ಧ್ಯಾನಿಸುವ ಸುಜನರಿಳೆಯೊಳೇನು ಧನ್ಯರೊ ಪ
ಶ್ರೀನಿಧಿ ನಮ್ಮ ನಾರಾಯಣನ ಚರಣಕಮಲವ ಅ.ಪ
ಬ್ರಹ್ಮ ರುದ್ರ ಪ್ರಮುಖ ಸುರರಿಗೇನು ಮೂಲವೊ
ಸಮ್ಮತಿ ವೇದ ಶಾಸ್ತ್ರ ಪುರಾಣವೇನು ಪೇಳ್ವುದೊ 1
ಕಾಲಕರ್ಮ ಜೀವ ಮಾಯ ಯಾರಧೀನವೊ
ಮೇಲೆ ಅನುಭವದಲಿ ತಿಳಿವುದದುವೆ ಜ್ಞಾನವೊ 2
ಅರ್ಥ ಚತುಷ್ಠಯವ ಕೊಡುವ ಪಾರ್ಥಸಾರಥಿ
ಕರ್ತಾ ಭೋಕ್ತಾ ಗುರುರಾಮವಿಠಲ ಮೂರುತಿ3