ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(39ನೇ ವರ್ಷದ ವರ್ಧಂತಿ) ಭೂವರ ಭಾಗ್ಯದೇವಿಯ ಕೂಡಿ ಶುಭಕಾರಿ ಪ. ಏಕೋನ ಚತ್ವಾರಿಂಶತಿವತ್ಸರವು ಸಂತು ರಾಕುತನದೊಳೆನಗೆ ಬೇಕು ಬೇಕೆಂಬಾಶಾಪಾಶವ ಸುಡಲಾರೆ ಭೀಕರಗೊಳಿಪ ಬಗೆ ಮಾಕಳತ್ರನೆ ಸುಮ್ಮನ್ಯಾಕುಪೇಕ್ಷಿಪೆ ಕರು ಣಾಕರ ಕಡೆಗಣ್ಣಿಂದಲಿ ನೋಡು ಕಮಲಾಕ್ಷ 1 ಹಲವು ಹಂಬಲಿಸುತ ಬಳಲಿದೆ ದಿನದಿನ ಗಳಿತವಾಗಿಹ ದೇಹದಿ ಬಲವು ಕುಂದಿತು ಒಂದು ನೆಲೆಯ ಕಾಣದು ಕಳ- ವಳಿಕೆಯಿಂದಲಿ ಮನವು ಮೊಲೆಯ ಕಂದನೊಳ್ ಫಲ ಸಲುವುದೆ ಮಾತೆಗೆ ನಳಿನನಾಭನೆ ಎನ್ನ ತಪ್ಪೆಣಿಸದಿನ್ನು 2 ನಿನ್ನ ನಾಮವ ನಂಬಿ ನೆನೆವರಿಗಖಿಳಾರ್ಥ ಸನ್ನಹ ಸುಲಭನೆಂದು ಮುನ್ನಿನ ಮುನಿಗಳು ನುಡಿದ ಮಾತನು ಶ್ರುತಿ ಸನ್ನುತ ಮರೆಯಲೆಂದು ಎನ್ನ ಮನೋರಥ ಕೊಡುತ ಕರುಣಾಸಿಂಧು ಪನ್ನಗಾಚಲನಾಥ ಪಾವನಕರ ಬಂಧು 3
--------------
ತುಪಾಕಿ ವೆಂಕಟರಮಣಾಚಾರ್ಯ