ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೂತನಾಥ ಪಾಲಿಸೆನ್ನ ನಾರಾಯಣ ಭೂತನಾಥನೆ ಪಾಲಿಸೆನ್ನ ಪ ಸ್ವರ್ಣದಿ ಭಾಸುರಾಂಗ ಶ್ರೀರಾಜರ ಸ್ವರ್ಣದ ಪಾಲಕಿಯನ್ನು ಮುಂಭಾಗದಿ ಭಕುತಿಯಿಂದಲಿ ಪೊತ್ತ ಶ್ರೀ ಭೂತರಾಜ 1 ಬದರಿಕಾಶ್ರಮದಿಂದ ನದಿಯ ತಾತನ ದಿವ್ಯ ಸದನವ ಶ್ರೀಸೋದಾಕ್ಷೇತ್ರಕ್ಕೆ ತರಲು ಬೆದರದೆ ವಿಘ್ನವ ತಂದ ದೈತ್ಯನ ರಥ ಚಕ್ರದಿಂದಲಿ ಕೊಂದು ರಥವ ಬೇಗದಿ ತಂದೆ 2 ಧನಪನ ಕೋಶದೊಳಿಪ್ಪ ಮೌಳಿಯ ವೇಗ - ದಿಂದಲಿ ನೀ ತಂದು ವಾದಿರಾಜರಿಗಿತ್ತೆ ಅನುಮಾನವಿಲ್ಲದೆ ತಂದು ಶ್ರೀರಾಜೇಶ ಹಯಮುಖನನ ಚರಾಗ್ರಣಿಯಾಗಿ ಮೆರೆದೆ 3
--------------
ವಿಶ್ವೇಂದ್ರತೀರ್ಥ
ಶರಣ ರಕ್ಷಕನಹುದೋ ಶ್ರೀ ಹರಿಯೆ ಶರಣರಕ್ಷಕನೆ ಧ್ರುವ ನಕ್ರ ಗಜೇಂದ್ರಗೆ ವಕ್ರಾಗಿ ತ್ರಿ ವಿಕ್ರಮನೆಂದಂದು ಮೊರೆ ಇಡಲು ಚಕ್ರದಿಂದಲಿ ನೀ ವಕ್ರನೆ ಹರಿಸಿ ಅಕ್ರದಲೊದಗಿ ಕಾಯ್ದವ ನೀನಹುದೊ 1 ತರಳ ಪ್ರಹ್ಲಾದನು ಮೊರೆ ಇಡುವದು ಕೇಳಿ ಭರದಿಂದ ಸ್ಥಂಭದಲುದ್ಭವಿಸಿ ದುರುಳದೈತ್ಯನ ಕರುಳೊನಮಾಲೆಯನ್ನು ಮಾಡಿ ಕರುಣಿಸಿ ಭಕ್ತ ಗೊಲಿದವ ನೀನಹುದೊ 2 ಸೆರಗಪಿಡಿದು ಸೀರೆ ಸೆಳೆವ ಸಮಯದಲಿ ಹರಿಯೆಂದು ದ್ರೌಪದಿ ಮೊರೆ ಇಡಲು ತ್ವರದಿಂದೊದಗಿ ಬಂದು ಪೂರಿಸಿ ವಸ್ತ್ರವ ಧರೆಯೊಳು ಲಜ್ಜೆಗಾಯ್ದವ ನೀನಹುದೊ 3 ಮಂಡಿಸಿರಲು ಕೌರವ ಅರಗಿನ ಮನೆ ಪಾಂಡವರದರೊಳು ಸಿಲ್ಕಿರಲು ಕಂಡು ನೀ ಅದರೊಳು ವಿವರವ ತೋರಿ ಪೊರವಂಡಿಸಿದ ಪ್ರಚಂಡ ನೀನಹುದೊ 4 ಎಸೇಸು ಭಕುತರ ಅವರಸಕ್ಕೊದಗುತ ಲೇಸಾಗಿ ಕಾಯ್ದವ ನೀನಹುದೊ ದಾಸ ಮಹಿಪತಿ ಮನದವಸರಕ್ಕೊದಗುತ ಭಾಸುತಲಿಹ್ಯ ಭಾಸ್ಕರ ಕೋಟಿ ತೇಜ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು