ಏಳಯ್ಯಾ ಏಳು ಕಂದಾ | ಏಳು ಪರಮಾನಂದಾ |
ಏಳು ಈರೇಳು ಜಗದೊಡೆಯ ಶ್ರೀಮುಕುಂದಾ ಪ
ಮೊರೆವದೊಂದೇಗಾಲಿ | ಪರಿವಹರಿವೇಗಮಂ |
ಜರಿದು ಯೇಳು ಕುದುರೆಂಗಳದರಾ |
ಪೋರವರುಣನಿಂದ ಭೋರ್ಗರೆವ ಸ್ಯಂದನದೊಳಗ |
ಮೆರೆವ ದಿನಕರ ಉದಯವಾದ ಪೂರ್ವಾದ್ರಿಯಲಿ 1
ಬಿರಿಯೆ ಕಮಲದ ಮೋಗ್ಗೆ ಕರಿಯೆ ಗೋವತ್ಸಗಳು |
ಪರಿಯೆ ನಕ್ಷತ್ರಗಳು ಗಗನದೊಳಗ ||
ಸರಿಯೆ ಚೋರ್ವಿರಹಿಗಳು ವರಿಯದಂತಾಲಯಕೆ |
ದೆರಿಯ ಕಣ್ಣೆವಿಯಗಳು ನಿದ್ರೆಗೈದಿದ ಜನರು 2
ಓಡುತಿದೆ ಕತ್ತಲೆಯು ಬಾಡುತಿದೆ ಕುಮುದ ಮುಖ |
ಕೂಡುತಿವೆ ಚಕ್ರವಾಕಂಗಳೀಗ |
ಆಡುತೆಳೆದುಂಬಿ ಚಲ್ಯಾಡುತಿದೆ ಮಧುರನವ |
ಪಾಡುತಿದೆ ಮಹೀಪತಿ ಸುತನಾಮ ಕೀರ್ತಿಯನು 3