ಬಂದ ದುರಿತಗಳ ಪರಿಹಾರ ಮಾಡಯ್ಯಾ |
ತಂದೆ ಶ್ರೀ ಗುರು ಮಹೀಪತಿರಾಯಾ ಪ
ಕಾಲತುಂಬಿದ್ದರೆ ಆಲಸ್ಯವೇಕಯ್ಯಾ |
ಕಾಲ ಕರ್ಮಗಳಿಂದ ಶ್ರಮಿಸುತಿಹನು |
ಬಾಲಕನ ಕೈಯ ಸೇವೆ ಬೇಕಾದರೆ |
ದುರಿತ ಛೇದಿಸು 1
ಮುನ್ನಿನ ಕರ್ಮಗಳ ಬಹಳ ಭೋಗಿಸಿದೆನು |
ಇನ್ನು ನಿನ್ನ ಕೃಪೆ ಅವಿಚ್ಛಿನ್ನ ಮಾಡಯ್ಯ |
ನಿನ್ನ ಕರದಿಂದಲಿ ಚನ್ನ ಚಕ್ರವಪಿಡಿದು |
ಮುನ್ನೆ ದಾಸರ ಶ್ರಮ ಹರಿಗಡದಂತೆ 2
ಪರವಸ್ತು ದತ್ತಾತ್ರೇಯ ಸೂರ್ಯಕೋಟಿ ಪ್ರಕಾಶ |
ಗುರು ಮಹೀಪತಿಯಾಗಿ ಜನಿಸಿದೈಯ್ಯ |
ತರಳ ದೇವಗಿನ್ನಾರುಗತಿಯು ಇಲ್ಲ |
ಪೂರ್ಣಾಯುಷ್ಯವ ಕೊಟ್ಟು ರಕ್ಷಿಸಯ್ಯಾ3