ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜನನಿ ರುದ್ರಾಣಿ ರಕ್ಷಿಸು ಎನ್ನ ಜಗದೀಶನ ರಾಣಿ ಪ. ವನಜಭವಸುರಮುನಿಕುಲಾರ್ಚಿತೆ ಕನಕವರ್ಣಶರೀರೆ ಕಮಲಾ- ನನೆ ಕರುಣಾಸಾಗರೆ ನಮಜ್ಜನ- ಮನಮುದಾಕರೆ ಮಾನಿತೋದ್ಧರೆ ಅ.ಪ. ಆದಿಕೃತಾಯುಗದಿ ಪ್ರತಿಷ್ಠಿತ- ಳಾದೆ ಧರಾತಳದಿ ಆದಿತೇಯರ ಬಾಧಿಸುವ ದಿತಿ- ಜಾಧಮರ ಭೇದಿಸಿದೆ ಸಜ್ಜನ- ರಾದವರ ಮನ್ನಿಸಿದೆ ತ್ರೈಜಗ- ದಾದಿಮಾಯೆ ವಿನೋದರೂಪಿಣಿ 1 ಖಂಡ ಪರಶುಪ್ರೀತೆ ನಿಖಿಲಬ್ರ- ಹ್ಮಾಂಡೋದರಭರಿತೆ ಚಂಡಮುಂಡವೇತಂಡದಳನೋ- ದ್ದಂಡಸಿಂಹೆ ಅಖಂಡಲಾರ್ಚಿತೆ ಪಾಂಡುತನುಜ ಕೋದಂಡ ವಿತರಣೆ ಚಂಡಿಕೇ ಕರದಂಡಲೋಚನಿ2 ಸಿಂಧೂರ ಸಮಯಾನೆ ಸರಸ ಗುಣ- ವೃಂದೆ ಕೋಕಿಲಗಾನೆ ಸುಂದರಾಂಗಿ ಮೃಗೇಂದ್ರವಾಹಿನಿ ಚಂದ್ರಚೂಡಮನೋಜ್ಞೆ ಸತತಾ- ನಂದಪೂರ್ಣೆ ಮುನೀಂದ್ರನುತೆ ಸುಮ- ಗಂಧಿ ಗೌರಿ ಶಿವೇ ಭವಾನಿ 3 ಲಂಬೋದರಮಾತೆ ಲಲಿತ ಜಗ- ದಂಬಿಕೆ ಗಿರಿಜಾತೆ ಕಂಬುಕಂಠಿ ಕಾದಂಬನೀಕು- ರುಂಬಜಿತಧಮ್ಮಿಲ್ಲೆ ತವ ಪಾ- ದಾಂಬುಜವ ನಾ ನಂಬಿದೆನು ಎನ- ಗಿಂಬು ಪಾಲಿಸೆ ಶುಂಭಮರ್ದಿನಿ 4 ಘನವೇಣುಪುರವಾಸೆ ಸರ್ವಾರ್ಥದಾ- ಯಿನಿ ತ್ರೈಜಗದೀಶೆ ಸನಕನುತೆ ಶ್ರೀಲಕ್ಷುಮಿನಾರಾ- ಯಣಭಗಿನಿ ಶ್ರೀಮಹಿಷಮರ್ದಿನಿ ಮನಮಥಾಮಿತರೂಪೆ ಕಾತ್ಯಾ- ಯಿನಿ ನಿರಾಮಯೆ ಮಂಜುಭಾಷಿಣಿ 5
--------------
ತುಪಾಕಿ ವೆಂಕಟರಮಣಾಚಾರ್ಯ