ಕಾಲ ಚಕ್ರವನೇರಿ ಭಾಸಿಪ ಬಾಲ ಸೂರ್ಯನ ವಂದಿಪೆ ಪ
ಕಾಲ ರೂಪನೆ ಬಾಲ ಚಂದ್ರನೆ ಪೂಜಿಪೆ ಅ.ಪ.
ಸೃಷ್ಟಿ ರೂಪನೆ ವೃಷ್ಟಿದಾಯಕ ಶ್ರೇಷ್ಠ ಭೂಮಿಯ ಪುತ್ರನೆ
ಕಷ್ಟಹರ ಸುಜ್ಞಾನ ಮೂರುತಿ ಇಷ್ಟದಾಯಕ ಸೌಮ್ಯನೆ 1
ದೇವಗಣಗುರು ಕ್ಷೇಮದಾಯಕ ಜೀವವರ ಗುರು ಪಾಲಿಸೈ
ದೇವಶುಕ್ರನೆ ಕಾವ್ಯರೂಪನೆ ಕಾವ್ಯ ಸೇವನೆ ಪೋಷಿಸೈ 2
ಪುಂಗವರ ಮಹಿಮಾಂಗ ಶನಿ ಸನ್ಮಂಗಳಾತ್ಮಕ ದೇವನೆ
ಮಂಗಳವನೆಸಗೆಂದು ವಂದಿಪೆ ರಾಹುವೆ ವರಕೇತುವೆ 3
ಶ್ರೀನಿವಾಸನೆ ಪಾಲಿಸುವುದೆಂದೀ ನವಗ್ರಹ ಭಕ್ತಿಯಿಂಧೇನುನಗರ ಜನೇಶನೇವರ ವೇಂಕಟೇಶನೆ ಪೋಷಿಸೈ 4