ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾಲವಾಲ ಪ ಸಿರಿಯರಸನೆ ನಿನ್ನ ಚರಣವ ನಂಬಿದೆ ಸುರಗಣ ಸೇವಿತ ಸುರರಾಜಪಾಲ ಅ.ಪ ಇಂದ್ರನಕೂಡಿ ಮುನೀಂದ್ರನ ಸತಿಶಾಪ ದಿಂದರೆಯಾಗಿರಲಂದು ನೀ ದಯದಿ ಸುಂದರ ಚರಣಾರವಿಂದಗಳಿತ್ತ ಧೂಳಿ ಯಿಂದ ಪಾವನಗೈದ ಇಂದಿರೇಶನೆ ನೀ 1 ಚಕ್ರವರ್ತಿಯು ಮರೆಹೊಕ್ಕರೆ ನುತಿಸಿ ರಕ್ಷಿಸಿದಾಪರಿಯಕ್ಕರೆ ತೋರಿಸಿ 2 ಶಿರಸರಿಸಕ್ಕೆ ಗುರಿಯಿಡಲು ನರನ ಶಿರವುಳುಹಿದ ಸಿರಿವರದವಿಠಲ ಹರಿ3
--------------
ವೆಂಕಟವರದಾರ್ಯರು
ನೀನುಳಿಯೆ ರಕ್ಷಕರ ಕಾಣೆನೀ ಜಗದೊಳಗೆ ಶ್ರೀನಿವಾಸ ಜಗನ್ನಿವಾಸ ಪ ದೀನರಕ್ಷಕ ನಿಖಿಲ ಮಾನವರ ಮಾನಾಭಿ ಮಾನದೊಡೆಯನು ನೀನೆಯಲ್ಲದಿಲ್ಲಾ ಅ.ಪ ನಕ್ರಮುಖದಲ್ಲಿ ಸಿಕ್ಕಿ ದುಃಖಿಸುವ ಕರಿರಾಜ ಚಕ್ರವರ್ತಿಯು ಶರಣುಹೊಕ್ಕೆನೆನಲು ಚಕ್ರವನು ಪಿಡಿದು ನೀನಕ್ಕರೆಯೊಳೈತಂದು ನಕ್ರವದನವ ಸೀಳಿ ರಕ್ಷಿಸಿದೆ ಗಜವಾ ದೇವಾ 1 ಹಿಂದೆ ನಾನಾ ನಗರಿಯಿಂದ ಬಹದಾರಿಯೊಳು ಸಂದುಗಳೀಚಲು ಭಂಡಿ ಸಂಜೆಯೊಳಗೆ ಮುಂದಾಗ ಜೊತೆಯೊಳಗೆ ಬಂಧುಜನದಲ್ಲಿ ನೀ ಬಂದು ಬೆಳಕನು ತೋರಿ ಮುಂದೆಗೂಡಿದೆ ಕೃಷ್ಣಾ 2 ಇಂದು ನಿಜಸತಿಯು ನೊಂದಳುಬ್ಬಸರೋಗ ದಿಂದ ಗಾಳಿಯದೀಪದಂದಮಾಗಿ ನಂದಿ ಪೋಗದ ಮುನ್ನ ಬಂದು ನೀಮರೆಯಾಗು ಎಂದು ಮೊರೆಯಿಡಲಾಗ ಬಂದು ಸಲಹಿದೆ ತಂದೆ 3 ಗುರುಸುತನ ಸಂಯಮದೀ ಪುರದಿಂದ ತಂದಿತ್ತೆ ತುರುಗಾಯ್ವರಸುಗಳನು ಮರಳಿ ಪಡೆದೆ ನರಪೌತ್ರನ ಬಾಣದುರಿಯಿಂದ ರಕ್ಷಿಸಿದೆ ಸರಿಯಾರು ನಿನಗೆ ಸುರನರಭುಜಂಗರಲ್ಲಿ 4 ತರಳಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ ಕರು ವರವಿಭೀಷಣ ತಾಪಸರನು ಪೊರೆದೆ ಶರಣರನು ಪಾಲಿಸುವ ಬಿರುದು ಧರಿಸಿಹ ವ್ಯಾಘ್ರ ಗಿರಿಯೊಳಗೆ ನೆಲೆಸಿರುವ ವರದವಿಠಲರಾಯ 5
--------------
ವೆಂಕಟವರದಾರ್ಯರು
ಪಾದಸೇವೆಯ ಪಾಲಿಸೋ ಪಂಕಜನಾಭ ಪ ಪಾದಸೇವೆಯ ತೋರೋ ವೇದಗೋಚರ ವ್ಯಾಘ್ರ ಭೂಧರ ವಿಹರಣ ಶ್ರೀಧರ ಹರಿ ನಿನ್ನ ಅ.ಪ ಶೇಷವಾಯುಗಳತಿದೋಷವರ್ಜಿಸಿ ತನು ಶೋಷಿಸಿ ತಪನ ವಿಶೇಷವಾಚರಿಸೆ ದೋಷರಹಿತ ಗುಣಭೂಷಾ ಶೇಷನಿಗೊಲಿದು ಶೇಷಪರ್ವತ ಶಿರೋಭೂಷಣನೆನಿಸಿದ 1 ಬಲಿಚಕ್ರವರ್ತಿಯು ಬಲವೈರಿಯನು ಬಲು ಬಳಲಿಸಿ ರಾಜ್ಯವ ಛಲದಿಂದಾಕ್ರಮಿಸೆ ನಲಿದು ವಾಮನನಾಗಿ ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ ಬಲಿಯ ಮೆಟ್ಟಿದ ಧೀರ2 ಪಲಕಾಲ ಶಾಪದಿ ಶಿಲೆಯಾಗಿದ್ದ ಗೌತಮ ಕುಲಸತಿಗೊಲಿದು ನಿರ್ಮಲ ತಪೋವನಕೆ ಸುಳಿದು ಆ ಲಲನೆಯ ಕಲುಷವ ಖಂಡಿಸಿ ಲಲನಾರೂಪವನಿತ್ತು ಸಲಹಿದ ಪಾವನ 3 ತರಣಿತನಯನೆಚ್ಚ ಗರಳಶರವು ಬೇಗ ನರನುತ್ತಮಾಂಗಕೆ ಗುರಿಯಾಗಿ ಬರಲು ಚರಣದುಂಗುಟದಿಂದ ಧರಣೀತಳವನೂರಿ ನರನ ಶಿರವ ಕಾಯ್ದ ನರನಾರಾಯಣ ನಿನ್ನ 4 ಪುಲಿನಾಮದಸುರನು ಛಲದಿ ಮಾಂಡವ್ಯನ ಗಳವಪಿಡಿದು ಬಾಧೆಗೊಳಿಸೆ ವೇಗದಲಿ ಪುಲಿಗೆ ಮೋಕ್ಷವನಿತ್ತು ಪುಲಿಗಿರಿಯಲಿ ಮುನಿ ಕುಲಜ ಮಾಂಡವ್ಯಗೆ ಒಲಿದ ವರದವಿಠಲ ನಾರಾಯಣ5
--------------
ವೆಂಕಟವರದಾರ್ಯರು
ರಾಜರಯ್ಯ ನಾವು ನಮ್ಮ ರಾಜೀವಾಕ್ಷನ ಕರುಣವ ಪಡೆದರೆ ಪ ಊಂಛವೃತ್ತಿಯೇ ರಾಜ್ಯಕೋಶ | ನಿಷ್ಟ್ರ- ಪಂಚ ನಡತೆಯೇ ನಮಗೆ ಕಛೇರಿ ಪಂಚೇಂದ್ರಿಯ ಜಯಿಸುವುದು ಮ್ಯಾಜಿಸ್ಟ್ರೇಟ್ ಪಂಚವಿಷಯ ಹಂಚಿಕೆಯೇ ಸಿವಿಲ್‍ಬಾಬು 1 ದೇವಾದಾಯದ ಧನವೇ ರೆವಿನ್ಯೂ ಕಾವನು ಕೊಲ್ವನು ಹರಿಯೆಂಬವುದು ಪಾವನ ಜಡ್ಜ್‍ಮೆಂಟ್ ಕಾಪಿರಿಜಿಸ್ಟರು 2 ದೇವೇಂದ್ರಾದಿಗಳೇ ಕಲೆಕ್ಟರ್ ಸುರರು ತಾಲ್ಲೂಕಾಫೀಸರು ಧರ್ಮನಿಷ್ಠರೆಲ್ಲ ನೌಕರ ಜನಗಳು 3 ದಾನಧರ್ಮವೇ ಡಬ್ಲಿಯು ಎಸ್ಸು ಜ್ಞಾನ ಸಾಧನವೇ ವಸೂಲಿ ಲೆಖ್ಖ ಮಾನವ ವೃತ್ತಿಗಳೆಲ್ಲ ರಿಕಾರ್ಡ್ 4 ಸಪ್ತಾವರ್ಣವೇ ಸಪ್ತಾಂಗದ ಸಭೆ ಸಪ್ತಧರ್ಮವೇ ಕಾರ್ಯಗೌರವವು ಗುರೂಪದೇಶವೇ ಜ್ಞಾನಾರ್ಜನೆಯು 5 ವನಜನಯನ ಗುರುರಾಮವಿಠ್ಠಲನೆ ಸೈನು ಮೊಹರು ಮಹಾ ಚಕ್ರವರ್ತಿಯು 6
--------------
ಗುರುರಾಮವಿಠಲ
ಶ್ರೀನಿವಾಸ ಜಗನ್ನಿವಾಸ ಪ ದೀನ ರಕ್ಷಕ ನಿಖಿಲ ಮಾನವರಮಾನಾಭಿಮಾನ ದೊಡೆಯನು ನೀನೇಯಲ್ಲದಿಲ್ಲಾ ಅ.ಪ. ನಕ್ರಮುಖದಲ್ಲಿ ಸಿಕ್ಕಿ ದುಃಖಿಸುವ ಕರಿರಾಜ ಚಕ್ರವರ್ತಿಯು ಶರಣು ಹೊಕ್ಕೆನನಲು ಚಕ್ರವನು ಪಿಡಿದು ನೀನಕ್ಕರೆಯೊಳೈತಂದು ನಕ್ರವದನವಸೀಳಿ ರಕ್ಷಿಸಿದೆ ಗಜವಾ-ದೇವ 1 ಹಿಂದೆ ನಾನಾನ್ನಗಿರಿಯಿಂದ ಬಹದಾರಿಯೊಳು ಸಂದುಗೆಳೀಚಲು ಭಂಡಿ ಸಂಜೆಯೊಳಗೆ ಮುಂದಾಗ ಜೊತೆಯೊಳಗೆ ಬಂದು ಜನಕೆಲ್ಲಿನೀ ಬಂದು ಬೆಳಕನು ತೋರಿ ಮಂದೆಗೂಡಿದೆ ಕೃಷ್ಣಾ 2 ಇಂದು ನಿಜ ಸತಿಯುನೊಂದಳುಬ್ಬಸರೋಗದಿಂದ ಗಾಳಿಯದೀಪದಂದಮಾಗಿ/ ನಂದಿಪೋಗದ ಮುನ್ನ ಬಂದು ನೀಮರೆಯಾಗು ಎಂದು ಮೊರೆಯಿಡಲೀಗ ಬಂದು ಸಲಹಿದೆ ತಂದೆ 3 ತುರುಗಾಯ್ವರಸುಗಳನು ಮರಳಿಪಡೆದೆ ನರಪೌತ್ರನನು ಬಾಣದುರಿಯಿಂದ ರಕ್ಷಿಸಿದೆ ಸರಿಯಾರು ನಿನಗೆ ಸುರನರಭುಜಂಗರಲ್ಲಿ4 ತರಳಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ ಕುರು ವರವಿಭೀಷಣ ತಾಪಸರನುಪೊರೆದೆ ಶರಣರನು ಪಾಲಿಸುವ ಬಿರುದು ಧರಿಸಿಹ ವ್ಯಾಘ್ರಗಿರಿಯೊಳಗೆ ನೆಲಸಿರುವ ವರದ ವಿಠಲ ರಾಯ 5
--------------
ಸರಗೂರು ವೆಂಕಟವರದಾರ್ಯರು