ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕತ್ತೆಯು ನೀನಲ್ಲ ಕರುಣಾಕರನಹೆ ಕತ್ತೆಯಾಗಬೇಡ ಕತ್ತೆಸತ್ಯ ಚಿದಾನಂದ ನೀನರೆ ಮರೆತರೆ ಕತ್ತೆನೀನಾಗುವೆ ಕತ್ತೆ ಪ ಬೊಂಬೆಗೆ ಪ್ರಾಣವನಿಟ್ಟು ದೇವರು ಎಂಬೆ ದೇವರು ಅವು ಕತ್ತೆಬೊಂಬೆಗೆ ಪ್ರಾಣ ಪ್ರತಿಷ್ಠೆಯ ಮಾಡಲು ನೀನಾರು ಹೇಳಲೋ ಕತ್ತೆಬೊಂಬೆ ಸತ್ತವಲ್ಲೊ ಪ್ರಾಣ ತೆಗೆದುಕೊಳ್ಳೆ ನೀರ ಮುಳುಗು ನೀನು ಕತ್ತೆಬೊಂಬೆ ಚೇತನ ಸಾಕ್ಷಾತ್ಕಾರವೆ ಇರೆ ದೇವ ನೀನೆಂತಲ್ಲ ಕತ್ತೆ 1 ಹಿಂದಣ ಪುರಾಣ ಹೇಳುವೆ ನೀನೀಗ ನಿನ್ನ ಪುರಾಣವೆಲ್ಲೊ ಕತ್ತೆಬಂದವನಾರೋ ಹೋಗುವನಾರೋ ಎಂಬುದು ತಿಳಿಯಲಿಲ್ಲ ಕತ್ತೆಬಂದೆಯೋ ಅವಿದ್ಯೆ ದೆಸೆಯಿಂದ ರೂಪಿಗೆ ಜೀವ ನೀನೆನಿಸಿ ಕತ್ತೆಎಂದು ಎಂದಿಗೂ ನೀ ಬ್ರಹ್ಮವೆ ಸತ್ಯವು ಯೋಚನೆ ಬಿಡು ನೀ ಕತ್ತೆ 2 ನಮಕ ಚಮಕ ಅಭಿಷೇಕ ಮಾಡುವಿ ಏನಂತ ಮಾಡುವಿ ಕತ್ತೆಸಮನಿಸಲಿಲ್ಲ ವೇದಾಂತದರ್ಥವು ನಿನಗೆ ಸುಡು ನಿನ್ನ ತಿಳಿವಿಗೆ ಕತ್ತೆಕಮಲಮುಖಿಯ ಸುತರನು ನೀನು ನಂಬುವೆ ಪ್ರಪಂಚ ಸತ್ಯವೇನೋ ಕತ್ತೆಭ್ರಮಣಕ್ಕೆ ಸಿಲುಕಿ ನಾನಾ ಭಂಗಪಡುವೆ ಭಾವಿಸಿ ತಿಳಿನೀ ಕತ್ತೆ 3 ಕನಸಿನನುಭವದಂತೆ ಪ್ರಾರಬ್ಧ ತೋರುವುದು ದೇಹದಾರಿಗಳಿಗೆ ಕತ್ತೆಚಿನುಮಯಾತ್ಮಕನಲ್ಲಿ ಪ್ರಾರಬ್ಧ ತೋರಿಯೆ ತನಗೆ ತಾನಡಗುವುದು ಕತ್ತೆನಿನಗದು ಏನಿಲ್ಲ ಮನಸಿನ ಭ್ರಾಂತಿಯೆನಲನುಭವಿಸುವೆ ಕತ್ತೆ 4 ಪಾದ ತಿಳಿ ತತ್ತ್ವಮಸಿಯನ ಕತ್ತೆಬಂಧಿಸಿ ಆಧಾರ ಚಕ್ರವನೇರು ಏರಿ ನಿಂತು ಭ್ರೂಮಧ್ಯದಿ ಕತ್ತೆಮುಂದೆ ಹರಿಯ ನೋಡು ಸಹಸ್ರಾರದ ಪೀಠ ಛಂದದಿ ಅಡರ್ಮೇಲೆ ಕತ್ತೆಸುಂದರ ಚಿದಾನಂದ ನಾಗಿಯ ಥಳಥಳ ಬೆಳಕಲ್ಲಿ ಬೆಳಕಾಗೊ ಕತ್ತೆ5
--------------
ಚಿದಾನಂದ ಅವಧೂತರು