(ಊ) ಯತಿವರರು
ಶ್ರೀ ಜಯತೀರ್ಥರು
ಎದುರಾರೊ ಗುರುವೆ ಸಮರಾರೊ ಪ
ಮದನ ಗೋಪಾಲನ ಪ್ರಿಯ ಜಯರಾಯ ಅ.ಪ
ಕಡು ಗರ್ಜಿಸುವ ಕೇಸರಿಯಂತೆ ನಿಮ್ಮ ವಾದಗಡಣೆಯ ಕೇಳುತ ನುಡಿ ಮುಂದೋಡದೆಗಡಗಡ ನಡುಗುತ ಮಾಯ್ಗೋ ಮಾಯ್ಗಳುಅಡವಿಯೋಳಡÀÀಗೋರು ನಿಮ್ಮ ಭೀತಿಯಲಿ 1
ಕುಟಿಲ ಮತಗಳೆಂಬೊ ಚಟುಲಂಧಕಾರಕ್ಕೆಪಟುತರ ತತ್ವ ಪ್ರಕಾಶಿಕೆಂತೆಂಬಚಟುಲಾ ತಪದಿಂದ ಖಂಡಿಸಿ ತೇಜೋ-ತ್ಕಟದಿ ಮೆರೆದೆ ಬುಧಕಟಕಾಬ್ಜ ಮಿತ್ರ2
ಅಮಿತ ದ್ವಿಜಾವಳಿ ಕುಮುದಗಳರಳಿಸಿವಿಮತರ ಮುಖ ಕಮಲಂಗಳ ಬಾಡಿಸಿಸ್ವಮತರÀ ಹೃತ್ಸಂತಾಪಗಳೋಡಿಸಿವಿಮಲ ಸುಕೀರ್ತಿಯ ಪಡೆದೆಯೊ ಚಂದ್ರ 3
ವೇದ ಶಾಸ್ತ್ರಗಳೆಂಬೊ ಶೃಂಗಗಳಿಂದ ಸು-ಧಾದಿ ಗ್ರಂಥಗಳೆಂಬೊ ಸ್ತನದಿಂದೊಪ್ಪುತ ತತ್ವಬೋಧನೆಯೆಂಬ ದುಗ್ಧ ಶಿಷ್ಯವತ್ಸಂಗಳಿಗೆಆದರದಲಿ ಕೊಟ್ಟ ಯತಿಸುರಧೇನು 4
ವ್ಯಾಸ ಸೂತ್ರಗಳೆಂಬ ಮಂದರವನು ವೇದರಾಸಿಯೆಂಬ ವಾರಾಶಿಯೊಳಿಟ್ಟುಶ್ರೀ ಸರ್ವಜ್ಞರ ವಾಕ್ಯ ಪಾಶದಿ ಸುತ್ತಿಭಾಸುರ ನ್ಯಾಯಸುಧಾ ಪಡೆದೆ ಯತೀಂದ್ರ5
ವನಜನಾಭನ ಗುಣಮಣಿಗಳು ಸರ್ವಜ್ಞಮುನಿಕೃತ ಗ್ರಂಥಗಳವನಿಯೊಳಡಗಿರೆ ಸ-ಜ್ಜನರಿಗೆ ಟೀಕಾಂಜನದಿಂದ ತೋರಿಸಿಘನ ಸುಖಸಾಧನ ಮಾಡಿದ್ಯೊ ಧೀರ 6
ಅರ್ಥಿಮಂದಾರ ವೇದಾರ್ಥ ವಿಚಾರ ಸ-ಮರ್ಥ ಶ್ರೀಕೃಷ್ಣ ಪಾದಾಂಬುಜಲೋಲ ಪ್ರ-ತ್ಯರ್ಥಿ ಮತ್ತೇಭಕಂಠೀರವಕ್ಷೋಭ್ಯ-ತೀರ್ಥಕರ ಜಾತ ಜಯತೀರ್ಥ ಯತೀಂದ್ರ 7