ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ಕಾಂಬೆನೊ ರಾಘವೇಂದ್ರ ಗುರುಗಳನಾ | ಕಾಯ ಆನಂದ ನಿಧಿಯ ಪ ತಾಯಿಯಂದದಿ ನಮ್ಮ ಕಾಯುವ ಧಣಿಯಾ ನ್ಯಾಯ ಸದ್ಗುಣ ಪೂರ್ಣ ಮಾಯಿ ಜಗ ಹರಿಯಾ 1 ಮಾಯಾ ರಮಣನ ನಾಮ ಗಾಯನ ಪರನ ದಾಯಾದಿ ಕುಲವೈರಿ ಶ್ರೇಯ ಬಲಯುತನಾ2 ನರರೂಪ ಧರಿಸಿ ವಾನರÀ ಭಕ್ತವರನಾ ನರಶೌರಿ ಪ್ರೀಯ ದೀನರ ಕಾಯುತಿಹರಾ 3 ಜನರನ ಪೊರೆವನೆಂದೆನುತ ಭೂಮಿಯಲಿ ಜನಿಸಿದ ತನ್ನವನ್ನ ವನುತಿ ಸಹಿತದಲಿ 4 ದುರಿತ ವರೆಕೆ ತಾಮುರುತನಾಗಿಪ್ಪ ಗುರುವೆಂಬ ಸಿರಿಗೆ ಇವ ನಿರಂತರದಿ ಸುರಪಾ 5 ಭಕ್ತರ ಬಯಕೆ ಪೂರೈಪಾ ಸುರತರುವೇ ಶಕ್ತ ವಿರಕ್ತ ಹರಿಭಕ್ತ ಮದ್ಗುರುವೆ 6 ಭುವನದಿಂ ದಾಟಿಸೆ ನೌಕವಾಗಿಹಿನಾ ನವ ಭಕುತಿಯನೀವ ಕುವಿಕುಲ ವರನಾ 7 ಇವನೇ ಗತಿಯೆನೆ ಜ್ಞಾನ ತವಕದಿ ಕೊಡುವಾ 8 ನಿಂದಿಪ ಜನರಲ್ಲಿ ಪೊಂದಿಪ ಪ್ರೇಮ ವಂದಿಪ ಜನರಿಗೆ ಸತತ ಶ್ರೀ ರಾಮ 9 ಶ್ರೀನಿವಾಸ ಪುತ್ರ ಪರಮ ಪವಿತ್ರಾ ಜ್ಞಾನಿ ಜನರ ಮಿತ್ರ ವಿಹಿತ ಚರಿತ್ರಾ 10 ನಷ್ಟ ತುಷ್ಟಿಗೆ ಅಂಜಾ ದುಷ್ಟ ಶೇರಾ ಕಷ್ಟ ಕಳೆಯುವ ನಮ್ಮ ಕೃಷ್ಣ ಪಾರಿಜಾತ 11 ಪೊಳಲುರಿ ಸಖನಾ ಘನಪೊಳಿಯುವ ಪಾದಯುಗವಾ ಘಳಿಗಿ ಬಿಡದಲೆ ನೋಡುತ ನಲಿಯುತಿರುವಾ 12 ಅರಿದು ಈತನೇಯನ್ನ ಗುರುವೆಂಬಗೆ ರುದ್ರಾ ಧುರದೊಳು ಭೀಮ ಗುರುವಿಗತಾ ದಾರಿದ್ರ್ಯಾ 13 ಅನಿಮಿತ್ತ ಬಂಧು ಬ್ರಾಹ್ಮಣ ವಂಶಜಾ ಭವ ತ್ರಾತಾ 14 ತಪ್ಪು ನೋಡದಲೆ ಕಾಯುತಿಪ್ಪ ನಮ್ಮಪ್ಪ ಸರ್ಪ ತಲ್ಪನ ಧ್ಯಾನದಿಪ್ಪ ನಿಪ್ಪ 15 ಅರುಣಾಭಿ ಚರಣ ತಲೆಬೆರಳು ಪಂಕ್ತಿಗಳಾ ಸರಸಿಜ ಪೋಲ್ವ ಮೃದುತರ ಪಾದಯುಗಳಾ 16 ವಲಿದ ಭಕ್ತರಿಗಿಷ್ಟ ಸಲಿಸುವ ಪಾದ17 ಸಕಲ ರೋಗವ ಕಳೆವ ಅಕಳಂಕ ಪಾದ ಪಾದ 18 ಹರಿಯಂತೆ ಹರನೊಲ್ ಸಾಸಿರ ನಯನನಂತೆ ಶಿರಿಯಂತೆ ತೋರ್ಪ ಭಾಸ್ಕರ ನರನಂತೆ 19 ಸುಳಿರೋಮಗಳುಳ್ಳ ಚಲುವ ಜಾನುಗಳಾ ಎಳೆಬಾಳೆ ತೆರ ಊರು ಹೊಳೆವ ಸುಚೈಲ 20 ತಟಿತ ಸನ್ನಿಭವಾದ ಕಟಿಗಿಪ್ಪ ಸೂತ್ರ ನಟ ಶೇವಸಿವಲಿ ತಾನು ಪುಟಿಯು ಉದರಾ 21 ಎದೆಯಲಿಪ್ಪುದÀು ನಮ್ಮ ಪರಮೇಶನ ಮನೆಯೊ ವದಗಿ ಭಕ್ತರಿಗೆ ಕರುಣದಿ ಕಾಯ್ವ ಖಣಿಯೂ 22 ಹುತವಾಹನನಂತೆ ಭಾರತೀಕಾಂತನಂತೆ ಚತುರಾಶ್ಯ ಈ ಕ್ಷಿತಿಯಂತೆ ಇಹನಂತೆ23 ಹಸುವಿನಂದದಲಿ ಪಾಗಸನೊಳಿಹನ ವಸುಧಿಯೊಳಿಂತಿದೊಮ್ಮೆ ಪಸುಯನಿಸಿದನಾ 24 ಭೂಧರತನಂತೆ ವಸುಧರನಂತೆ ಭೂಧರನಂತೆ ಸೋದರನಂತೆ 25 ಚರ್ಚಿತ ಸುಂದರ ರೂಪ ಕಂಬು ಲೋಕ ಕಂಧರಾಯುತನ 26 ಕರೆದು ಭಕ್ತರಿಗಿಷ್ಟಗರಿಯುವ ಚೆಲ್ವಾ ವರ ರೇಖೆಯುತ ಶಿರಕರದಾ ವೈಭವನಾ 27 ಮಂಗಳದಾಯಕ ಅಂಗೈಯಿಯುಗಳಾ ಭಂಗಾರ ದುಂಗಾರ ಇಟ್ಟಿಪ ಬೆರಳು 28 ಕೆಂದುಟಿ ಮೊದನಾಗಿ ಇಂದಿಪ್ಪ ವದನಾ ಪೊಂದಿದ ದಂತಗಳಿಂದ ಸ್ವಾರಚನಾ29 ಹಸನಾದ ದೊಕರದಂತೆಸೆವ ಗಲ್ಲಗಳಾ ಬಿಸಜದಂತೆ ರಾಜಿಸುವ ನೇತ್ರಗಳಾ 30 ನಾಸಿಕದಲಿಪ್ಪ ಮೀಸಿ ದ್ವಂದ್ವಗಳಾ ದೇಶಾದಿ ಪಾಲ್ಮೂರು ವಾಸಿ ಕರ್ಣಗಳಾ 31 ಗಿಳಿಗೆ ವಾಚ್ಯಾಪದೊಳ ಹೊಳೆವಾ ಪುಚ್ಛಗಳಾ ತಿಲಕಾ ಮುದ್ರೆ ಪುಂಡ್ರಗಳುವುಳ್ಳ ಫಾಲಾ 32 ಹರಿಪಾದ ಜಲವನ್ನು ಧರಿಸಿದ ಶಿರವಾ ಶಿರಿಗೋವಿಂದ ವಿಠಲನ್ನಡಿಗೆಯರಗುವಾ ಶಿರವಾ33
--------------
ಅಸ್ಕಿಹಾಳ ಗೋವಿಂದ
ಶ್ರೀರಾಮ ಜಯರಾಮ ಶ್ರೀರಾಮರಾಮ ಕಾರುಣ್ಯ ನಿಧಿರಾಮ ಕೌಸಲ್ಯ ರಾಮ ಪ ಜಾನಕೀ ಪತಿರಾಮ ಜಯರಘುರಾಮ ಜಾನ್ಹವೀ ಪಿತರಾಮ ಸರ್ವೇಶರಾಮ 1 ಭಯ ನಿವಾರಣರಾಮ ಪಾವನರಾಮ ನಯಗುಣ ಶ್ರೀರಾಮ ನರಹರೇ ರಾಮ 2 ತ್ರಿಜಗ ಮೋಹನ ರಾಮ ದಿವಿಜೇಶರಾಮ ಅಜಭವನುತರಾಮ ಆನಂದರಾಮ 3 ಭುವನ ಪಾಲಕರಾಮ ಭೂಪತೆ ರಾಮ ಸವನ ರಕ್ಷಕರಾಮ ಶತ್ರುಘ್ನ ರಾಮ 4 ಭವ ವಿಮೋಚನ ರಾಮ ಪದ್ಮಾಕ್ಷರಾಮ 5 ವೈದೇಹಿ ಪತಿರಾಮ ವೈಕುಂಠರಾಮ ವೇದಗೋಚರ ರಾಮ ವೆಂಕಟೇಶರಾಮ 6 ಮಂಗಳಾತ್ಮಕರಾಮ ಮಾಧವರಾಮ ಶೃಂಗಾರ ಶೇಖರರಾಮ ಶ್ರೀರಾಮ ರಾಮ7 ದಶರಥಸುತರಾಮ ದನುಜಾರಿರಾಮ ಕುಶಲವ ಪಿತರಾಮ ಕೋದಂಡರಾಮ 8 ಕರುಣಸಾಗರ ರಾಮ ಕಾಕುಸ್ಥರಾಮ ಶರಧಿಶಯನ ರಾಮ ಶಾಶ್ವತರಾಮ9 ಶ್ರೀಕರಾವ್ಹಯರಾಮ ಶ್ರೀಧರರಾಮ ಪಾಕಾರಿಸುತ ರಾಮ ಪರಮೇಶರಾವÀು 10 ಮಧುರ ಭಾಷಣರಾಮ ಮಧುವೈರಿರಾಮ ಮದನಾರಿನುತರಾಮ ಮೌನೀಶರಾಮ 11 ಸತಿ ಶಾಪ ಖಂಡನ ರಾಮ ಪಾತಕ ಹರ ರಾಮ ಪ್ರಖ್ಯಾತ ರಾಮ12 ರಾಮ ಗರ್ವವಿರಾಮ ರಾಮಾಭಿರಾಮ ಸೌಮಿತ್ರಿವರರಾಮ ಸೌಂದರ್ಯರಾಮ 13 ಸುಗ್ರೀವಸಖರಾಮ ಶುಭಕರ ರಾಮ ಅಗ್ರಜಾಧಿಪ ರಾಮ ಅಮಿತಬಲರಾಮ 14 ಅನ್ಯಮಾನಸರಾಮ ರಘುರಾಮ ಇನಕುಲೇಶ್ವರ ರಾಮ ವಿಭುದೇಂದ್ರರಾಮ 15 ಚಾರು ಚರಿತ ರಾಮ ಜಯಜಯ ರಾಮ ಮಾರುತಾತ್ಮಜ ವಂದ್ಯ ಮಾನಿತರಾಮ 16 ವಾಲಿ ಮರ್ದನರಾಮ ವರದಶ್ರೀರಾಮ ಫಾಲಾಕ್ಷ ಸಖರಾಮ ಭದ್ರಶ್ರೀರಾಮ 17 ಸೇತುಬಂಧನ ರಾಮ ಚಿನ್ಮಯರಾಮ ಸೀತಾಪತೆ ರಾಮ ಜಿತದೈತ್ಯ ರಾಮ 18 ನತವಿಭೀಷಣರಾಮ ನಗಧರ ರಾಮ ಚತುರಾಶ್ಯಪಿತ ರಾಮ ಚಂದ್ರಶ್ರೀರಾಮ 19 ಮಾರೀಚ ಮದಭಂಗ ಮಹಾದೇವರಾಮ ವೀರಾಗ್ರಣೀರಾಮ ವಿಶ್ವೇಶರಾಮ 20 ರಾಮರಾಮ ರಾಮರಾಮ ಶ್ರೀರಾಮ ಕಾಮಿತಾರ್ಥಪ್ರದ ಕಲ್ಯಾಣರಾಮ 21 ಅಗಣಿತ ಮಹಿಮ ವಿಲಾಸ ಶ್ರೀರಾಮ ನಿತ್ಯ ಶ್ರೀರಾಮ 22 ಕಂಬುಕಂಧರ ರಾಮ ಘನತರರಾಮ ಕುಂಭಕರ್ಣಾಂತರ ಗೋವಿಂದರಾಮ 23 ಸುಜನ ಹೃತ್ಕಮಲ ಭಾಸುರ ಸೂರ್ಯರಾಮ ನೃಪತಿ ಶ್ರೀರಾಮ 24 ಲೀಲಾ ಮನುಜ ವೇಷ ರಿಪು ಜೈತ್ರರಾಮ ಪ್ರಕಟ ಪರಾಕ್ರಮ ರಾಮರಾಮ ಶ್ರೀರಾಮ 25 ಅಕಲಂಕ ನಿರುಪಮಾನ ಸಹಾಯ ರಾಮ ಭಕ್ತವತ್ಸಲ ದೀನ ಬಂಧು ಶ್ರೀರಾಮ 26 ಮುಕ್ತಿದಾಯಕ ರಾಮ ಪೂಜಿತರಾಮ ದಶಕಂಠ ಮರ್ದನ ತಾರಕನಾಮ 27 ಶಶಿಬಿಂಬ ವದನ ದಾಶರಥಿ ಶ್ರೀರಾಮ ನಾರಾಯಣಾಚ್ಯುತಾನಂತ ಶ್ರೀರಾಮ 28 ವಾರಿಜೋದರ ಶ್ರೀನಿವಾಸ ಶ್ರೀರಾಮ ಹರಧನುರ್ಭಂಗ ದಯಾನಿಧೆ ರಾಮ 29 ಪುರುಷೋತ್ತಮ ಪುರಾಣ ಪುರುಷ ಶ್ರೀರಾಮ ಸರ್ವಲೋಕ ಶರಣ್ಯ ಸೌಭಾಗ್ಯರಾಮ 30 ಶರ್ವರೀಚರ ಹರಕ್ಷ್ಮಾಪತೇರಾಮ ಸರಶಿಜನಾಭ ದಾಶಾರ್ಹ ಶ್ರೀರಾಮ 31 ಶರಣಾಗತ ತ್ರಾಣ ಶರಣು ಶ್ರೀರಾಮ ಮೂರ್ತಿ ಶ್ರೀರಾಮ 32 ಬುಧ ಜನಾಧಾರ ಸರ್ವೋತ್ತಮರಾಮ ವರ ಹೆನ್ನೆಪುರನಿವಾಸ ಶ್ರೀರಾಮ 33 ನರಸಿಂಹ ಭಕ್ತ ಚಿಂತಾಮಣಿ ರಾಮ ಇಷ್ಟದಾಯಕ ಹೆನ್ನೆ ವಿಠಲರಾಮ 34 ಕಷ್ಟ ರಕ್ಷಿಸುಯನ್ನ ಶ್ರೀರಾಮರಾಮ ಕುಜನವನ ಕುಠಾರ ಕೋವಿದ ರಾಮ 35
--------------
ಹೆನ್ನೆರಂಗದಾಸರು