ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೋರಿಸಯ್ಯ ಬೆಳಕು ದೇವ ತೋರಿಸಯ್ಯ ಬೆಳಕು ದಾರಿ ತಪ್ಪಿ ದೂರ ಬಂದಿಹೆನು ಪ ತಿಮಿರ ಮಧ್ಯದಿ ನಿಂತಿಹೆನೊಅ.ಪ ಚತುರನೆಂದು ತಿಳಿದು ಬಲುದಿನ ಸ್ತುತಿಸಲಿಲ್ಲ ನಿನ್ನ ಪತಿತನೆಂಬ ಭಯ ತೊರೆದು ಧೈರ್ಯದಲಿ ಕ್ಷಿತಿ ಭೋಗಗಳಿಗೆ ಮತಿಗೊಟ್ಟೆನು ನಾ 1 ಬೇಡುವುದಿಲ್ಲವೊ ನಾ ಎನ್ನ ಕೂಡಿ ಪೋಗಲೆಂದು ಹೂಡು ಎನ್ನಯ ಹೆಜ್ಜೆಯ ಸನ್ಮಾರ್ಗದಿ ಕಾಡು ಮೇಡುಗಳ ದಾಟಿ ಬರುವೆನೊ 2 ಕೂತಿರುವೆನು ನಾನು ತನುಮನ ಸೋತಿರುವುದು ಬಹಳ ಈ ತರಹದಿ ಬದುಕಿರುವುದು ನಿನ್ನಯ ಪ್ರೀತಿಯಿಂದಲೆ ಜ್ಯೋತಿರ್ಮಯನೆ 3 ಎತ್ತಲು ಕಾಣದಿದೆ ಚಿತ್ತವ ಬೆಳಗಿಸೊ ಮತ್ತೆ ನೋಡುವೆನು ಉತ್ತಮ ದೃಶ್ಯವ ಭಕುತರ ಪ್ರಸನ್ನನೆ 4
--------------
ವಿದ್ಯಾಪ್ರಸನ್ನತೀರ್ಥರು