ಒಟ್ಟು 5 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಪೆ ಮಾಡೋ ಕೃಷ್ಣ ಕೃಪೆಮಾಡೋ ತಪ್ಪದೆ ಪ್ರಾತಃ ಸಂಜೆ ನಿನ್ನ ಸ್ತುತಿ ಮಾಡುವಂತೆ ಪ ಚಂದ್ರಹಾಸನಂತೆ ವ್ರತ ಮಾಡಲರಿಯೆ ಅಂದಿನ ಧ್ರುವನಂತೆ ತಪಗೈಯಲಾರೆ ಕಂದ ಪ್ರಹ್ಲಾದನಂತೆ ಬಿಡದೆ ನುತಿಸಲಾರೆ ಸಂದ ನಚಿಕೇತನಂತೆ ಮೃತ್ಯುಗೆಲ್ಲಲರಿಯೆ 1 ಕರಿರಾಜನಂತೆ ಕೂಗಲರಿಯೆನೋ ಗರುಡನಂತೆ ಸದಾ ಹೊತ್ತು ತಿರುಗಲಾರೆ ಮರುತಜನಂತೆ ಭಂಟನಾಗಲರಿಯೆ ಉರಗರಾಜನಂತೆ ಶಯನಕಾಗಲಾರೆ 2 ದ್ರೌಪದಿಯಂತೆ ಅತ್ತು ಮೊರೆಯಿಡಲಾರೆ ರೂಪೆ ಭಾಮೆಯಂತೆ ಬಲು ಮೋಹಿಸಲಾರೆ ಆಪಾಟಿ ಸಖನಾಗರಿಯೆನು ಮಕರಂದನೊಲು ವಿಪ್ರನಾರಾಯಣನಂತೆ ಭಕ್ತಿಯರಿಯೆನೊ ಹರಿಯೆ 3 ಜಾಜಿಪುರೀಶ ನಿನ್ನ ಚರಣ ಸೇವೆಯ ಕೊಡೊ ಸಾಜದಿ ಮಾಡುವೆ ತಿಳಿದಂತೆ ಪಾಮರನು 4
--------------
ನಾರಾಯಣಶರ್ಮರು
ಚಂದ್ರಹಾಸನ ಕಥೆ ಸುಜನ ತ್ರೈಭುವನೋದ್ಧಾರ ಕಾರುಣ್ಯನಿಧಿ ಹೆಳವನಕಟ್ಟೆರಂಗಯ್ಯ ನಾರಾಯಣ ಶರಣೆಂಬೆ 1 ಭಕ್ತರ ಭಾಗ್ಯನಿಧಿಯೆ ನುಡಿಸಯ್ಯ ಎನ್ನ ಜಿಹ್ವೆಯಲಿ 2 ಅಜಹರಿಸುರ ವಂದಿತನೆ ನಿಜವಾಗೊ ಮತಿಗೆ ಮಂಗಳವ 3 ಸಂಗೀತಲೋಲೆ ಸುಶೀಲೆ ಹಿಂಗದೆ ನೆಲಸೆನ್ನ ತಾಯೆ 4 ನಿತ್ಯಾನಂದ ರಜತಾಚಲವಾಸನೆ ಭಕ್ತವತ್ಸಲ ಭಾಳನೇತ್ರ ಮುಗಿದು ವಂದಿಸುವೆ 5 ಸೂರ್ಯ ಪತಿಯ ಚರಣವನ್ನು ನೆನೆವೆ ಮಂಗಳವಾಗಲೆಂದು 6 ಒರೆದಂಥ ಜೈಮಿನಿಯೊಳಗೆ ಮಾಡಿ ವರ್ಣಿಸುವೆ 7 ಸಂದೇಹ ಮಾಡುತ್ತಿರಲು ಪೇಳಿದ ಫಲುಗುಣಗೆ 8 ಮುಂದೊತ್ತಿ ರಥವ ಬೆಂಬತ್ತಿ ನಿಂದಿರಿಸಿದ ಚಂದ್ರಹಾಸ 9 ವೈಷ್ಣವಕುಲ ಶಿರೋರನ್ನ ಪರಾಕ್ರಮ ದಿಟ್ಟರಿಗಿದು ನೀತವೆಂದು 10 ನ್ನೊಡೆಯಗೆ ಪೇಳಿದರಾಗ ಕಡುಚಿಂತೆಯಲಿ ಪಾರ್ಥನಿದ್ದ 11 ದಿನಕರ ಪ್ರತಿಬಿಂಬದಂತೆ ವನಜನಾಭ ಕೃಷ್ಣ ಶರಣೆನ್ನುತ ಸುರಮುನಿ ಇಳಿದಂಬರದಿಂದ12 ಉಟ್ಟಿಹ ಕರದಿ ವೇಣುವನು ಶ್ರೇಷ್ಠÀ ಬಂದನು ಇವರೆಡೆಗೆ 13 ಆನಂದದಿಂದ ಕೇಳಿದರು 14 ಎಲ್ಲ ವೃತ್ತಾಂತವನರುಹಿ ಬಲ್ಲಿದ ತುರಗವ ಕಟ್ಟಿದ ಧೀರ ಅಲ್ಲಾರು ಎನುತ ಕೇಳಿದರು15 ಪ್ರಮುಖರಿಲ್ಲ್ಯಾರು ಪೇಳೆನುಲು ಸಮಯವಲ್ಲವು ಪೇಳೆನಲು 16 ವ್ಯಾಸಾಂಬರೀಷ ವಿಭೀಷಣಕ್ರೂರ ಪರಾಶರ ಧ್ರುವ ಪ್ರಹಲ್ಲಾದ ಈಸುಮಂದಿ ಭಕ್ತರಿಗಧಿಕನು ಚಂದ್ರಹಾಸನೆಂಬಾ ಹರಿಭಕ್ತ17 ಹೇಳಬೇಕೆನುತ ಮುನೀಶನೆಂದೆಂಬ ಕೇರಾಳದೇಶದ ರಾಜ್ಯವನು ಪ್ರಧಾನಿಯನು 18 ಭೂತಮೂಲದಲಿ ಪುಟ್ಟಿದನು ತಾತ ಕಾಲವಾಗಿ ಪೋದ 19 ಸಾಯಲಾದಳು ರಾಜಪತ್ನಿ ಸಿರಿ ಪರರಾಯರು ಬಂದು ಕಟ್ಟಿದರು20 ಬಾಲನಿರಲು ಆ ಶಿಶುವೆತ್ತಿ ನಡೆದಳು 21 ಕುಂತಳಪುರಕಾಗಿ ಬಂದು ಆ ಗ್ರಾಮದಲ್ಲಿ 22 ಎರೆದು ಪೋಷಣೆಯ ಮಾಡುವಳು ಮರುಗುತಿರ್ದಳು ಮನದೊಳಗೆ 23 ಹಾಸುವ ವಸ್ತ್ರಗಳಿಲ್ಲ ಬೇಸತ್ತು ಅಳಲುವಳೊಮ್ಮೆ 24 ನೋಡಿ ಹಿಗ್ಗುವಳು ಆಲಂಬದಲ್ಲಿರುತಿಹಳು 25 ಕಂಗಳ ಕುಡಿನೋಟವೆಸೆಯೆ ಮಂಗಳಗಾತ್ರದ ಮುದ್ದುಬಾಲಕನೆಲ್ಲರಂಗಳ- ದೊಳಗಾಡುತಿಹನು 26 ಪರಪುಟ್ಟನಾದುದ ಕಂಡು ಮಡಿಯ ಪೊದಿಸುವರು 27 ಮಾಗಾಯಿ ಮುರವಿಟ್ಟು ಮನ್ನಿಸಿ ಕೆನೆಮೊಸ- ರೋಗರವನ್ನು ಉಣಿಸುವರು ರಾಗಗಾನದಲಿ ಪಾಡುವರು 28 ಎಣ್ಣೂರಿಗೆಯನು ಕೊಡಿಸುವರು ಕೇರಿ ಕೇರಿಗಳೊಳು ಕೊಡುವರೆಲ್ಲರ ಕಾರುಣ್ಯದ ಕಂದನಾಗಿ29 ತಮ್ಮಾಲಯದೊಳು ಕರೆದೊಯ್ದು ಮಾಲೆಯನವಗೆ ಹಾಕುವರು 30 ಮಾವಿನ ಫಲಗಳನು ಮದನನಯ್ಯನ ಕಿಂಕರಗೆ 31 ಸಾಲಿಗ್ರಾಮ ಶಿಲೆಯ ಅಷ್ಟು ಜನರಿಗೆ ತೋರಿಸಿದ 32 ಪುಣ್ಯೋದಯದಿ ಸಾಲಿಗ್ರಾಮ ಶಿಲೆಯು ಲಕ್ಷ್ಮಿನಾರಾಯಣ ಮೂರುತಿಯ 33 ಕೂಡಿದ ಗೆಳೆಯರ ಕೂಡೆ ದೌಡೆಯೊಳಿಟ್ಟು ಕೊಂಡಿಹನು 34 ಮಂಡೆಗಳನು ತಗ್ಗಿಸುವನು 35 ಬೆಚ್ಚುವನಪಹರಿಸುವರೆನುತ ಬಹು ಎಚ್ಚೆತ್ತು ಪಿಡಿದಾಡುವನು ಬಾಯೊಳಗಿಡುವ 36 ಮಂದಿರದಲಿ ವಿಪ್ರರಿಗೆ ಆ- ಬಂದರು ಬುಧಜನರೆಲ್ಲ 37 ಶ್ರೇಷ್ಠರೆಲ್ಲರ ಕುಳ್ಳಿರಿಸಿ 38 ಮಂತ್ರಾಕ್ಷತೆಯನು ಮಂತ್ರಿಗಿತ್ತು ಲಕ್ಷಣವನ್ನೆ ನೋಡಿದರು 39
--------------
ಹೆಳವನಕಟ್ಟೆ ಗಿರಿಯಮ್ಮ
ಯಾರ ಭಯವೇನಿಹುದು ಶ್ರೀವೇಂಕಟೇಶ ನೀನೆ ದಯವಾದ ಮೇಲ್ಯಾರ ಹಂಗೇನು ಪ ಪೊಡವಿಯಾಳುವ ದೊರೆಯು ಒಡವೆವೊಯ್ದರೆಯೇನು ಅಡವಿಯೊಳು ಮೃಗಬಂದು ತಡೆದರೇನು ತೊಡೆಯನೇರುವ ಮಗನ ಅಡವಿಗಟ್ಟಿದರೇನು ನೆಗಳು ಕಾಲ್ಪಿಡಿದರೇನು 1 ವ್ಯಾಳ ಬಹುರೋಷದಲಿ ಕಾಲು ಸುತ್ತಿದರೇನು ಕಾಳ ರಾಕ್ಷಸ ಕೈಯ ಪಿಡಿದರೇನು ಜ್ವಾಲೆ ನಾಲ್ದೆಸೆಯಿಂದ ಮೇಲೆ ಮುಸುಕಿದರೇನು ಹಗೆ ತನಗೆ ವಿಷವಿಕ್ಕಲೇನು 2 ಯಾಗಕೋಸುಗ ಮೃಗವ ಹೋಗಿ ತರುವೆನುಯೆಂದು ರಾಗದೊಳು ಬಲವಂತ ಕರೆಯಲಾಗಿ ಮೃಗ ಬಂದು ಬಾಗಿಲೊಳು ಕಾಲ್ಪಿಡಿಯೆ ಆಗ ಬಿಡಿಸಿದವರಾರು ನಾಗಗಿರಿವಾಸ 3 ಕಡುಗಲಿಯು ದ್ರೌಪದಿಯ ಉಡಿಮಡಿಯ ಸೆಳೆವಂದು ಒಡೆಯ ರಕ್ಷಿಸುಯೆಂದು ನಡುಗುತಿರಲು ಮಡದಿಗಕ್ಷಯವಿತ್ತು ನುಡಿದ ಭಾಷೆಯ ಸಲಿಸಿ ಕೊಡಲಿಲ್ಲವೆ ನೀನು ಒಡೆಯ ಗಿರಿವಾಸ 4 ಕೆಡೆನುಡಿದು ಬಾಲಕನ ಅಡವಿಗಟ್ಟಲು ಪಿತನು ಸಡಗರದ ಮಡದಿಯಳ ಮಾತ ಕೇಳಿ ಒಡೆಯ ನೀನೆಯೆಂದು ಕಡುತಪವನರ್ಚಿಸಲು ಉಡುಗಣಕೆ ಮೇಲಾದ ಪದವ ತೋರಿದೆಲಾ 5 ಮೃಗ ಜಲದ ಹೊಂಡದೊಳಗಾಡುತಿರೆ ಕಂಡು ಕಡು ರೋಷದಲಿ ಕಾಲ್ಪಿಡಿಯಲು ಪುಂಡರಿಕಾಕ್ಷನನು ಭಯಗೊಂಡು ಕರೆದರೆ ತುಂಡಿಸಿದೆ ಚಕ್ರದೊಳು ನೆಗಳ ಗಂಟಲನು 6 ಒಬ್ಬನೆ ಪಥದೊಳಗೆ ಸರ್ಬಬಲನೈದುತಿರೆ ಹೆಬ್ಬಾವು ಆತನನು ಮೈಸುತ್ತಲು ಗರ್ಭದೊಳು ನಡುನಡುಗಿ ಉಬ್ಬಸವ ಬಿಡುತಿರಲು ಎಬ್ಬಿಸಿದರಾರಲ್ಲಿ ನಿರ್ಭಯವ ತೋರಿ 7 ದುರುಳ ದೈತ್ಯನು ತನ್ನ ಕುವರನನು ಕೊಲುವುತಿರೆ ಭರದಿಂದ ಕಂಬದೊಳು ಹೊರಟು ಬಂದು ನರಹರಿಯ ರೂಪದಲಿ ಕರುಳ ಮಾಲೆಯ ಧರಿಸಿ ತರಳನನು ಕಾಯಿದವರಾರು ಶ್ರೀಹರಿಯೆ 8 ಉರಿಯ ಮನೆಯಂದರಿಯದರಸರೈವರ ಹೊಗಲು ಇರಿಸಿರ್ದ ಬಾಗಿಲೊಳು ಉರಿ ಮುಸುಕಲು ಬೆರಸಿರ್ದ ನಿದ್ರೆಯೊಳು ಇರಿಸಿ ಕಾಯಿದವರಾರು ಕರೆಸಿ ದ್ರೌಪದಿಯನ್ನು ಕೊಡಿಸಿದವರಾರು 9 ಚಂದ್ರಹಾಸನು ವಿಷವ ತಿಂದು ಸಾಯಲಿಯೆಂದು ತಂದೆ ಬರೆದಿಹ ಲಿಖಿತ ನಂದನನು ನೋಡಿ ಮಂದಗಮನೆಯ ಕೊಟ್ಟು ಚಂದ್ರಹಾಸನ ನಿಲಿಸಾ ನಂದಳಿದ ಮಾಯವೇನೆಂದು ಹೇಳಯ್ಯ 10 ಕಾಯ ಭಯ ಹೊರತಾಗಿ ಮೀರಿದಾಪತ್ತಿನಲಿ ಕಡೆ ಸೇರಿಸೊ ಭೂರಮಣ ವರಾಹತಿಮ್ಮಪ್ಪ ಚರಣವನು ಕುಲಿಶ ನೀನಾಗು 11
--------------
ವರಹತಿಮ್ಮಪ್ಪ