಿಯರಸರಂಗನಂಗವ ನೋಡಿ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್