ಒಟ್ಟು 6 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅನಂತಚತುರ್ದಶಿಯ ದಿನದ ಪ್ರಾರ್ಥನೆ) ಪದ್ಮನಾಭ ಪರಿಪಾಲಿಸು ದಯದಿಂದ ಪದ್ಮಜಾದಿ ವಂದ್ಯ ಪರಮ ದಯಾಳೊ ಪದ್ಮಿಯಳರಸ ಹೃತ್ಪದ್ಮನಾಮಕ ಸ್ವರ್ಣ ಸದ್ಮ ವೃತ್ತಿಪದಪದ್ಮವ ತೋರೊ ಪ. ಚಿಂತಿತದಾಯಕ ಸಂತರ ಕುಲದೈವ ಕಂತು ಜನನಿಯೊಡಗೂಡಿ ನೀನು ನಿಂತು ಎನ್ನಲಿ ಕೃಪೆ ಮಾಡೆಂದು ನಮಿಪೆ ಧು- ರಂತ ಮಹಿಮ ನಿನ್ನ ಚರಣಾಬ್ಜಯುಗಲಾ 1 ಆದಿ ಮಧ್ಯಾಂತವಿದೂರ ನಿನ್ನಲಿ ಮಹ ದಾದಿ ತತ್ವಗಳೆಲ್ಲ ನಿಂತಿಹವು ಆದಿ ಭೌತಿಕ ಮೊದಲಾದ ತಾಪಗಳನ್ನು ಶ್ರೀದ ನೀ ಬಿಡಿಸಲು ಸದರವಾಗಿಹವು 2 ಒಂದರಿಂದೊಂದಾದರಿಂದ ಮೂರು ಮೂರ್ತಿ ಇಂದಿರೆ ಸಹಿತಾವಿರ್ಭೂತನಾಗಿ ಮುಂದಿನ ಮಹದಾದಿ ತತ್ವವ ನಿರ್ಮಿಸಿ ನಿಂದನಂತಾಸಂತರೂಪನಾದವನೆ 3 ಭವ ಚಕ್ರದೊಳು ತಂದು ನವ ನವ ಕರ್ಮಗಳನೆ ಮಾಡಿಸಿ ಅವರ ಯೋಗ್ಯತೆ ಮೀರದಲೆ ಫಲಗಳನಿತ್ತು ನಿತ್ಯ ತೃಪ್ತನಾಗಿರುವಿ 4 ಮಛ್ವಾದ್ಯನಂತವತಾರಗಳನೆ ಮಾಡಿ ಸ್ವೇಚ್ಛೆಯಿಂದ ಸುಜನರ ಸಲಹಿ ಕುಚ್ಛಿತ ಜನರಿಗೆ ತುಚ್ಛಗತಿಯನೀವೆ ಸ್ವಚ್ಛ ಬ್ರಮ್ಹಾದಿಕ ವಿವ್ಛಾ(?)ವಿಷಯನೆ 5 ನಾನಾವತಾರದಿ ನಂಬಿದ ಸುರರಿಗೆ ಆನಂದವಿತ್ತು ರಕ್ಷಿಪೆ ಕರುಣದಿ ದಾನವರಿಗೆ ಅಧ:ಸ್ಥಾನವ ನೀಡುವಿ ಮಾನವರನು ಮಧ್ಯಗತರ ಮಾಡಿಸುವಿ 6 ಹಿಂದೆ ಮುಂದಿನ ಭವದಂದವ ತಿಳಿಯದ ಮಂದಾಗ್ರೇಸರ ನಾನಾದೆಂಬುದನು ಅಂಧಕರಾರಣ್ಯದಿಂದ ಮೂಢನಾದಂ ದಿಂದ ಬಿನ್ನೈಪೆನು ಇಂದಿರಾಧವನೆ 7 ಮಾಡುವ ಕರ್ಮವು ನೋಡುವ ವಿಷಯಗ- ಳಾಡುವ ಮಾತು ಬೇಡುವ ಸೌಖ್ಯವು ನೀಡುವ ದಾನವೋಲ್ಯಾಡುವ ಚರ್ಯವ ನೋಡಲು ತಾಮಸ ಪ್ರಹುಡನಾಗಿಹೆನು 8 ಆದರು ನಿನ್ನಯ ಪಾದಾರವಿಂದ ವಿ- ನೋದ ಕಥಾಮೃತ ಪಾನದೊಳು ಸ್ವಾದ ಲೇಶದಾದರ ತೋರ್ಪದ- ನಾದಿ ಮೂರುತಿ ನೀನೆ ತಿಳಿಸಬೇಕದನೂ 9 ಇದರಿಂದಲೇ ಮುಂದೆ ಮದನನಯ್ಯನೆ ನಿನ್ನ ಪದವ ಕಾಣುವೆನೆನುತೊದರುವೆನು ಹೃದಯ ಮಂಟಪದಿ ನೀ ಹುದುಗಿರುವುದರಿಂದ ಕದವ ತೆರೆದು ತೋರೊ ವಿಧಿಭವವಿನುತಾ 10 ಕನ್ನೆ ಸುಶೀಲೆಯ ಕರಸೂತ್ರ ರೂಪದ ನಿನ್ನ ತಿಳಿಯದೆ ಕೌಂಡಿಣ್ಯನಂದು ಮನ್ನಿಸದಿರೆ ಮದ ಮೋಹಗಳೋಡಿಸಿ ನಿನ್ನ ರೂಪವ ತೋರ್ದ ನಿಜಪೂರ್ಣ ಸುಖದಾ 11 ಬ್ರಹ್ಮಾದಿಗಳನೆಲ್ಲ ನಿರ್ಮಿಸಿ ರಕ್ಷಿಸಿ ತಮ್ಮ ತಾವರಿಂiÀiದ ನಿಮ್ಮ ಸ್ತುತಿಪರೆ ಕು- ಕರ್ಮಿ ನಾನೆಂದಿಗಾದರೂ ಶಕ್ತನಹುದೆ 12 ಅದು ಕಾರಣದಿಂದ ಪದುಮನಾಭ ನಿನ್ನ ಪದ ಕಮಲಗಳಲಿ ರತಿಯನಿತ್ತು ಸದರದಿ ಸಲಹಯ್ಯ ವಿಧುಶೇಖರಾರ್ಚಿತ ಮದನನಯ್ಯ ಮರುದಾದಿ ವಂದಿತನೆ 13 ದೋಷರಾಶಿಗವಕಾಶನಾದರೂ ಯೆನ್ನ ಶ್ರೀಶ ನಿನ್ನ ದಾಸದಾಸನೆಂದು ಘೋಷವಾದುದರಿಂದ ಪೋಷಿಸಬೇಕಯ್ಯ ಶೇಷಗಿರೀಶ ಸರ್ವೇಶ ನೀ ದಯದಿ 14
--------------
ತುಪಾಕಿ ವೆಂಕಟರಮಣಾಚಾರ್ಯ
ಚತುರ್ದಶಿಯ ದಿನ (ಹನುಮಂತನನ್ನು ಕುರಿತು) ರಂಭೆ : ಇವನ್ಯಾರೆ ದೂರದಿ ಬರುವವ ಇವನ್ಯಾರೆಪ. ಇವನ್ಯಾರೆ ಮಹಾಶಿವನಂದದಿ ಮಾ- ಧವನ ಪೆಗಲೊಳಾಂತು ತವಕದಿ ಬರುವವ1 ದಾಡೆದಂತಮಸಗೀಡಿರುವದು ಮಹಾ ಕೋಡಗದಂತೆ ಸಗಾಢದಿ ಬರುವವ2 ಕಡಲೊಡೆಯನು ಮೃದುವಡಿಯಡರಿಸಿ ಬಿಡ ದಡಿಗಡಿಗಾಶ್ರೀತರೊಡಗೂಡಿ ಬರುವವ3 ಊರ್ವಶಿ :ನಾರಿ ಕೇಳೆಲೆಗೆ ವೈಯಾರಿ ನೀ ಮುದದಿ ನಾರಾಯಣನಿಗೀತ ಬಂಟನಾದಾದರಿದಿ ವೀರ ರಾಮವತಾರದಿ ಹಿಂದೆ ಹರಿಯ ಚಾರಕನಾಗಿ ಸೇವೆಯ ಗೈದ ಪರಿಯ ಕ್ರೂರ ದಶಾಸ್ಯನ ಗಾರುಗೆಡಿಸಿ ನೃಪ ವೀರನ ಪೆಗಲಿನೊಳೇರಿಸಿ ದೈತ್ಯರ ಭೂರಿವಧೆಗೆ ತಾ ಸಾರಥಿಯಾದವ ಕಾರುಣೀಕ ಮಹಾವೀರ್ಹನುಮಂತ1 ಆಮೇಲೆ ವೀರಾವೇಶದಿ ವಾರಿಧಿಯನು ರಾಮನಪ್ಪಣೆಯಿಂದ ದಾಟಿದನಿವನು ಭೂಮಿಜೆಗುಂಗುರ ಕೊಟ್ಟ ನಂತರದಿ ಕಾಮುಕರನು ಸದೆಬಡಿದನಾ ಕ್ಷಣದಿ ಹೇಮಖಚಿತ ಲಂಕಾಮಹಾನಗರವ ಹೋಮವ ಗೈದು ಸುತ್ರಾಮಾರಿಗಳ ನಿ- ರ್ನಾಮಿಸಿ ಸೀತೆಗೆ ತಾ ಮಣಿಯುತ ಚೂ- ಡಾಮಣಿ ತಂದ ಮಹಾಮಹಿಮನು ಇವ2 ವಾರಿಮುಖಿ ನೀ ಕೇಳಿದರಿಂದ ಬಂದ ವೀರ ಹನುಮಂತನನೇರಿ ಗೋವಿಂದ ಸ್ವಾರಿಗೆ ಪೊರಟ ಚಾತುರ್ದಶಿ ದಿವಸ ಆರತಿಯನು ಕೈಕೊಳ್ಳುವ ಶ್ರೀನಿವಾಸ ಭೇರಿ ಮೃದಂಗ ಮಹಾರವದಿಂದ ಸ- ರೋರುಹನಾಭ ಮುರಾರಿ ಶರಣರು ದ್ಧಾರಣಗೈಯುವ ಕಾರಣದಿಂದ ಪಾ- ದಾರವಿಂದಗಳ ತೋರಿಸಿ ಕೊಡುವ3 ಬಳಿಕ ಪಲ್ಲಂಕಿ ಏರಿದ ಕಾಣೆ ನಾರಿ ನಲವಿಂದ ವೇದಘೋಷವ ಕೇಳ್ವ ಶೌರಿ ಜಲಜಭವಾದಿ ನಿರ್ಜರರಿಗಸಾಧ್ಯ ಸುಲಭನಾದನು ಭಕ್ತಜನಕಿದು ಚೋದ್ಯ ಸುಲಲಿತ ಮಂಟಪದೊಳೊ ನೆಲಸುತ ನಿ- ಶ್ಚಲಿತಾನಂದ ಮಂಗಲದ ಮಹೋತ್ಸವ ಗಳನೆಲ್ಲವ ಕೈಕೊಳುತಲಿ ಭಕ್ತರ ಸಲಹುವ ನಿರುತದಿ ಮಲಯಜಗಂಧಿನಿ4 ಶ್ರೀಕಾಂತ ಬಳಿಕ ಭಕ್ತರ ಒಡಗೂಡಿ ಏಕಾಂತ ಸೇವೆಯಗೊಂಡ ಕೃಪೆಮಾಡಿ ಸಾಕಾರವಾಗಿ ತೋರುವ ಕಾಣೆ ನಮಗೆ ಬೇಕಾದ ಇಷ್ಟವ ಕೊಡುವ ಭಕ್ತರಿಗೆ ಶ್ರೀಕರ ನಾರಾಯಣ ಶ್ರೀನಿವಾಸ ಕೃ- ಪಾಕರ ವಿಬುಧಾನೇಕಾರ್ಚಿತ ರ- ತ್ನಾಕರಶಯನ ಸುಖಾಕರ ಕೋಟಿ ವಿ- ಚಾರಕ ಭಾಸತ್ರಿಲೋಕಾಧಿಪನಿವ5
--------------
ತುಪಾಕಿ ವೆಂಕಟರಮಣಾಚಾರ್ಯ
ಜ್ಯೇಷ್ಠಾಭಿಷೇಕ ಗೀತೆ ನೋಡಿದೆ ಜ್ಯೇಷ್ಠಾಭಿಷೇಕದುತ್ಸವವ ಸೃಷ್ಟಿಯೊಳಾಶ್ಚರ್ಯವಾ ಪ. [ಒಪ್ಪುವ] ಮಿಥುನಮಾಸದ ಶುಕ್ಲಪಕ್ಷ ಚತುರ್ದಶಿಯಲ್ಲಿ ವಿಪ್ರರು ಕೂಡಿ ಸಹ್ಯೋದ್ಭವೆಯನ್ನು ತರುವೆವೆಂದೆನುತಲೆ ವಿಪ್ರರು ಪೋದ ವಿಚಿತ್ರ[ವ] ನೋಡಿದೆ 1 ಅಂದು ಗಜೇಂದ್ರನ ತಂದು ಸಿಂಗಾರ ಮಾಡಿ ಕುಂದಣದ ಛತ್ರಿ ಚಾಮರ ಬೀಸುತ್ತ ವಿಪ್ರರು ಬರುವುದ 2 ವೇದಘೋಷಗಳಿಂದ ವಿಪ್ರರು ಕೊಡಗಳ ವಿ ನೋದದಿಂದಲೆ ಪೊತ್ತು ತಾ[ಳ] ತಮ್ಮಟೆ ಭೇರಿ ನಾನಾ ವಾದ್ಯಂಗಳ ಮುಂದೆ ರಜತದಕೊಡ ಬರುವ ವೈಭೋಗವ 3 ಕರಿ ಕೊಡವನ್ನು ಇಳಿಸಲು ಅಸಮಾನ [2ನಿ2]ರಿಗಳ ಬಿಚ್ಚಿ ಹೊಸಬಟ್ಟೆಗಳ ಹಾಸಿ ಕುಶಲದಿಂದಲೆ ಹೊಲೆದು ಪೊಸದಾಗಿ ಕಟ್ಟುವತಿಶಯ[ವ] 4 ಗರ್ಭಗೃಹವು ಗಾಯಿತ್ರಿ ಮಂಟಪವನ್ನು ಶುಭ್ರವಾಗಿಯೆ ತೊಳೆದು ಘಮಘಮಿಸುವ ದಿವ್ಯ ಪರಿಮಳ ವು ಬರುವಂಥ ಗಂಧÀವ ತಳಿದರು ಅಂದು ಆಲಯಕ್ಕೆಲ್ಲ 5 ಭಕ್ತರಿಗೆ ತೊಟ್ಟಕವಚವ ಕಳೆದು ಅಭಯ ಹಸ್ತ ಪಾದವ ನಿತ್ತು ಕಸ್ತೂರಿ ಕಮ್ಮೆಣ್ಣೆ ಒತ್ತಿ ಸಂಭ್ರಮದಿಂದ ಮಿತ್ರಸಹಿತ ನಿಂದ ಭಕ್ತವತ್ಸಲ ರಂಗ 6 ಛಂದದಿ ಇಕ್ಷುರಸವು ಚೂತ ಕದಲಿ ರಸಂಗಳು ದಧಿ ತಿಂತ್ರಿಣಿ ನಿಂಬೆರಸ ಕ್ಷೀರ ಘೃತಗಳಿಂದ ಆ ನಂದದಿ ಯೆರೆದರು ಇಂದಿರೆರಮಣಗೆ 7 ಕೇಸರಿ ಪುನಗಿನ ತೈಲವನೆ ತೆಗೆದು ವಾಸುಕಿಶಯನಗೆ ಲೇಪವನು ಮಾಡಿ ಸ ಹಸ್ರಕೊಡದ ಅಭಿಷೇಕವ ಮಾಡಿದರು 8 ಪಟ್ಟುಪೀತಾಂಬರವನುಟ್ಟು ಶ್ರೀರಂಗನು ಕಳೆದ ಕವಚ ತೊಟ್ಟು ಹತ್ತುಸಾವಿರಸೇರಿನ ಅಕ್ಕಿ ಅನ್ನವ ನಿಟ್ಟು ವಿಪ್ರರು ಸುರಿದರು ವಿಸ್ತಾರವಾಗಿಯೆ9 ದಧಿ ಕದಳಿ ಫಲದಿಂದ ನೈ [ವೃಂದಕ್ಕೆ] ಕರೆಕರೆದು ಕೊಡುವ ಪರಿಯ ನಾ 10 ರಂಗನಾಯಕಿ ಪಟ್ಟದರಸಿ [ವೆರಸಿ]ನರಹರಿ ಚಕ್ರಮೂರುತಿಗೆ ಆಗ ಕಲ್ಪೋಕ್ತದಿಂದಭಿಷೇಕವ ಮಾಡೆ ಕರ್ಪೂರ ತೈಲವ [ಲೇ ಸಾಗಿ]ಹಚ್ಚಿ ಮಲಗಿದ ವೆಂಕಟರಂಗ[ನ] 11
--------------
ಯದುಗಿರಿಯಮ್ಮ
ಶ್ರೀ ವಿಷ್ಣು ತೀರ್ಥ ಅಣು ವಿಜಯ ಅರಣ್ಯಕಾಚಾರ್ಯ ಶ್ರೀವಿಷ್ಣು ತೀರ್ಥಾರ್ಯರ ಚರಣಸರಸೀರುಹದಿ ಶರಣಾದೆ ಸತತ ಹೊರ ಒಳಗೆ ಪ್ರಜ್ವಲಿಪ ಅನಘಗುಣ ಪರಿಪೂರ್ಣ ಸಿರಿವರ ಹರಿಕೃಪಾ ಪ್ರಸಾದವೊದಗಿಸುವ ಪ ಪಾದ ಸೇವಿಸಿದ ಫಲವಾಗಿ ಭಾಗೀರಥಿ ಬಾಳಾಚಾರ್ಯರಲಿ ಜನಿಸಿ ವೇಂಕಟರಾಮಾರ್ಯ ಐಜಿಯವರ ಸುಪವಿತ್ರ ಮುಖ ಪಂಕಜದಿಂದ ಕಲಿತರು ಸಚ್ಛಾಸ್ತ್ರ 1 ಜಯತೀರ್ಥ ನಾಮದಲಿ ಮೊದಲೆರಡು ಆಶ್ರಮ ನಿಯಮದಿ ಚರಿಸಿ ಈ ವೈರಾಗ್ಯ ನಿಧಿಯು ಸತ್ಯಸಂಧರಸುತ ಸತ್ಯವರ ತೀರ್ಥರಿಂ ತುರೀಯಾಶ್ರಮಕೊಂಡ ವಿಷ್ಣು ತೀರ್ಥಾರ್ಯ 2 ಏನು ಧನ್ಯರೋ ಸತ್ಯಧರ್ಮತೀರ್ಥರು ಮತ್ತು ಸೂರಿ ಈರ್ವರಿಗೆ ಅನಘಮಧ್ವಸ್ಥ ಶ್ರೀ ಹಂಸ ವೇದವ್ಯಾಸ ತಾನೇ ಸತ್ಯವರ ದ್ವಾರ ಉಪದೇಶ ಕೊಟ್ಟ 3 ಪೂರ್ವಾಶ್ರಮ ನಾಮ ಜಯತೀರ್ಥಾಂಕಿತದಲ್ಲಿ ತತ್ವಪ್ರಕಾಶಿಕ ಸುಧಾ ಟಿಪ್ಪಣಿಯ ಭಾಗವತ - ಸಾರೋ ದ್ಧಾರವ ಶೋಡಶಿ ಚತುರ್ದಶಿ ಬರೆದಿಹರು 4 ತತ್ವಬೋಧಕ ಸ್ತೋತ್ರ ಬಿನ್ನಹ ರೂಪವು ಆಧ್ಯಾತ್ಮ ರಸರಂಜಿನಿ ಅಮೃತಫÉೀಣ ಭಕ್ತಿಯಲಿ ಪಠಿಸಲು ಅಪರೋಕ್ಷ್ಯ ಪುರುಷಾರ್ಥ ಸಾಧನವಾಗಿಹುದನ್ನು ರಚಿಸಿಹರು ಇವರು 5 ಹದಿನಾರು ಪ್ರಕರಣ ಶೋಡಶಿ ಎಂಬುzರÀಲಿ ಹದಿನಾಲ್ಕು ಪ್ರಕರಣ ಚತುರ್ದಶಿಯಲ್ಲಿ ಬಂಧ ಮೋಕ್ಷಾಂತ ಶೋಡಶಿಯಲ್ಲಿಹುದು ಭಕ್ತಿ ಶುಚಿಯಲಿ ಪಠನೀಯ ರಹಸ್ಯವು 6 ಬಂಧಕವು ಬಂಧ ನಿವೃತ್ತಿಯು ಬಿಂಬ ಪ್ರತಿಬಿಂಬ ಭಾವವು, ಬಿಂಬಸಂಸ್ಥಾಪನವು ಅವಸ್ಥಾತ್ರಯ ನಿರ್ಮಾಣ ಆರನೆಯದು 7 ಪ್ರಾಣವ್ಯಾಪಾರವು ಭೋಜನ ಪ್ರಕರಣವು ಇಂದ್ರಿಯ ವ್ಯಾಪಾರವು ತತ್ವಕಾರ್ಯಹತ್ತು ತನು ಅಧಿಷ್ಠಾನ ರಥಾಧಿ ಪ್ರಕರಣವು ಹನ್ನೆರಡಲಿ ಬೋಧ್ಯ ಜಾಗೃತ್ ಪ್ರಕರಣವು 8 ಸ್ವಪ್ನವು ಸುಷುಪ್ತಿಯು ಗಮನಾಗಮನವು ಶುಭ ಮೋಕ್ಷ ಪ್ರಕರಣ ಷೋಡಶವು ಇನ್ನು ಚತುರ್ದಶಿಯಲಿ ಜೀವಹೋಮ ಮೊದಲಾಗಿ ರತ್ನಗಳು ಗುರು ಪ್ರಸಾದ ಲಾಭ ಪರ್ಯಂತ 9 ಜೀವಹೋಮ - ಉಪನಯನ ಸೂರ್ಯಗತಿ ಯಜ್ಞ ಪವಿತ್ರತಮ ವೇದಾಧ್ಯಯನ ಭಿಕ್ಷಾಟನ ವೈಶ್ವಾನರ ಪ್ರಿಯ ಭೋಜನ ಪಾಪಲೇಪ ಜೀವ ಪ್ರಯಾಣ ಮಾರ್ಗವು ನವಮ 10 ಹತ್ತನೆಯದು ಬ್ರಹ್ಮಯಜ್ಞಲಯ ಚಿಂತನಾಕ್ರಮ ಶುದ್ಧಯಜ್ಞ `ಸ್ವರೂಪಯಜ್ಞ' ಸುಲಭಪೂಜಾ ಹದಿನಾಲ್ಕಲಿ ಗುರುಪ್ರಾಸಾದ ಲಾಭದಲಿ ಆದಿತ್ಯಗ ಮಧು ಸುಖ ಪೂರ್ಣ ವಿಷಯ 11 ಯೋಗ್ಯ ಆಧಿಕಾರಿಗೆ ಮಾತ್ರ ಈಸೌ - ಭಾಗ್ಯಪ್ರದ ಜ್ಞಾನ ಪುಷ್ಠಿಕರಣ ಯುಗುಳ ಮಾತ್ರೆಗಳನ್ನ ವಿನಿಯೋಗಿಸುವುದು ಅಯೋಗ್ಯರಿಗೆ ಸರ್ವಥಾ ಕೊಡಕೂಡದು 12 ಕೃತ ಕೃತ್ಯ ಧನ್ಯಮನದಿಂದಲಿ ಈ ಮಹಾನ್ ಐದಿಹರಿಪುರಲಯವ ಚಿಂತನೆಮಾಡಿ ಹದಿನೇಳ್ ನೂರಿಪ್ಪತ್ತೆಂಟು ಶಕ ಮಾಘ ತ್ರಯೋದಶಿ ಕೃಷ್ಣದಲಿ ಕೃಷ್ಣನ ಸೇರಿದರು 13 ಮತ್ತೊಂದು ಅಂಶದಿ ವೃಂದಾವನದಿಹರು ಭಕ್ತಿಯಿಂ ಸ್ಮರಿಸಿದರೆ ಬಂದು ಸಲಹುವರು ಮಾದನೂರು ಕ್ಷೇತ್ರಸ್ಥ ವೃಂದಾವನ ಸೇವೆ ಭಕ್ತಿಯಲಿ ಮಾಳ್ಪರು ದೇಶ ದೇಶ ಜನರು 14 ಬೃಹತೀಸಹಸ್ರ ಪ್ರಿಯ ಮಹಿದಾಸ ಜಗದೀಶ ಬ್ರಹ್ಮಪಿತ ಭಕ್ತಪಾಲಕ ಪರಮ ಹಂಸ `ಮಹಿಸಿರಿ' ಶ್ರೀ ಪ್ರಸನ್ನ ಶ್ರೀನಿವಾಸನ ಮಹಾಭಕ್ತಿ ಶ್ರೀ ವಿಷ್ಣು ತೀರ್ಥಾರ್ಯರೇ ಶರಣು 15 ಪ || ಸಂಪೂರ್ಣಂ||
--------------
ಪ್ರಸನ್ನ ಶ್ರೀನಿವಾಸದಾಸರು
ಚತುರ್ದಶಿಯ ದಿನ(ಹನುಮಂತನನ್ನು ಕುರಿತು)ರಂಭೆ : ಇವನ್ಯಾರೆ ದೂರದಿ ಬರುವವ ಇವನ್ಯಾರೆ ಪ.ಇವನ್ಯಾರೆ ಮಹಾಶಿವನಂದದಿ ಮಾ-ಧವನ ಪೆಗಲೊಳಾಂತು ತವಕದಿ ಬರುವವ 1ದಾಡೆದಂತಮಸಗೀಡಿರುವದು ಮಹಾಕೋಡಗದಂತೆ ಸಗಾಢದಿ ಬರುವವ 2ಕಡಲೊಡೆಯನು ಮೃದುವಡಿಯಡರಿಸಿ ಬಿಡದಡಿಗಡಿಗಾಶ್ರೀತರೊಡಗೂಡಿ ಬರುವವ 3ಊರ್ವಶಿ : ನಾರಿ ಕೇಳೆಲೆಗೆ ವೈಯಾರಿ ನೀ ಮುದದಿನಾರಾಯಣನಿಗೀತ ಬಂಟನಾದಾದರಿದಿವೀರ ರಾಮವತಾರದಿ ಹಿಂದೆ ಹರಿಯಚಾರಕನಾಗಿ ಸೇವೆಯ ಗೈದ ಪರಿಯಕ್ರೂರ ದಶಾಸ್ಯನ ಗಾರುಗೆಡಿಸಿನೃಪವೀರನ ಪೆಗಲಿನೊಳೇರಿಸಿ ದೈತ್ಯರಭೂರಿವಧೆಗೆ ತಾ ಸಾರಥಿಯಾದವಕಾರುಣೀಕ ಮಹಾವೀರ್ಹನುಮಂತ 1ಆಮೇಲೆ ವೀರಾವೇಶದಿ ವಾರಿಧಿಯನುರಾಮನಪ್ಪಣೆಯಿಂದ ದಾಟಿದನಿವನುಭೂಮಿಜೆಗುಂಗುರ ಕೊಟ್ಟ ನಂತರದಿಕಾಮುಕರನು ಸದೆಬಡಿದನಾ ಕ್ಷಣದಿಹೇಮಖಚಿತ ಲಂಕಾಮಹಾನಗರವಹೋಮವ ಗೈದು ಸುತ್ರಾಮಾರಿಗಳ ನಿ-ರ್ನಾಮಿಸಿ ಸೀತೆಗೆ ತಾ ಮಣಿಯುತ ಚೂ-ಡಾಮಣಿ ತಂದ ಮಹಾಮಹಿಮನು ಇವ 2ವಾರಿಮುಖಿ ನೀ ಕೇಳಿದರಿಂದ ಬಂದವೀರ ಹನುಮಂತನನೇರಿ ಗೋವಿಂದಸ್ವಾರಿಗೆ ಪೊರಟ ಚಾತುರ್ದಶಿ ದಿವಸಆರತಿಯನು ಕೈಕೊಳ್ಳುವ ಶ್ರೀನಿವಾಸಭೇರಿಮೃದಂಗ ಮಹಾರವದಿಂದ ಸ-ರೋರುಹನಾಭ ಮುರಾರಿ ಶರಣರುದ್ಧಾರಣಗೈಯುವ ಕಾರಣದಿಂದ ಪಾ-ದಾರವಿಂದಗಳ ತೋರಿಸಿ ಕೊಡುವ 3ಬಳಿಕ ಪಲ್ಲಂಕಿ ಏರಿದ ಕಾಣೆ ನಾರಿನಲವಿಂದ ವೇದಘೋಷವ ಕೇಳ್ವಶೌರಿಜಲಜಭವಾದಿ ನಿರ್ಜರರಿಗಸಾಧ್ಯಸುಲಭನಾದನು ಭಕ್ತಜನಕಿದುಚೋದ್ಯಸುಲಲಿತ ಮಂಟಪದೊಳೊ ನೆಲಸುತ ನಿ-ಶ್ಚಲಿತಾನಂದ ಮಂಗಲದ ಮಹೋತ್ಸವಗಳನೆಲ್ಲವ ಕೈಕೊಳುತಲಿ ಭಕ್ತರಸಲಹುವ ನಿರುತದಿ ಮಲಯಜಗಂಧಿನಿ 4ಶ್ರೀಕಾಂತ ಬಳಿಕ ಭಕ್ತರ ಒಡಗೂಡಿಏಕಾಂತ ಸೇವೆಯಗೊಂಡ ಕೃಪೆಮಾಡಿಸಾಕಾರವಾಗಿ ತೋರುವ ಕಾಣೆ ನಮಗೆಬೇಕಾದ ಇಷ್ಟವ ಕೊಡುವ ಭಕ್ತರಿಗೆಶ್ರೀಕರ ನಾರಾಯಣ ಶ್ರೀನಿವಾಸ ಕೃ-ಪಾಕರ ವಿಬುಧಾನೇಕಾರ್ಚಿತ ರ-ತ್ನಾಕರಶಯನ ಸುಖಾಕರ ಕೋಟಿ ವಿ-ಚಾರಕ ಭಾಸತ್ರಿಲೋಕಾಧಿಪನಿವ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ