ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ಪ್ರೀತಿಯೊ ಮನಕೆ ಎಷ್ಟು ಪ್ರೀತಿಯೊ ಪ ಇಷ್ಟವೆಂದು ತಿಳಿದು ಈ ಕಷ್ಟ ಸಂಸಾರ ಹೊರುವುದು ಅ ಹಸಿವು ತೃಷೆಯು ಶೋಕ ಮೋಹ ಅಸುವಗೊಂಬ ಜನನ ಮರಣವಿಷ ಸಮಾನವಾದ ಬಹಳ ವ್ಯಸನ ಮೆರವಣಿಮುಸುಕಿ ಕವಿವ ವ್ಯಾಘ್ರದಂತೆ ಅಡಗಿ ಮುಪ್ಪುಗೊಂಬ ರೋಗವಿಷಯದೊಳಗೆ ಕ್ಲೇಶಪಟ್ಟು ವಿಷಯದಿಚ್ಛೆ ಬಿಡದ ಮನಕೆ 1 ನೀರಗುಳ್ಳೆ ಎನಿಪ ಕಣ್ಣ ನೀರಜಾಕ್ಷಿ ಎಂದು ಮತ್ತೆಸೋರುವ ಜಘನ ಕರಿಯ ಕುಂಭ ಸುರಿವ ಶ್ಲೇಷ್ಮದಮೋರೆ ಚಂದ್ರಬಿಂಬ, ಮಾಂಸವಿಕಾರವಾದ ಕುಚವ ಕನಕಕಲಶಸಾರವೆಂದು ನರಕರೂಪಿನ ನಾರಿಯರಿಗೆ ಭ್ರಮಿಸಿ ಬಾಳ್ವುದು2 ಕುಸುಮ ಗಂಧಮಾಲೆ ಕಸ್ತೂರಿಯನು ಪೂಸಿಕೊಂಡುವಸ್ತ್ರ ಒಡವೆ ಇಟ್ಟು ಬಹಳ ಶಿಸ್ತು ನರಕಿಯೆನಿಸಿ ಮೆರೆವುದು3 ಕಾಯ ಸೌಖ್ಯದಿಆಯಾಸಪಟ್ಟು ಗಳಿಸಿದರ್ಥ ಹೇಯವೆನದೆ ಭೋಗಿಸುತ್ತಬಾಯ ಸವಿಯನುಂಡು ಕಡೆಗೆ ನಾಯ ಸಾವು ಸಾಯೋ ಬಾಳಿಗೆ 4 ಮನ್ನಿಸಿ ಗುರುಹಿರಿಯರುಕ್ತಿಯನ್ನು ಕೇಳದೆ ಕಿವುಡುಗೆಟ್ಟುಜೊನ್ನೆಯ ತುಪ್ಪ ಅನ್ನ ಒಲ್ಲದೆ ಎಲುವು ಮಾಂಸವನ್ನು ತಿಂಬಕುನ್ನಿಯಾದೆನಯ್ಯ ಕೃಷ್ಣ ನಿನ್ನ ಮಾಯದೊಳು ಸಿಲ್ಕಿದಎನ್ನನುದ್ಧರಿಸೊ ಸುಪ್ರಸನ್ನ ಆದಿಕೇಶವ5
--------------
ಕನಕದಾಸ
ನಂದ ಕುಮಾರ ಆನಂದ ಬಾ ಬಾ ಪ. ಚಂದಿರ ಸದೃಶ ನಂದನೆ ಬಾ ಬಾ ಎನ್ನಾನಂದ ಬಾ ಬಾ ಅ.ಪ. ನಿನ್ನ ಕಾಣದೆ ನಾ ನಿಲ್ಲಲಾರೆ ಕೃಷ್ಣಾ ನಿನ್ನ ಮುಖಬಿಂಬ ನೋಡಲೆಂತಾನಂದವೊ ನಿನ್ನ ಸುಳಿಪಲ್ಲಿನ ನಗೆ ಬೀರೋ ಕೃಷ್ಣಾ ನಿನ್ನ ನೋಡುವೆ ಪಾಡುವೆ ಆನಂದ ಬಾ ಬಾ 1 ಕರುಣಾಕರ ನೋಟವ ಬೀರೋ ಕೃಷ್ಣಾ ವೈಜಯಂತಿ ಮಾಲಾ ಶೋಭಾ ಕೃಷ್ಣಾ ಚರಣದಂದಿಗೆಯ ಗೆಜ್ಜೆ ನಾಟ್ಯದೊಳು ನಲಿದಾಡೊ ಕೃಷ್ಣಾ ಕುಣಿದಾಡೊ ಕೃಷ್ಣಾ 2 ಚೆಂದ ಮಾಮನ ನೀ ಕೇಳೆ ತೋರುವೆನು ಅಂದ ಕನ್ನಡಿಯೊಳ ರೂಪ ನೋಡುವೆನು ಸುಂದರಾಂಗ ಮುತ್ತನಿಟ್ಟು ನಲಿಯುವೆನು ಚಂದ್ರಬಿಂಬಧರಾ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ನೀಲಮೇಘಶ್ಯಾಮಾ ಬಾರೊ ನೀವೊಂದು ಮುತ್ತ ತಾರೋ ಪ. ನೀರಜಾಕ್ಷ ನಲಿದು ಬಾರೊ ನಗೆಮೊಗವನ್ನೆ ತೋರೊ ಅ.ಪ. ನಿನ್ನ ಸಮರ್ಯಾರೊ ಕೃಷ್ಣಾ ಸನ್ನುತಾಂಗ ಓಡಿ ಬಾರೋ ಬೆಣ್ಣೆಕೋಲು ಬೆಂಡು ಬುಗುರಿ ಚಿನ್ನ ರನ್ನ ಕೊಡುವೆ ಬಾರೋ 1 ಮುತ್ತಿನಂಗಿ ಕೊಡಿಸುವೇನೂ ರತ್ನತಿಲಕವಿಡುವೆ ಬಾರೋ ವತ್ತಿ ನಿನ್ನ ಬಾಯೊಳೂದೆ ರತ್ನ ಕೊಳಲ ಕೊಡುವೆ ಬಾರೋ 2 ಸ್ವರ್ಣಮಯೂರಂಗವ ತೋರೊ ನೀಲವರ್ಣಾ ಚಂದ್ರಬಿಂಬ ಬಾರೋ 3 ಭಕ್ತಿ ಸುರಧೇನುಬಾರೊ ಮುಕ್ತಿದಾತ ಶ್ರೀ ಶ್ರೀನಿವಾಸ ಮಾಧವ ಬಾರೋ 4
--------------
ಸರಸ್ವತಿ ಬಾಯಿ
ಬಲ್ಲವನಿವನು ಚಿಕ್ಕವನಲ್ಲವೆ ಬಾಲಕನು ಇಲ್ಲದ ನುಡಿಗಳ ಎನ್ನೊಡನುಸುರಲು ಇಲ್ಲಿಗೆ ಬಂದಿರೆ ಗೋಪಿಯರÉಲ್ಲರು ಪ ಮಣಿಮಯದೊಡಿಗೆಯನು ತೆಗೆತೆಗೆದ್ಹಣಿವನೆ ಬಲ್ಲವನು ಉಣಲೊಲ್ಲ ಉಡಲೊಲ್ಲ ಚಲಗೊಂಡಳುವ ಜಾರ ಚೋರನಂಬರೇ 1 ಹೆಣ್ಣಿಗೆ ಮರುಳಾಗುವ ಪ್ರಾಯವೆ ಕಣ್ಣು ನಿಮಗೆ ಕಾಣವೆ ಸಣ್ಣವನಿವಗೆ ನಿಲುಕದ ನೆಲುವಿನ ಪಾ ಲ್ಬೆಣ್ಣೆಯ ಮೆದ್ದೋಡಿ ಬಂದನೆಂದೆಂಬರೆ 2 ಅಂಬರದೊಳು ಮೂಡಿದ ಚಂದ್ರಬಿಂಬವ ತಾರೆನುತ ಕುಂಬಿನಿಯೊಳು ಬಿದ್ದು ಹೊರಳುವ ತರಳ ಹಿಡಿಂಬೆಯ ರಮಣ ಕೋಣೆಯ ಲಕ್ಷ್ಮೀರಮಣನು 3
--------------
ಕವಿ ಪರಮದೇವದಾಸರು
ಶ್ಯಾಮಸುಂದರಿ ಭೂಮಿನಂದಿನಿ ರಾಮಸುಂದರಿ ಸೀತೆಯೆ ಪ ಪ್ರೇಮದಿಂದ ದಿವ್ಯ ಪೀಠಕೆ ಭಾಮಿನಿಯೆ ಬಾ ಪ್ರಿಯೆ ಅ.ಪ. ದೇವ ಸುಂದರಿಯರು ಸೇರಿ ದೇವಿ ನಿನ್ನ ಕರೆವರು ದೇವ ವೃಂದವು ನಿನ್ನ ಸ್ಮರಿಸಿ ಭಾವಿಸುತ್ತಲಿರುವರು 1 ಮಂದಗಮನೆ ಸುಂದರಾಂಗಿ ಮಂದಹಾಸ ಶೋಭಿತೆ ಚಂದ್ರಬಿಂಬ ಸದೃಶವದನೆ ಚಂದ್ರವಂಶ ನಂದಿನಿ 2 ಭ್ರಮರ ವೇಣಿ ಸುಮ ಸುಮಾಲಿ ಕಾಯುತೆ ವಿಮಲ ವಾಣಿ ರಮಣಿ ತರುಣಿ, ಸುಮನ ಕೀರವಾಣಿಯೆ 3 ಮಾನಿನಿ ಶಿರೋಮಣಿಯೆ ಧೇನುನಗರ ವಲ್ಲಭೆ ಜಾನಕಿಯೆ ಸನ್ನುತೆಯೆ ಮೌನಿ ಬೃಂದವಂದಿತೆ4
--------------
ಬೇಟೆರಾಯ ದೀಕ್ಷಿತರು