ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಖಿಳ ಯಾದವರೊಳಗೆಮಾನಾಭಿಮಾನವೆಳ್ಳನಿತಿಲ್ಲ ಕೃಷ್ಣ ಪ ದೇವಕೀದೇವಿಯುದರದಿ ಜನಿಸಿ ಬಾಲ್ಯದಲಿಓವಿ ಮೊಲೆ ಕುಡಿಸಿದಳ ಅಸುವ ಸೆಳೆದುಮಾವ ಕಂಸನ ಕೊಂದು ಮನುಜ ವೇಷದಲಿ ಗಾಂ-ಡೀವಿಯ ಮನೆಯ ಬಂಡಿ ಬೋವನಾದೆ1 ಸುರನದಿಯ ಸುತನು ಪಾಂಡವರಿಗಾಪ್ತನು ನಿನಗೆಪರಮಭಕ್ತನು ಸ್ವಯಿಚ್ಛಾ ಮರಣಿಯುಧುರದೊಳಗೆ ಪೂರ್ವ ವೈರದ ಶಿಖಂಡಿಯ ತೋರಿಶರಮಂಚದೊಳುಪಾಯದಲಿ ಮಲಗಿಸಿದೆ 2 ಸೋದರತ್ತೆಯ ಸೊಸೆಯ ಮಗ ನಿನಗೆ ಭಾವಿಸಲುಸೋದರಳಿಯನು ಮೂರು ಲೋಕವರಿಯೆಸಾಧಿಸಿಯೆ ಅಸಮ ಚಕ್ರವ್ಯೂಹವನು ರಚಿಸಿಸೋದರನ ಷಡುರಥರ ಕೈಲಿ ಕೊಲ್ಲಿಸಿದೆ 3 ಕುರುಪತಿಯ ಮೈದುನನ ಕೊಲ್ಲ ಬಗೆದವನ ಸಂ-ಗರದೊಳೇರಿಸಿ ನುಡಿದ ನುಡಿಯ ಕೇಳಿ ಮೈ-ಗರೆಯೆ, ರವಿ ಮಂಡಲಕೆ ಚಕ್ರದಿ ಮರೆಯ ಮಾಡಿನರನ ಕೈಯಿಂದ ಸೈಂಧವನ ಕೊಲ್ಲಿಸಿದೆ 4 ಶಪಥದಲಿ ರಣದೊಳರಸನ ಹಿಡಿವೆನೆಂಬವಗೆತಪಸಿಗಳ ತಂದು ತತ್ತ್ವವ ಬೋಧಿಸಿಕಪಟವರಿಯದ ನೃಪನ ಕೈಯೊಳನೃತವ ನುಡಿಸಿಉಪಮೆಯಲಿ ಶಸ್ತ್ರ ಪಂಡಿತನ ಕೊಲ್ಲಿಸಿದೆ 5 ಯಮಳರನು ಪಡೆದ ತಾಯಿಗೆ ಸಹೋದರನ ಭೂರಮಣರೊಳಗಗ್ಗಳೆಯನತಿ ಧೈರ್ಯನುಸಮರದಲಿ ರವಿಸುತನ ರಥಕೆ ಸೂತನ ಮಾಡಿಯಮಸುತನ ಕೈಲಿ ಮಾವನ ಕೊಲ್ಲಿಸಿದೆ 6 ಜನವರಿಯದಂತೆ ಜೀವನದೊಳಡಗಿರ್ದವಗೆಮನಕೆ ಖತಿಗೊಳಿಸಿ ಬರ ಸೆಳೆದು ನಗುತಅನುವರದೊಳಾಯತದ ತೊಡೆಯ ಸನ್ನೆಯ ತೋರಿಅನಿಲಜನ ಕೈಲಿ ಕೌರವನ ಕೊಲ್ಲಿಸಿದೆ7 ಉರಿಯೊಳಗೆ ಜನಿಸಿದಂಗನೆಯ ನಿಜಸುತರು ಮಂ-ದಿರದೊಳೈವರು ನಿದ್ರೆಗೈಯುತಿರಲುನರವೃಕೋದರ ಧರ್ಮನಂದನರನಗಲಸಿಯೆಗುರು ಸುತನ ಕೈಲಿ ಬಾಲಕರ ಕೊಲ್ಲಿಸಿದೆ 8 ಈ ವಿಧದೊಳವರ ಸುರಲೋಕದಲಿ ನೆಲೆಗೊಳಿಸಿಭಾವ ಮೈದುನರೈವರನು ರಕ್ಷಿಸಿಭೂವಲಯದೊಳು ಕೀರ್ತಿಯನು ಪಡೆದೆಸೆವ ನಮ್ಮದೇವ ನೆಲೆಯಾದಿಕೇಶವ ವೆಂಕಟೇಶ 9
--------------
ಕನಕದಾಸ
ಆರೇನ ಮಾಡುವರು ಆರಿಂದಲೇನಹುದುಪೂರ್ವಜನ್ಮದ ಕರ್ಮವಿಧಿ ಬೆನ್ನಬಿಡದು ಪಐದು ವರುಷದತರಳ ತಾನೆತ್ತ ತಪವೆತ್ತ |ಬೈದು ಮಲತಾಯಿ ಅಡವಿಗೆ ನೂಕಲು ||ಸುಯ್ದು ಕೋಪಾಗ್ನಿಯಲಿ ಪೊರಮಟ್ಟು ಪೋಪಾಗ |ಐದೆ ಬಂಧುಗಳಿದ್ದು ಏನ ಮಾಡಿದರು1ನೃಪರೊಳಗೆಅತಿ ಶ್ರೇಷ್ಠ ಬಲವಂತ ರಘುರಾಮ |ಅಪರಿಮಿತ ಶೂರ ಲಕ್ಷ್ಮಣದೇವರು |ಚಪಲಾಕ್ಷಿ ಸೀತೆಯನು ಖಳನು ಕದ್ದೊಯ್ವಾಗ |ವಿಪರೀತ ವೀರರಿದ್ದೇನ ಮಾಡಿದರು ? 2ಪಾಪಿ ದುಶ್ಯಾಸ ದ್ರೌಪದಿಯ ಸೀರೆಯ ಸೆಳೆದು |ಕೋಪದಿಂ ಮಾನಭಂಗವ ಮಾಡಲು ||ಆಪತ್ತು ಬೆನ್ನಟ್ಟಿ ಹಾ ಕೃಷ್ಣ | - ಎನುವಾಗ |ಭೂಪತಿಗಳೈವರಿದ್ದೇನ ಮಾಡಿದರು ? 3ರಣದೊಳಗೆ ಅಭಿಮನ್ಯು ಚಕ್ರವ್ಯೂಹವ ಪೊಕ್ಕು |ಸೆಣಸಿ ಷಡುರಥದೊಡನೆ ಹೊಯ್ದಾಡಲು ||ಅಣಕವಿಲ್ಲದೆ ಕಾದಿ ಅಸುವಳಿದು ಪೋಪಾಗ |ತ್ರಿಣಯಸಖಿ ಪಾರ್ಥರಿದ್ದೇನ ಮಾಡಿದರು 4ಬ್ರಹ್ಮಶಿರ ಕರಕಟ್ಟಿ ಶಿವನ ಪೀಡಿಸುತಿರಲು |ಸುಮ್ಮನೇ ಜಗವನೆಲ್ಲವ ತಿರುಗಿದ ||ಬೊಮ್ಮಮೂರುತಿಯಾದ ಪುರಂದರವಿಠಲನೇನಮ್ಮಅಳವಲ್ಲ ವಿಧಿಮೀರಿ ಬಾಳುವರೆ5
--------------
ಪುರಂದರದಾಸರು