ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದುಸನ್ನಿಭವದನೆ ಕುಂದಕುಟ್ಮಲರದನೆ ಸಿಂಧೂರಸಮಗಮನೆ ಚತುರವಚನೆ ಸಿಟ್ಟೇಕೆ ಪೇಳೆ ತರುಣಿ ದಿಟ್ಟಿಸೆನ್ನನು ರಮಣಿ ದಿಟ್ಟೆ ನೀನೆಲೆ ರಾಣಿ ಕೃಷ್ಣವೇಣಿ ಕಾವಗೀಯದೆಯೆನ್ನ ಭಾವೆಪಾಲಿಸು ಮುನ್ನ ಭುವಿಜಾತೆ ಮತಿವಂತೆ, ಪ್ರಾಣಕಾಂತೆ ಚಪಲೆನೀನಹುದಲ್ಲೆ ಕೃಪಣೆಯೆಂಬುದ ಬಲ್ಲೆ ವಿಪರೀತಂಮೆಲುನಲ್ಲೆ ಸೊಲ್ಲಿಸಿಲ್ಲೆ ಕ್ಷೀರಸಾಗರತನಯೆ ಸದಯೆ ಜಾಯೆ ಸಾರೆ ವೀಳ್ಯವನು ಕೈಗೊಂಡು ನೀನು ಬೀರು ಸಂತಸವನ್ನು ಬೇಡುತಿಹೆನು ನೀರೆ ಶೇಷಾದ್ರೀಶನಿವನೆತಾನು
--------------
ನಂಜನಗೂಡು ತಿರುಮಲಾಂಬಾ
ನಾರಗಾ ಎನುತಂದು ಸಾರಲಾ ನುಡಿಕೇಳಿ ಆರಯ್ದು ಕಯ್ವಿಡಿದು ಕಾಯ್ದೆ ದ್ವಿಜನ ಗೋವಿಂದ ಪೊರೆ ಎಂದು ಗೋಳಿಟ್ರಗಜರಾಜಗಾ ದಿವ್ಯದರ್ಶನಾನಂದಮಾಯ್ತು ಅಕ್ಷಯನೆ ಕಾಪಿಡೆಂದಾಕ್ಷಣವೆ ಪಾಂಚಾಲಿ ಗಕ್ಷಯಾಂಬರಗಳಿಂ ರಕ್ಷೆಯಾಯ್ತು ಪಾರ್ಥಸೂತನೆ ನಿನ್ನನರ್ಥಿಯಿಂ ಕೆಲಸಾರ್ದು ಪ್ರಾರ್ಥಿಸುತ್ತಿರ್ಪೆನೈ ಪರಮಪುರುಷ ವರಶೇಷಗಿರಿನಿಲಯ ಸುಗುಣವಲಯ ಶರದಿಂದು ನಿಭವದನ ಚತುರವಚನ ದಮನ ಗರುಡಗಮನ ಪರಿಪಾಹಿ ಮಮದೇವ ಸುಪ್ರಭಾವ
--------------
ನಂಜನಗೂಡು ತಿರುಮಲಾಂಬಾ