ಸೂರ್ಯ ಮಂಡಲ ಮಧ್ಯವರ್ತಿ | ಕಾರ್ಯ-
ಕಾರಣ ಪ್ರಕೃತಿಗಳಿಗೆ ಚಕ್ರವರ್ತಿ-ವಿಜ್ಞಾನ
ಸ್ಫೂರ್ತಿ-ವಿರಾಟಮೂರ್ತಿ ಪ
ಪಾದ ತುರ್ಯನಾಮಕ ಲೋಕ-
ಮರ್ಯಾದಾ ಸ್ಥಾಪಕ ಮಾದೇವಿರಮಣ-ಶತಕೋಟಿ
ಕಿರಣ-ತೋರೋ ತವ ಚರಣ 1
ಅಮಿತ ನಿರಕ್ಷರ ಕುಕ್ಷಿಗಳ್
ನಿತ್ಯ ಮಾಡುವ ತ-
ಪ್ಪಕ್ಷಮಿಸಬೇಕಪ್ಪ-ನಾವು ನಿನಗೆ ಕಪ್ಪ 2
ಕಮಲ ಸಂಭವ ಹೃದ್ಯ
ನ್ಯಾಯಧರ್ಮಯುಕ್ತ ನಿಗಮಾಂತವೇದ್ಯ
ಚೋದ್ಯ 3
ಹಾರ ಕಿರೀಟ ಕೇಯೂರ ಮಕರಕುಂಡಲ
ಧಾರಿ ಸ್ವರ್ಣಮಯಾಂಗ ಧೃತ ಶಂಖ
ಚಕ್ರ-ಶಿಕ್ಷಿತ ಶುಕ್ರ-ಪರಿಹರಿಸು ವಕ್ರ4
ವೃಷ್ಟಿಯ ಕೊಟ್ಟು ಸಂತುಷ್ಟಿ ಪೊಂದಿಸು ಜಗ
ಜಟ್ಟಿ ಶ್ರೀ ಗುರುರಾಮವಿಠ್ಠಲ ಸ್ವಾಮಿ
ಶಿಷ್ಟ ಜನಪ್ರೇಮಿ-ಸರ್ವಾಂತರ್ಯಾಮಿ5