ತುಳಸಿ
ತುಳಸಿ ಪೂಜೆ ಮಾಡಿ ಹರಿ ಪ್ರೇಮದ ಪ.
ಹಳದಿ ಕುಂಕುಮ ಪರಿಮಳದ ಗಂಧದಿ
ಅಂಗಳದಿ ಶೋಭಿಪ ಹರಿಸತಿ ಅ.ಪ.
ಆದಿಯಲಿ ತಾ ಮೋದದಿಂದಲೆ
ಮಾಧವ ಪ್ರಿಯೆಯನು ದ್ರೌಪದಿ ಪೂಜಿಸೆ
ಮೋದದಿಂದಕ್ಷಯ ಪಾತ್ರೆಯೊಳ್ ಪಾಕವ
ಸತಿ ತುಳಸಿ 1
ಪರಿಪರಿ ಭಾಗ್ಯಕೆ ಹಿರಿಮೆ ಶ್ರೀ ತುಳಸಿ ಯೆಂ
ದರುಹಿದ ನಾರದ ವರ ವಚನವು ಎಂದು
ಪರಮಾದರದೊಳು ಪೂಜಿಸಿ ತುಳಸಿಯ
ಹರಿಗೆ ಅರ್ಪಿಸೆ ಹರುಷವ ಕೊಡುವ 2
ಉದಯ ಕಾಲದಿ ಮುದದಿ ಪೂಜಿಸಿ
ಮಧುರ ಸ್ವರದಿ ಮಾಘದ ಮಾಸದಲಿ
ಮುದದಲೊಂದಿಸೆ ವದಗಿದಾಪತ್ತನು
ಚದರಿಸಿ ಕಳೆದು ಶ್ರೀ ಶ್ರೀನಿವಾಸನ
ಮುದದಿ ತೋರುವ ಶ್ರೀ ತುಳಸಿ 3