ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅಃ) ಕಾಮದೇವ ಕರುಣದಿಂದಲಿ ಒಲಿದು ಕಂಡನಾತುರದಲಿ ಪ ಇಂದ್ರಸಮಾನ ದೇವತೆಯೆ ರತಿಪತಿಯೇ | ಮಾರ || ಬಂದು ಕಲ್ಪದಲಿ ಸುಂದರನೆನಿಸಿಕೊಂಡಿರ್ದ | ಬಂಧುವೇ ಅಹಂಕಾರ ಪ್ರಾಣನಿಂದಧಿಕನೆ 1 ವನಜ ಸಂಭವನು ಸೃಷ್ಟಿ ಸೃಜಿಪಗೋಸುಗ | ಮನದಲ್ಲಿ ಪುಟ್ಟಿಸೆ ಚತುರ ಜನರ || ಮುನಿಗಳೊಳಗೆ ನೀ ಸನತ್ಕುಮಾರನಾಗಿ ಜನಿಸಿ | ಯೋಗ ಮಾರ್ಗದಲ್ಲಿ ಚಲಿಸಿದ ಕಾಮಾ 2 ತಾರಕಾಸುರನೆಂಬ ಬಹು ದುರುಳತನದಲ್ಲಿ | ಗಾರುಮಾಡುತಲಿರಲು ಸುರಗಣವನು || ಗೌರಿಮಹೇಶ್ವರರಿಗೆ ಪುತ್ರನಾಗಿ ಪುಟ್ಟಿ | ಧಾರುಣಿಯೊಳಗೆ ಸ್ಕಂದನೆನಿಸಿದೆ 3 ಮತ್ಸ್ಯ ಉದರದಲಿ | ಪೊಕ್ಕು ಶಿಶುವಾಗಿ ಸತಿಯಿಂದ ಬೆಳೆದು || ರಕ್ಕಸ ಶಂಬರನೊಡನೆ ಕಾದಿ ಗೆದ್ದು ಮರಳಿ | ಚಕ್ಕನೆ ಸಾಂಬನೆನಿಸಿದೆ ಜಾಂಬವತಿಯಲ್ಲ 4 ಜನಪ ದಶರಥನಲ್ಲಿ ಭರತನಾಗಿ ಪುಟ್ಟಿದೆ | ಮನೋ ವೈರಾಗ್ಯ ಚಕ್ರಾಭಿಮಾನಿ || ಎನಗೊಲಿದ ವಿಜಯವಿಠ್ಠಲರೇಯನಂಘ್ರಿ | ಅರ್ಚನೆ ಮಾಡುವ ಸುಬ್ರಮಣ್ಯ ಬಲು ಧನ್ಯ 5
--------------
ವಿಜಯದಾಸ
ಧೀರ ಕುಮಾರ ಮಾರಾವತಾರ ಪಾಹಿ ತ್ರ್ಯಂಬಕನ ಕುಮಾರ ಪ ನಿನ್ನಲಿ ದೇವಸೈನ್ಯದ ಭಾರ ಗಿರಿಜಾದೇವಿಯ ಮೋಹದ ಕುವರ ಪೊರೆಯೊ ಎನ್ನನು ಕರುಣಾಸಾಗರ 1 ಅಮರಸೇನೆಗೆ ನೀನಗ್ರೇಸರ ಭೂಸುರ ಹತ್ಯಾ ಪಾಪಸಂಹಾರ ನಮಿಸುವರಿಗಿಷ್ಟ ಫಲವೀವ ವೀರ 2 ವಿಪ್ರಜನರಿಗತಿಪ್ರಿಯ ವಲ್ಲೀಸೇನೆಗೆ ಪ್ರಾಣಪ್ರಿಯ ಚಕ್ರಾಭಿಮಾನಿ ಮೂರುತಿಯಾಗುತಿರುವಿ 3
--------------
ವಿಶ್ವೇಂದ್ರತೀರ್ಥ