ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿದೆ ಗುರುರಾಯರನ್ನ ಈ ರೂಢಿಯೊಳಗೆ ಮೆರೆವೊ ಸಾರ್ವಭೌಮನ್ನ ಪ ಥಳಥಳಿಸುವ ಬೃಂದಾವನದಿ - ತಾನು ಕುಳಿತು ಭಕ್ತರಿಗೀವ ವರವನು ತ್ವರದಿ ನಳಿನನಾಭನ ಕೃಪಾಬಲದಿ - ಇದೆ ನಳಿನಜಾಂಡದಿ ಸರಿಗಾಣೆ ಮಹಿಮಾದಿ1 ಪೊಳೆವೊ ವಕ್ಷಸ್ಥಳದವನ - ಎಳೆ ತುಳಸಿ ಮಾಲಾಂಕಿತ ಕಂಧರಯುತನಾ ನಳಿನಾಕ್ಷಮಾಲೆ ಶೋಭಿತನ - ಉರ ಚಲುವ ದ್ವಾದಶಪುಂಢ್ರ -ಮುದ್ರಚಿಹ್ನಿತನಾ 2 ಕೃಷ್ಣವರ್ಣದಿ ಶೋಭೀತನಾ - ಮಹಾ ವೈಷ್ಣವ ಕುಮುದ - ನಿಕರಕೆ ಚಂದಿರನಾ ವಿಷ್ಣು ಭಕ್ತಾಗ್ರೇಸರನಾ - ಬಾಲ ಕೃಷ್ಣಮೂರುತಿ ಪದಯುಗ ಸರೋಜ ಇನಾ 3 ದಿನನಾಥ - ದೀಪ್ತಿ - ಭಾಸಕನ - ಭವ ವನಧಿ - ಸಂತರಣ - ಸುಪೋತಕೋಪÀಮನಾ ಮುನಿಜನ ಕುಲದಿ ಶೋಭಿಪನ - ಸ್ವೀಯ ಜನರ ಪಾಲಕ ಮಹಾರಾಯನೆನಿಪನಾ 4 ಗುರುಜಗನ್ನಾಥ ವಿಠಲನ - ಪಾದ ಸರಸಿಜ ಯುಗಳಕಾರಡಿ ಎನಿಪÀನಾ ಪೆರಿವೋನು ತನ್ನ ಜನರನಾ - ಎಂದು ಶಿರಸದಿ ನಮಿಸಿ ಬೇಡಿದೆ ಗುರುವರನಾ 5
--------------
ಗುರುಜಗನ್ನಾಥದಾಸರು
ಮಾನವ ಪ ಸ್ಮರಿಸಿ ಜೀವಿಸು ರಂಗವಲಿದ ದಾಸರ ಪಾದ ಶರಧಿ ಚಂದಿರನಾದ ಮೊರೆ ಹೊಕ್ಕ ಶರಣಘುಕರಿಗೆ ಕೇಸರಿಯಾದ ಪರಮ ಸಾಧು ಸಹ್ಲಾದ ಅ.ಪ ತರಣಿ ತನಯನ ಸೂತ ಪುರಂದರಾರ್ಯರ ಗೃಹದಿ ತರಳನೆಂದೆನಿಸಿದಾತ ಮರುತ ದೇವನ ಪದಕೆ ಬರುವ ಯತಿಗಳ ದೂತ ವರದೇಂದ್ರ ತೀರ್ಥರಿಗೆ ಪ್ರೀತ || ಗುರುಧೇನು ಪಾಲ ವಿಜಯ ದಾಸವರ್ಯರ ಮಮತ ಭರಿತನಾಗುತ ಪೋಗಿ ಹರಿಣಾಂಕ ಭಾಗದಲಿ ತ್ವರಿತ ಸಿರಿ ಜಗನ್ನಾಥ ವಿಠಲಾಂಕಿತ ಪಡೆದಾತ ನಮಗೀತ ಗತಿ ಪ್ರದಾತ 1 ದುರಿತ ವಿದೂರ ಮೂರ್ಹತ್ತು ಶರಯುಗ್ಮ ಗ್ರಂಥಗಳ ಸುವಿಚಾರ ತೋರಿ ಬರುತಿಹ ದಿವ್ಯ ಹರಿಕಥಾಮೃತಸಾರ ಸಾರಿದಂಥ ಸುಧೀರ || ಕಾರುಣ್ಯದಲಿ ಪೊರೆವ ಧರಣಿಸುರ ಪರಿವಾರ ಸುಜನ ಕೋರಿಕೆಯ ಮಂದಾರ ಭೂರುಹದ ತೆರದಿ ಘುನ ಸೂರೆ ಕೊಡುವನುದಾರ ದುರಿತವಿಪಿನ ಕುಠಾರ 2 ಇವರ ಕವನ ಪಠಣ ಶ್ರವಣ ಮನನಗಳಿಂದ ಲವಕೇಶವಾಗದು ಜವನ ಭವನದ ಬಂಧ ಅವಿವೇಕತಮದಿ ವರಚರಿತೆ ತಿಳಿಯದೆ ನಿಂದೆ ಗೈದ ಮನಜ ದಿವಾಂಧ | ಭುವನದೊಳು ಬೆಳಗುತಿಹ ಇವರ ಮಹಿಮಾನಂದ ವಿವರಿಸಲು ಎನಗೊಶವೆ ಅವನಿಯೊಳು ನಾ ಮಂದ ಇವರ ಸನ್ನಿಧಿಯಲ್ಲಿ ಸಕಲ ನದಿಗಳ ವೃಂದ ನೆಲಸಿಹವು ನಲವಿಂದ 3 ಮೆರೆವ ಮಾನವಿ ಪುರದಿ ಇರುವ ಸ್ತಂಭದಿ ಜಾಣ ಎರಡೆರಡು ಸಚ್ಛಾಸ್ತ್ರವರಿತ ಘನ್ನ ಪ್ರವೀಣ ಪರವಾದಿಗಳ ವಾಗ್ಧುರದಿ ಗೆದ್ದ ಧುರೀಣ ಹರಿಗೆ ಪಂಚಪ್ರಾಣ || ಅರುಹಲೇನಿವರ ಚರಣನಂಬಿದ ಸುಜನ ಪರಮಭಾಗವತರೆನಿಸಿ ನಿರುತ ಹರಿಪದ ಧ್ಯಾನ ಪರರಾಗಿ ಮೆಟುತಲಿ ಮುಕುತಿಪಥ ಸೋಪಾನ ಸೇರಿದರು ನಿಜ ಸ್ಥಾನ 4 ಶಾಮಸುಂದರ ವಿಠಲ ಸ್ವಾಮಿಗತಿ ಪ್ರಿಯದಾಸ ಶ್ರೀಮದಕ್ಷತೆ ಗಂಧ ನಾಮದ್ವಾದಶ ಭೂಷ ತಿಮಿರ ದಿನೇಶ ಭೂಮಿ ವಿಬುಧರ ಪೋಷ || ಈ ಮಹಾತ್ಮರ ಚಾರುಧವಲಕೀರ್ತಿಪ್ರಕಾಶ ಸೋಮಸುಪ್ರಭೆಯಂತೆ ಪಸರಿಸುತÀ ಸಕಲದೇಶ ಸುಜನ ಕುಮುದ ವಿಕಾಸ ಗೊಳಿಸಿಗರೆದುದುಲ್ಹಾಸ 5
--------------
ಶಾಮಸುಂದರ ವಿಠಲ
ದಾಸನ ಮಾಡಿಕೊ ಎನ್ನ - ದಿವ್ಯಸಾಸಿರ ನಾಮದ ವೆಂಕಟಭೂಪರನ್ನ ಪಭವಭಯ ದುಃಖವ ಬಿಡಿಸೋ- ನಿನ್ನಕರುಣವಿದ್ಯೆಯನೆನ್ನ ಅಂಗಕ್ಕೆ ತೊಡಿಸೋ ||ಆವಾಗಲೂ ನಿನ ನಾಮ ನುಡಿಸೋ - ನಿನ್ನಚರಣಕಮಲದಲ್ಲಿ ಆರಡಿಯೆನಿಸೊ1ಗಂಗೆಯ ಪಡೆದಂಥಪಾದವರಶೃಂಗಾರ ಲಕ್ಷ್ಮಿ ಸ್ಮರಿಸುವಂಥಪಾದ||ಬಂಗಾರ ರಂಜಿತಪಾದ-ಹರಿಮಂಗಳ ಸದ್ಗತಿಗೆ ಚಂದಿರನಾದ 2ಸೆರಗೊಡ್ಡಿ ನಾ ಬೇಡಿಕೊಂಬೆ - ನಿನ್ನಹರವಾಣದೆಂಜಲ ನಾನು ಉಂಡೇನೆಂದೆ ||ಬಿರುದು ನಿನ್ನದುಹುಸಿಮಾಡದೆ - ನಮ್ಮಪುರಂದರವಿಠಲ ದಯಮಾಡೊ ತಂದೆ3
--------------
ಪುರಂದರದಾಸರು