ಭಜಿಸುವರು ಭಾಗ್ಯವಂತರು | ಭಾಗವತರು ಪ
ನಿಲುಕದೆಂದು ನಿಗಮಗಳು ನೆಲೆಗಾಣದೆ ನಿಲ್ಲಲು |ಮಲಕೀನ ಮಾತುಗಳಿಂದ ಜರಿದು ಕಲಕಾದ ಕರ್ಮನೀರೆರೆದು ನಳಿನಾಕ್ಷ ವಲ್ಲಭ ನೀನೆಂದರಿತು 1
ಅಳಿದುಳಿದೆಲ್ಲ ನೋಡುತಲಿ ತಳೆದು ಭವದ ಮೂಲವನುಕಳೆದು ಕಾಮಕ್ರೋಧಮದಗಳನು | ಬಳೆಸುತ ಮೈತ್ರಿ-ಕರುಣಾಗಳನು | ಬಳೆಸುತ ಏಳು ಧರಣಿಗಳನು 2
ಕಡಲೊಳೊರಗುವ ತೆರೆಯಂತೆ | ಒಡಲೊಳಗೆ ರುಕ್ಮ ಕಡಗದಂತೆ ನೆಮ್ಮದೆ ಚಣಿಸಿ | ಪಡದ ರೂಪವನುಜಡವೆಂದೆನಿಸಿ ಕಡಿಗಾಗದಿರೆಂದು ಜಗವನೆನಿಸಿ 3