ಇಲ್ಲವೋ ಮುಕ್ತಿ ಇಲ್ಲವಿಲ್ಲವೋ ಮೆಲ್ಲ ಮೆಲ್ಲನೆ ದೃಷ್ಟಿನಿಲ್ಲಿಸಿಮೇರು ಶಿಖರವ ನೋಡುವತನಕ ಪ
ಚಕ್ರವಾರ ಮೆಟ್ಟಿನಿಂತು ಚಂಚಲಿಸದಂತೆ ದೃಷ್ಟಿಯಿಟ್ಟುವಿಕ್ರಮದಲಿ ಬ್ರಹ್ಮರಂದ್ರ ಪೊಕ್ಕು ತೇಜ ಕಾಣುವತನಕ 1
ದೃಢಚಿತ್ತದಲಿದ್ದು ಮಾರುತನ ಮೇಲಕೆ ಊದಿಒಡನೆ ಕೂಡಿಸಿ ವಾಯುಮನವನು ಅಸುವನು ಕಾಣುವತನಕ2
ಓಂಕಾರ ಧ್ವನಿಯ ಕೇಳಿ ಒತ್ತೊತ್ತು ಬೆಳಗಿನೊಳುಶಂಕರನೆನಿಪ ಚಿದಾನಂದ ಬ್ರಹ್ಮವನೆ ಕಾಣುವ ತನಕ 3