ವಿವೇಕದಿಂದಾ ಮತಿಯುಕ್ತನಾಗಿ
ಕುವಿದ್ಯದಾದಾ ಗುಣವೆಲ್ಲ ನೀಗಿ
ಭಾವಾರ್ಥದಿಂದಾ ಸ್ಮರಿಸೋದು ನೀತಿ
ಗೋವಿಂದದಾಮೋದರ ಮಾಧವೇತಿ 1
ತ್ರಿವಿಧ ತಾಪದೊಳು ಮಗ್ನನಾಗಿ
ನೀವ್ಯರ್ಥದಿನಗಳಿಯದೆ ಹೋಗಿ
ಭಾವಾರ್ಥದಿಂದಾ ಸ್ಮರಿಸೋದು ನೀತಿ
ಗೋವಿಂದ ದಾಮೋದರ ಮಾಧವೇತಿ 2
ಈ ವಿಷಯದಾಸುಖ ನಿತ್ಯವಲ್ಲಾ
ನೀವಾತು ಕೇಳಿಗುರುವೀನ ಸೊಲ್ಲಾ
ಭಾವಾರ್ಥದಿಂದ ಸ್ಮರಿಸೂದು ನೀತಿ
ಗೋವಿಂದ ದಾಮೋದರ ಮಾಧವೇತಿ 3
ಆವದು ತನ್ನ ಹಿತವನು ನೋಡಿ
ಸಾವಧನಾಗೀ ಶ್ರವಣ ಮಾಡಿ
ಭಾವರ್ಥದಿಂದ ಸ್ಮರಿಸೋದು ನೀತಿ
ಗೋವಿಂದ ದಾಮೋದರ ಮಾಧವೇತಿ 4
ಅವಾವ ಯೋನಿಯಲಿ ಬಂದಹಿಂದಾ
ಅವದುಗತಿಯಂದು ನೋಡಿವಂದಾ
ಭಾವರ್ಥದಿಂದ ಸ್ಮರಿಸೋದು ನೀತಿ
ಗೋವಿಂದ ದಾಮೋದರ ಮಾಧವೇತಿ 5
ತಾವಂದೇ ಆಶ್ರೈಸದೆ ಕಾಮಧೇನು
ಸಾವಿರ ಸಾಧನಕ ಬೀಳುದೇನು
ಬಾವಾರ್ಥದಿಂದಾ ಸ್ಮರಿಸೋದು ನೀತಿ
ಗೋವಿಂದ ದಾಮೋದರ ಮಾಧವೇತಿ 6
ಜೀವಾತ್ಮರಾಗಿ ಸಚ ರಾಚ ರಾವ
ಬಾವರ್ಥದಿಂದಾ ಸ್ಮರಿಸೋದು ನೀತಿ
ಗೋವಿಂದ ದಾಮೊದರ ಮಾಧವೇತಿ 7
ಗೋವಿಂದ ಅಷ್ಟಕವ ದಾವಪ್ರಾಣೀ
ಸೇವಿಸುವನು ಕಾವನು ಚಕ್ರಪ್ರಾಣೀ
ಭಾವಾರ್ಥದಿಂದಾ ಸ್ಮರಿಸೋದು ನೀತಿ
ಗೋವಿಂದ ದಾಮೋದರ ಮಾಧವೇತಿ 8