ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋವಿಂದ ನಿನ್ನಾನಂದದಲ್ಲಿಡೋ ಗೋವಿಂದ ಪ ಗೋವಿಂದ ಹೃದಯಾರವಿಂದದಲ್ಲಿ ಇಂದೂ ಮುಂದೂ ಚರಣಾರವಿಂದ ತೋರೊ ಅ.ಪ ಬೆಟ್ಟದ ದರುಶನ ಲಾಭವು ಕಷ್ಟ ಪಟ್ಟರು ದೊರೆಯಲಸಾಧ್ಯವು ನೋಡೆ ಸುಟ್ಟು ಹೋಗುವುದಘರಾಶಿಯು ಪಟ್ಟ ಶ್ರಮವು ಇಷ್ಟಾರ್ಥವು ದಿಟ್ಟ ಮನವ ಕೊಟ್ಟು ಅಟ್ಟುರಿಯ ಕಳೆದು ಮೆಟ್ಟು ಮೆಟ್ಟಲನೇರಿ ದಿಟ್ಟಿಪರೋ ನಿನ್ನ1 ಪದುಮಜಾಂಡ ಕೋಟಿ ನಾಯಕ ದೇವ ಶ್ರೀದ ಸೃಷ್ಟಾದ್ಯಷ್ಟ ಕರ್ತೃ ನೀನೆ ಆದ್ಯಂತ ಜಗದಾಧಾರಕ ಅಂತರಾತ್ಮಕ ವಿಶ್ವವ್ಯಾಪಕ ಆದಿಮೂಲ ಚತುಷ್ಪಾದ ಎಂದೆನಿಸಿ ತ್ರಿ- ಪಾದ ಇಳೆಯೊಳಿಟ್ಟೆ 2 ಸದಮಲಾತ್ಮಕನೇ ದೇವ ಸರ್ವದಾ ಎಲ್ಲಾ ಹದಿನಾಲ್ಕು ಲೋಕವ ಧರಿಸಿದೆ ದಿವ್ಯ ನೆಲೆಸಿದೆ ಸರ್ವರ ಹೃದಯದ ಪದುಮದಲಿ ಪೊಳೆದು ತ್ರಿಜಗವಂದಿತನಾಗಿ ಮೇದಿನಿಯೊಳು ಮೆರೆಯುತಿಹೆ 3 ಧ್ವಜವಜ್ರಾಂಕುಶಯುಕ್ತಲಾಂಛನ ದೆÉೀವ ಅಬ್ಜಭವಾರಾಧ್ಯ ಚರಣದಿವ್ಯ- ಅಬ್ಜಸಖಕೋಟಿಕಿರಣ ಪಾದಾಭರಣದಿಂದ ಕಿರಣಾ ತಾ ಝಗಝಗಿಸುತ್ತ ನೂಪುರ ಕಾಲಂದಿಗೆ ಗೆಜ್ಜೆ ಸಜ್ಜುಗೊಂಡಿಹ ಮೂರ್ಜಗದೊಡೆಯನೆ ಹರಿ 4 ತಟಿತಕೋಟಿನಿಭಸಮಕಾಯ ಕಟಿಯ ದಿವ್ಯರತ್ನಖಚಿತದಟ್ಟಿಯಾ ತೊಟ್ಟ ಪಟ್ಟೆಪೀತಾಂಬರ ಬಟ್ಟೆಯಾ ಸೊಂಟಪಟ್ಟಿಯ ಇಟ್ಟ ಪರಿಯಾ ಅಟ್ಟಹಾಸದಿ ನಿಂದ ಸೃಷ್ಟಿಗೊಡೆಯ ಮನೋ- ಭೀಷ್ಟದಾಯಕ ಬೆಟ್ಟದೊಡೆಯನೆ 5 ಕರಚತುಷ್ಟಯದಲ್ಲಿ ಮೆರಯುವಾ ಶ್ರೀ ಸು- ದರ್ಶನ ಶಂಖದಿಂದಿರುವಾ ದೀನ ಶರಣಜನರಿಗಭಯ ಹಸ್ತವಾ ಕರೆದು ನೀಡುವ ಕಾಮಿತಾರ್ಥವ ಪರಿಪರಿ ಭಾಪುರಿ ಭುಜಗಾಭರಣಾದಿಗಳ ಧರಿಸಿರುತ ಭಕ್ತಜನರಘ ಹರಿಸುವಾ6 ವಕ್ಷಸ್ಥಳದಲ್ಲಿ ಶ್ರೀವತ್ಸವೂ ಕಂಠ ದಕ್ಷಿಣದಲ್ಲಿ ತೋರ ನಕ್ಷತ್ರದಂತಿಹ ಹಾರವೂ ಕುಕ್ಷಿ ಅಂದವೂ ಮೋಕ್ಷದಾತೃವು ಅಕ್ಷರ ವಾಚ್ಯತ್ರ್ಯಕ್ಷಾದಿ ಸುರವಂದ್ಯ ಈ ಕ್ಷಿತಿಗಿಳಿದು ಪ್ರತ್ಯಕ್ಷನಾಗಿ ನಿಂದೆ 7 ಮಂದಹಾಸಮುಖ ಅರವಿಂದ ದಂತ ಚಂದಕರ್ಣಕುಂಡಲದಿಂದ ಕೆಂದುಟಿಯಿಂದ ಒಪ್ಪುವ ಚೆಂದ ಪೊಂದಿ ಮಕುಟ ಸರ್ವಾಲಂಕಾರ ಪರಿಪೂರ್u ಬಂಧ ಮೋಚನ ಹರಿ ಶ್ರೀ ವೇಂಕಟೇಶನೆ 8 ಪರಿಪರಿ ಮುಕ್ತಜೀವರುಗಳು ಇಲ್ಲಿ ಪರಿವಾರ ತರುಲತೆ ಶಿಲೆಗಳು ಇನ್ನು ವಿರಜೆ ಮೊದಲಾದ ಸರ್ವತೀರ್ಥವು ಸ್ವಾಮಿ ತೀರ್ಥವೂ ಮೋಕ್ಷದಾತೃವೂ ಭವ ಶಕ್ರಾದಿನುತಉರಗಾದ್ರಿವಾಸವಿಠಲ ಜಗದೀಶನೆ 9
--------------
ಉರಗಾದ್ರಿವಾಸವಿಠಲದಾಸರು
ಶ್ರೀ ಮಧ್ವಮತವೆಂಬಕ್ಷೀರಪಾರಾವಾರ|ಸೋಮನೆನಿಸುತಿಹ ವರದೇಂದ್ರ ಕರಸಂಜಾತ |ನೀ ಮಹಿಯೊಳಾವಾವಪರಿಕಾಣಿಸುವ ನೋಡಿರಾಮ ಪದ ಜಲಜ ಭೃಂಗ ಪಕುಂಡಲಿಯೊ ಭಾರತಿಯೊ ಈಶನೊ ಎಂದುದ್ವಿಜ|ಷಂಡ ತುತಿಸುವುದು ಶ್ರೀ ಭುವನೇಂದ್ರ ರಾಯರಾ |ಕಂಡು ಪದಯುಕ್ತ ಪುರುಷಾಕಾರ ಶಿಖಾರಹಿತ ಕೂಡದಿದುಯೆನಲು ಪೇಳ್ವೆ ||ದಂಡಧರ ಯೋಗದಾಢ್ರ್ಯದೊಳು ತಾ ಅಹಿಯಂತೆ |ಪಂಡಿತೇಶನು ವಾಗ್ಬಲದಲಿ ಭಾರತಿಯಂತೆ |ರುಂಡಮಾಲಿಯ ತೆರದಿ ತೋರುವರು ವೈರಾಗ್ಯದಲಿ ನಿರುತ ಭಜಿಸುವರಿಗೆ 1ವಿಧಿಯೊ ಅರ್ಕನೊ ಇಂದ್ರನೋ ಎಂಬ ತೆರದಿಂದ |ಬುಧಜನಕೆ ತೋರ್ವನಾಲ್ಮೊಗಖಗಸಹಸ್ರಾಕ್ಷ |ಇದು ಯೆಂತು ಸಾಮ್ಯವೆನೆ ಸರ್ವಜನ ಯೋಗ್ಯತೆಯನರಿವಂತೆ ಧಾತನಂತೇ ||ಮದಡಜ್ಞಾನಾಖ್ಯ ತಮವಳಿವಲ್ಲಿ ರವಿಯಂತೆ |ಪದುಮೇಶನ ಗುಣವ ವಿಚಾರಿಸಲನೇಕಾಕ್ಷ |ಚದುರನೆನುವ ಬಗೆಯಿಂದೊಪ್ಪುತಿಹ ನಮ್ಮ ಗುರುವ ತುತಿಸುವೊದಕ್ಕೆನ್ನ ವಶವೆ 2ಕಡಲೊ ಸುರಧೇನವೊ ಹಂಸನೋ ಯೆಂಬಂತೆ |ಪೊಡವಿಗೆ ವಿರಾಜಿಸುವ ಉದಕಮಯವಾಗಿಹದು |ಕಡು ಚತುಷ್ಪಾದಿಅಂಡಜಜಂತು ಈ ಸಾಮ್ಯ ಸಲ್ಲದೆನೆ ಸಲ್ವ ವಿವರ ||ಒಡಲಿನೊಳು ಪ್ರಾಣೇಶ ವಿಠಲಮಣಿಪೊಳೆವುತಿದೆ |ಕೊಡುವ ಬೇಡಿದ ವರವ ಅಮರರಾಕಳಿನಂತೆ |ಕುಡಿವಂತೆ ಹಂಸ ಪಯ ಜಲವುಳಿದು ದೋಷವೆಣಿಸದೆ ಬಿನ್ನಪವ ಲಾಲಿಪ 3
--------------
ಪ್ರಾಣೇಶದಾಸರು