ನರ್ತನಶಾಲೆ ಇದೇನಯ್ಯ
ವರ್ತುಳವಾದ ಭೂಮಂಡಲವೆಲ್ಲಾ ಪ
ಕರ್ತನೀನೇ ಚಕ್ರವರ್ತಿಯಾಗಿರುವೆ
ವರ್ತನೆ ಗಡಿಬಿಡಿ ಮಾಡದಿರಯ್ಯ ಅ.ಪ
ಕುಂಟರು ಕುರುಡರು ನರ್ತನೆಗೈವರು
ನೆಂಟರು ಭಂಟರು ನರ್ತಿಸುತಿರುವರು
ಗಂಟನುಂಗುವರೂ ನರ್ತಿಸುತಿಹರೋ1
ವರ್ತಕ ಲಾಭಕೆ ನರ್ತಿಸುತಿಹನು
ಆರ್ತ ದರ್ಶನಕಾಗಿ ನರ್ತಿಸುತಿಹನು
ನರ್ತನೆ ಮಾಂಗಿರಿಪತಿ ಕೃಪೆಗೈಯ್ಯ 2