ಅದ್ರಿಸಂಭವೆ ಸರ್ವಸಂಭ್ರಮದೊಳುಭಾದ್ರಪದ ಶುದ್ಧ ತದಿಗೆಯ ದಿವಸದಿಸದ್ರಾಜಮಾರ್ಗದಿ ನಡೆತರಲುನಡೆತರೆ ಸತ್ಯಭಾಮೆ ರುಕ್ಮಿಣಿಯೊಳೀಭದ್ರೆ ಯಾರೆಂದು ನುಡಿದಳು 1
ಕೋಟಿ ಸೂರ್ಯಕಾಂತಿಯ ನವರತ್ನ ಕಿರೀಟಾಗ್ರದಿ ಚಂದನ ರೇಖೆಯಮೀಟೆನೆ ತಳೆದು ಬಾಹವಳಾರೆ ಅಕ್ಕಕೈಟಭವೈರಿಯ ಸತಿಕೇಳೆ ಮಧುಕೈಟಭ ದಾನವರ ಗೆಲಿದ ಶಶಿಜೂಟನ ವಲ್ಲಭೆ ಶಂಕರಿ ಶಾಕಂಬರಿಯೀಕೆ ಕಾಣೆ 2
ಸತಿ ಕೇಳೆಚಂಡಾಮುಂಡಾಸುರರನು ಗೆಲಿದು ಭೂಮಂಡಲವ ಕಾಯ್ದ ದೇವಿ ಭವಾನಿಯೀಕೆ ಕಾಣೆ 3
ವೀರಮುದ್ರಿಕೆ ಕಂಕಣ ಕಡಗವದೋರೆ ಹಿಂಬಳೆ ದಂಡು ಮುತ್ತಿನಹಾರವ ಧರಿಸಿ ಬಾಹವಳಾರೆ ಅಕ್ಕನಾರಾಯಣನರಸಿ ನೀ ಕೇಳೆಧೀರನಿಶುಂಭನ ಗೆಲಿದಮರರ ಪರಿವಾರವ ಪೊರೆದ ಪರಶಿವೆ ಪರಮೇಶ್ವರಿ ಕಾಣೆ 4
ಮೆರೆವೇಕಾವಳಿಗುಂಡಿನಸರಪರಿಪರಿ ಚಕ್ರಸರ ನಕ್ಷತ್ರದಸರಗಳ ಧರಿಸಿ ಬಾಹವಳಾರೆ ಅಕ್ಕಕರಿವರದನ ಅರಸಿ ನೀ ಕೇಳೆಧುರದೊಳೆ ಧೂಮ್ರಾಕ್ಷನ ವಧಿಸಿದಗಿರಿರಾಜ ಕುಮಾರಿ ಮಂಗಳಗೌರಿ ದೇವಿ ಈಕೆ ಕಾಣೆ5
ಅಚ್ಚ ಮುತ್ತಿನ ಸರಗಳ ನಡುವೆಪಚ್ಚೆಯ ರತುನದ ಪಂಚಸರಗಳನಿಚ್ಚಳದಿ ಧರಿಸಿ ಬರುವವಳಾರೆ ಅಕ್ಕಅಚ್ಚುತನ ಅರಸಿ ನೀ ಕೇಳೆಅಚ್ಚರಿಯನೆ ಶುಂಭ ನಿಶುಂಭರಕೊಚ್ಚಿದ ರುದ್ರಾಣಿ ಶಿವೆ ಶರ್ವಾಣಿ ಈಕೆ ಕಾಣೆ 6
ಚೆಂಗಾವಿಯ ಸೀರೆಯನುಟ್ಟುರಂಗುರತುನದೊಡ್ಯಾಣವನುಟ್ಟುಭೃಂಗಕುಂತಳನರ್ತಿಸೆ ಬಾಹಳಾರ ಅಕ್ಕಅಂಗಜನ ಮಾತೆ ನೀ ಕೇಳೆಸಂಗರದಲಿ ರಕ್ತಬೀಜನ ಗೆಲ್ದಗಂಗಾಧರನರಸಿ ಕಾಳಭುಜಂಗವೇಣಿ ಈಕೆ ಕಾಣೆ 7
ಝಗಝಗಿಸುವ ಕುಂಕುಮರೇಖೆಮಗಮಗಿಸುವ ಮೃಗಮದ ತಿಲಕದಿಅಗಿಲುಗಂಧದೊಳೊಪ್ಪುತ ಬಾಹಳಾರೆ ಅಕ್ಕನಗಧರನಂಗನೆ ನೀ ಕೇಳೆಜಗಳದೆ ಮಹಿಷನ ಮಿಗೆ ಮರ್ದಿಸಿದಗಣಿತ ಸನ್ಮಹಿಮಾಸ್ಪದೆ ಸರ್ವೇಶ್ವರಿ ಈಕೆ ಕಾಣೆ8
ಕೆಂದಾವರೆಯಂದವ ನಿಂದಿಪಬಂಧುರಪದದಂದುಗೆ ಕಲಿರೆನೆಕುಂದಣದ ಸರಪಣಿಯಿಟ್ಟು ಬಾಹಳಾರೆ ಅಕ್ಕಮಂದರಧರನಂಗನೆ ಕೇಳರ-ವಿಂದಜ ಸಂಕ್ರಂದನಮುಖಿ ಸುರವೃಂದವ ಪೊರೆವ ಮಾಹೇಶ್ವರಿ ಈಕೆ ಕಾಣೆ 9
ಮರುಗ ಮಲ್ಲಿಗೆ ಸುರಗಿ ಸೇವಂತಿಗೆಪರಿಮಳಿಸುವ ಸಂಪಗೆ ಕೇದಗೆ-ಯರಳನೆ ಮುಡಿದು ಬಾಹವಳಾರೆ ಅಕ್ಕಮುರಹರನಂಗನೆ ನೀ ಕೇಳೆವರ ಕೆಳದಿಯ ಪುರದೊಳು ನೆಲಸಿದವರದ ರಾಮೇಶ್ವರನಂಗನೆ ಪಾರ್ವತಿ ಈಕೆ ಕಾಣೆ 10