ಹೀನ ಬುದ್ಧಿಯ ಹಿಂದೆ ದೂಡುವ ಪ
ಕಲಿಮಲಾಪಹನೆಂದು ಪಾಡುವ
ಕಲುಷರಾಶಿಯ ಕಳೆದುಕೊಳ್ಳುವ
ಹಲವು ಭವದಲಿ ಬಳಲದಂದದಿ
ನಳಿನನಾಭನ ನಂಬಿಕೊಳ್ಳುವ 1
ದೇಹ ಗೇಹ ವ್ಯಾಮೋಹ ಭಾರದಿ
ಚೋದಗೊಂಡರೆ ಚಕ್ರಿವೊಲಿವನೆ
ನಾಹಮೀಶ್ವರೊ ಎಂದು ತಿಳಿದು ದಾ-
ಸೋಹಮೆಂಬ ಸನ್ನಾಹಗೊಳ್ಳುವ 2
ಪಂಕಜಾಪತೇ ಪತಿತ ಪಾವನ
ವೆಂಕಟೇಶದಾಸೌಘ ಜೀವನ
ಕಿಂಕರಾರ್ತಿಹ ಕರುಣದಿಂದಲಾ-
ತಂಕವಿಲ್ಲದೆ ಸ್ವಾಂಕ ಕೊಡುವನು 3