ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುಭವವಿದೇ ನೋಡಿ ಆನಂದೋ ಬ್ರಹ್ಮ ಏನೆಂದ್ಹೇಳಲಿನ್ನಾಗುವ ಸಂಭ್ರಮ ಧ್ರುವ ಸುಖ ನೋಡಿ ನಮ್ಮ ಸ್ವಾನುಭವದ ಸಖರಿಂದ ಮೀರಿ ಬಲು ಸುಸ್ವಾದ ಅಖರಿಂದ ಕೇಳಿ ನಿಜ ಬೋಧಾ ಶುಕಮುನಿ ಸೇವಿಸುದಾ 1 ಬೆರೆದು ನೋಡಿ ಆರು ಚಕ್ರವೇರಿ ಸುರಿಯುತಿದೆ ಸುಖ ಸಂತ್ರಾಧಾರಿ ಭೋರ್ಗರೆಯುತಿದೆ ಅನಂತ ಪರಿ- ದೋರಿ ಕೊಡುತಾನೆ ಶ್ರೀಹರಿ 2 ಸುಗ್ಗಿ ಇದೇ ನೋಡಿ ಸುಜ್ಞಾನಿಗಳು ಲಗ್ಗೆ ಮಾಡಿಕೊಳ್ಳಿ ಅದೆ ಬಲು ಬಹಳ ಬೊಗ್ಗಿ ಉಣಬೇಕು ಇದು ಸರ್ವಕಾಲ ಹಿಗ್ಗಿಕೊಳ್ಳೊ ಮಹಿಪತಿ ನೀ ತರಳ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನೆಂದ್ಹೇಳಲಿ ಸ್ವಾನುಭವದ ಸುಭೋಗ ಧ್ರುವ ಸುಖಗರುತದ ಶಿಖಾಮಧ್ಯ ಸಂತ್ರಾಧಾರಿ ಬೇಕಾದರೆ ನೋಡಿ ಷಕಚಕ್ರವೇರಿ ಏಕೋಮಯವಾಗ್ಯದ ವಸ್ತು ಒಂದೇ ಸರಿ ಲೋಕಪಾಲಕಸ್ವಾಮಿ ತಾ ಸಹಕಾರಿ 1 ಜುಮ್ಮು ಜುಮ್ಮುಗುಡುತದೆ ರೋಮಾಂಚಗಳು ಧಿಮಿ ಧಿಮಿಗುಡುತದೆ ನಾದಧ್ವನಿಗಳು ಕ್ರಮ ತಿಳಿದರೆ ಭಾಸುತದೆ ಸುಳಹುಗಳು ಸಂಭ್ರಮವಾದರು ಅನುಭವಿಗಳು 2 ಕಳೆ ಮಳೆಮಿಂಚು ತುಂಬೇದ ಬಲು ಬಹಳ ಹೊಳೆಯುತಲ್ಯದೆ ಸ್ವಸುಖದ ಕಲ್ಲೋಳ ಝಳಝಳಿಸುತ ಜ್ಯೋತಿರ್ಮಯ ಥಳಥಳ ತಿಳಕೊ ಮಹಿಪತಿ ಗುರುದಯದ ಸುಫಳ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾನುಭವದ ಸುಖ ಸಾಧಿಸಿ ನೋಡಿರೋ ನೇಮದಿಂದ ಘನ ಗುರು ಕೃಪೆಯಿಂದ ಅನುಭವಿಸಲು ಬ್ರಹ್ಮಾನಂದ ಧ್ರುವ ಶಿಖಾಮಧ್ಯದಲಿ ಪೂರ್ಣ ಸುಖಗರವುತಲ್ಯದೆ ಸಂತ್ರಾಧಾರಿ ಸಕಲವೆಲ್ಲಕೆ ಸನ್ಮತವಾಗಿ ತೋರುವದೊಂದೇ ಪರಿ ಶುಕಾದಿ ಮುನಿಗಳು ಪ್ರಕಟಿಸಿ ಹೇಳಿಹರು ಖೂನದೋರಿ ಬೇಕಾದರೆ ಇದು ನೋಡಬೇಕು ಷಡುಚಕ್ರವೇರಿ 1 ಸಾಮಾನ್ಯವಲ್ಲವಿದು ಸಹಸ್ರ ಕೋಟಿಗೊಬ್ಬ ಬಲ್ಲ ಖೂನ ಕಾಮಾಂಧದೊಳಗಿದ್ದ ಮನುಜ ಪ್ರಾಣಿಗಳು ಬಲ್ಲವೇನ ತಾಮಸಿಗಳಿಗಿದು ತಾರ್ಕಣ್ಯವಾಗುವದಲ್ಲ ಗಮ್ಯಸ್ಥಾನ ಸ್ವಾಮಿ ಸದ್ಗುರು ದಯಮಾಡಿದರಹುದು ಸಮ್ಯಗಜ್ಞಾನ 2 ಶಿರೋರತ್ನವಾಗಿ ವಂದಿಸಿಕೊಂಬುವದಿದೆಲ್ಲಕೆ ಪೂಜ್ಯ ಹರುಷಗೈಸುವ ಪುಣ್ಯ ಪರಮ ಭಕ್ತರಿಗಿದೆವೆ ಸಾಯೋಜ್ಯ ತರಳ ಮಹಿಪತಿಗಿದೆ ಸ್ವ ಸುಖದೋರುವ ಸುಸಾಮ್ರಾಜ್ಯ ಶಿರದಲಿ ಕರವಿಟ್ಟು ತೋರಿದ ಗುರು ಭಾನುಕೋಟಿತೇಜ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು