ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲ ಕಳೆಯುವಿ ನಮ್ಮ ಐಕೂರಾರ್ಯರ ಸುವಾಕು ಕೇಳದೆ ಜೀವಿ ಪ ಮರುತಾಗಮ ಮರ್ಮವರಿಯದವರಿಗೆಲ್ಲಾ | ವರ ಭಾಗವತ ಗೀತಾ ಹರಿಕಥಾ ಮೃತ ತತ್ವ | ಯರಡೊಂದು ಕಾಲ ಕೃಪೆ ನೆಳಲಾಶ್ರಯಿಸದೆ 1 ಹರಿಮೂರ್ತಿ ಹರಿವ್ಯಾಪ್ತಿ ಹರಿಸತ್ಯ ಸುಚರಿತ್ರೆ | ಹರಿದಾಸರುಕ್ತಿ | ಹಿರಿದು ಕಿರಿದು ಭೇದ ನೆರೆ | ಸುರಹಸ್ಯವನರುಹಿ ಕಗ್ಗತ್ತಲೆ ಹರಿಸುವರಿವರೆ ನರ ನೀನಂಬದೆ2 ಮದಡ ಜನರಿಗೆಲ್ಲ ಪದಸುಳಾದಿಗಳನು | ಚತುರತನದಲಿಂದ | ವಿಧ ವಿಧ ವಿವರಿಸಿ | ಸದಮಲ ಸುಜ್ಞಾನ | ವದಗಿಸುವಂಥ ಈ ಬುಧರುಪದೇಶ ಮುದದಿ ಪಡೆಯದೆ 3 ಆಶೆ ಕ್ರೋಧಂಗಳ ಜಯಿಸುತ ಮನದಿಂದ ಕ್ಲೇಶಮೋದ ಸಮ ತಿಳಿದಿಹರೋ | ಯೇಸೇಸು ಕಾಲಕ್ಕೆ ಭೂಸುರೋತ್ತಮ ರಾದ | ಈ ಸುಗುಣರ ಸಹವಾಸ ದೊರೆವುದೆ 4 ಶ್ರೀ ಮುಖವಾಣಿಯು ಸಾಮಾನ್ಯವಲ್ಲವೋ ನೇಮದಿಂ ಕೇಳ್ವರ | ಶಾಮಸುಂದರ ಸುಧಾಮನಿಗೊಲಿದಂತೆ | ಪ್ರೇಮದಿಂ ಸಲಹುವ ನೀ ಮನದಲಿ ತಿಳಿ 5
--------------
ಶಾಮಸುಂದರ ವಿಠಲ
ಶ್ರೀಹರಿ ಸ್ತವನ ಅರ್ಜುನಗಾನಂದಾ ಮಾಡಿದ ಗೋವಿಂದಾ ಪ ರಥದಿ ಮಂಡಿಸಿ ಚತುರತನದಲಿಂದಾ ಚತುರ ಹಸ್ತದಿಂ ವಾಜಿಯಂ ಪಿಡಿದು ರಥಕನ ಬೆನ್ಹಿಂದಿಟ್ಟುಕೊಂಡು ಸಾ- ರಥಿಯು ತಾನೆ ಅಶ್ವವ ನಡಿಸುತಲಿ ರತಿಪತಿಪಿತನತಿಚಮತ್ಕಾರದಿಂ ಪೃಥಿವಿಯ ಮೇಲೆ ನರನಟನ ತೋರುತಲಿ ಪತಿತ ಪಾವನನು ಫಲ್ಗುಣ ಸಖನು ನುತಿಸಿದವರ ನೆರೆ ಪಾಲಿಸುತಿಹನು ಅತುಳ ಶಂಖದಿಂ ಭೌಂ ಭೌಂ ಎನಿಸುತ ರಥದ ಗಾಲಿ ಛಿಟ್ ಛಿಟ್ ಛಿಟಿಲೆನುತ ಕುದುರೆ ಖುರಪುಟಧ್ವನಿ ಫಳ್ ಫಳ್ ಫಳ್ಳೆ ಗೋವಿಂದನು ರಭಸದಿ ಭಕ್ತನೂಳಿಗಾ1 ಮಂದಜಭವ ಮುಖ್ಯಾಮರ ವೃಂದವು ನಂದತನುಜನಾರಂದಲೀಲೆಯಂ ಛಂದದಿ ನೋಡುತ ನಭೋಮಾರ್ಗದೊಳ್ ಬಂದು ಕುಸುಮಗಳ ವೃಷ್ಟಿಯ ಸುರಿದು ಸಿಂಧುಶಯನ ನಾಮಾಮೃತ ಸುರಿದು ಬೃಂದಾರಕ ನಿಕರವು ಕೈಯೆತ್ತಿ ಇಂದುಕಲಾಧಿಪ ಪ್ರಾರ್ಥನೆ ಸೈ ಸೈ ಎಂದು ದೇವದುಂದುಭಿ ಧೋಂ ಧೋಂ ಕಂಸಾ- ಳದರವ ಖಿಣಿಖಿಣಿ ಖಿಣಿ ಭೇರಿ ನಾದ ಖಡ್ ಖಡ್ ಖಡಲ್ ಭಾರಿ ತಾ- ಹತಜಂತರಿಧೂಂ ನರ್ತನಗೈವುತ ತೆರಳುತ 2 ಮಂಗಳ ರವದಿಂ ಜಯಜಯ ಎನಿಸುತ ಮಂಗಳಾಂಗಿ ರುಕ್ಮಿಣಿ ವಲ್ಲಭನು ರಂಗಿನಿಂದ ರಥವಿಳಿದು ಗೆಳೆಯನ ಮುಂಗೈಯನೆ ಪಿಡಿದು ಅಂಗಜನಯ್ಯ ರಂಗುಮಣಿಯ ಉಂಗುರದಿ ಒಪ್ಪುತಲಿ ಭಂಗಾರಕೆ ಮಿಗಿಲೆನಿಪ ದುಕೂಲದಿ ಶೃಂಗರದಲ್ಲಿ ಉತ್ತುಂಗ ಪರಾಕ್ರಮ ಅಂಗಳದೋಳ್ ನಲಿದಾಡುತ ರಂಗನು ತಿಂಗಳ ಕುಲದೀಪನ್ನ ನೋಡುತಲಿ ರಂಗ ಕದರುಂಡಲಗೀಶನ ಒಡೆಯನು ತಾ 3
--------------
ಕದರುಂಡಲಗೀಶರು