ಕೊಡು ಕೊಡು ಕೊಡೋ ವರವಾ
ತಡವ್ಯಾಕೋ ದೇವಾ ನೀ ಪ
ಒಡೆಯ ನಿನ್ನಯ ಯುಗ
ಅಡಿಗಳ ಭಜಿಸುವೋ ಸು
ಧೃಢ ಭಕುತಿ ಜ್ಞಾನವನ್ನು
ತಡೆಯದೆ ಎನಗೆ ನೀ ಅ.ಪ
ಪೊಡವಿ ಪಾಲಕ ನೀನೆಂದು
ಭಿಡೆಯವನ್ನು ನಾ ಮಾಡೆ
ಕಡಲಶಯನ ಸುಮ್ಮನೆ
ಮಡದಿಸಹಿತಾಗಿ ನೀ 1
ಜಡಜಲೋಚನ ದೇವಾ
ಹುಡಗ ನೀನೆಂದು ನಾ
ನುಡಿದ ಮಾತುಗಳ ನಿ
ನ್ನೊಡಲೊಳಗಿಡದೆ ನೀ 2
ಚಟುಲಗುರು ಜಗನ್ನಾಥಾ
ವಿಠಲ ನಿನ್ನ ನಾ ಕÀರಾ
ಪುಟದಿ ಬೇಡುವೆ ಮಮ ಹೃ
ತ್ಪುಟದಿ ತೋರುವೆನಿಂದು ನೀ 3