ಕಳವು ಕಲಿಸಿದರ್ಯಾರೊ ನಿನಗೆ ಕಂಜನಾಭನೆ ಪ
ಕೇರಿಕೇರಿ ಮನೆಗಳಲ್ಲಿ
ಕ್ಷೀರ ಗಡಿಗೆಯನೋಡಿವರೇನಲ್ಲಿ
ಚೋರತನವ ನೀ ಕಲಿತಿಹುದೆಲ್ಲಿ
ಜಾರನೆನಿಸಿಕೊಂಬುವುದು ಕೇಳಿ ಬಲ್ಲೆ 1
ಅಟ್ಟದ ಮ್ಯಾಲಿಟ್ಟಿದ್ದ ಬೆಣ್ಣೆ
ಚಟ್ಟಿಗಿಯ ಒಡೆದಾಕಳ ಕಣ್ಣಿ
ಕಟ್ಟಿ ಜುಟ್ಟ ಇವರÀ ಮನೆ ಹೆಣ್ಣಿ
ಗಿಟ್ಟು ಮಾಡುವರೆ ಕಣ್ಣು ಸೊನ್ನಿ2
ಬಡವರ ಮನೆ ಅನ್ನದಲಿಷ್ಟು
ತುಡುಗುತನವ ನೀ ಮಾಡುವುದೆಷ್ಟು
ಪಿಡಿಯರವರು ಬರುವುದತಿ ಸಿಟ್ಟು
ಹಿಡಿದು ಹಾಕೋರು ನಿನಗೊಂದು ಪೆಟ್ಟು3
ಕಡೆದ ಬೆಣ್ಣೆ ಕಾಸಿದ ತುಪ್ಪ
ಕೊಡುವೆನ್ಹಾಲು ನೀ ಕುಡಿಯದಲ್ಯಾಕೊ
ಮಡದಿಯರ ಸರಿ ನಿನಗೇನು ಬೇಕೊ
ವಾಕು 4
ಬಣ್ಣದ್ವಲ್ಲಿ ಛಾದರ ಹೊದ್ದು
ಅಣ್ಣ ರಾಮರಲ್ಲ್ಯಾಡದೆ ಇದ್ದು
ಹೆಣ್ಣು ಮಕ್ಕಳುಡುವ ಸೀರೆ ಕದ್ದು
ಇನ್ನು ಮರನೇರುವುದೇನು ಮುದ್ದು 5
ನಂದಗೋಪನ ಮುಂದ್ಹೇಳಿ ಸಿಟ್ಟು
ಇಂದು ಬಡಿಸುವೆ ಭೀಮೇಶ ಕೃಷ್ಣ
ಮಂದಿ ಮಕ್ಕಳೊಳಗೆ ನೀನೆ ಶ್ರೇಷ್ಠ ಹಾ-
ಗೆಂದು ಬೇಡಿ ಕೊಂಬುವುದೊ ನೀಡಿಷ್ಟ6