ನಿಗಮನುಳುಹಿಸಿ ನಗನೆಗದಿಹಗೆ
ಜಗದೋದ್ದಾರ ಸುಭಗತ ಪ್ರಿಯಗೆ
ಸುಗಮ ಧರಿ ಮೂರಡಿಯ ಮಾಡಿ ಸುಗೊಡಲ ಪಿಡಿದಿಹಗೆ
ಬಗೆದು ಜಲಿಧಿಲಿ ಸೇತು ಗಟ್ಟಿದ
ಖಗವಾಹನ ಯದುಕುಲ ಲಲಾಮಗೆ
ಜಗಮೋಹಿಸುವ ಬೌದ್ಯಕಲ್ಕಿಗೆ ಶರಣು ಸುಶರಣು 1
ಸಿರಿಯನಾಳುವ ದೊರಿಯೆ ನಿನ್ನ
ಮರೆಯ ಹೊಕ್ಕಿಹ ಚರಣಕಮಲ
ಸರಿಯ ಬಂದ್ಹಾಂಗೆನ್ನ ಹೊರವದು ನಿನ್ನ ದಯ ಘನವು
ಬಿರುದು ನಿನ್ನದು ಸಾರುತಿಹುದು
ಕರಿಯ ವರದಾನಂದ ಮೂರುತಿ
ಸುರಿಸಿ ಕರುಣಾಮೃತವುಗರೆವುದು ತರಳ ಮಹಿಪತಿಗೆ 2
ಮೂರ್ತಿ ಸದ್ಗುರು
ನೆನೆವರನುದಿನ ಸಾರ್ಥ ಸದ್ಗುರು
ಜನವನದೊಳನುಕೂಲ ಸದ್ಗುರು ತಾನು ತಾಂ ಎನಗೆ
ಸಾರ ನೀಡುತ
ತನುಮನದೊಳನುವಾಗಿ ಸಲಹುವ
ದೀನಮಹಿಪತಿ ಸ್ವಾಮಿ ಭಾನುಕೋಟಿ ತೇಜನಿಗೆ 3
ಶರಣಜನಾರಾಭರಣವಾಗಿಹ
ಮೂರ್ತಿ ಸದ್ಗುರು
ತರಣೋಪಾಯದ ಸಾರಸುಖವಿರುವ ನಿಜದಾತ
ಪರಮಪಾವನ ಗೈಸುತಿಹ
ವರ ಶಿರೋಮಣಿ ಭಕ್ತವತ್ಸಲ
ಚರಣ ಸ್ಮರಣಿಲೆ ಪೊರೆವದನುದಿನ ತರಳ ಮಹಿಪತಿಗೆ 4
ನೋಡದೆನ್ನವಗುಣದ ದೋಷವ
ಮಾಡುವದು ಸದ್ಗುರು ದಯ ಘನ
ನೀಡುವುದು ನಿಜ ಸಾರಸುಖವನು ಕರುಣದೊಲವಿಂದ
ಬೇಡುವÀದು ನಿನ್ನಲ್ಲಿ ಪೂರಣ
ಪ್ರೌಢ ಘನಗುರುಸಾರ್ವಭೌಮನೆ
ಮೂಢ ಮಹಿಪತಿ ರಕ್ಷಿಸನುದಿನ ಸರ್ವಕಾಲದಲಿ 5
ಸ್ವಾಮಿ ಸದ್ಗುರು ಸಾರ್ವಭೌಮನೆ
ಕಾಮ ಪೂರಿತ ಕಂಜನಾಭನೆ
ಸಾಮ ಗಾಯನ ಪ್ರಿಯ ಸಲವ್ಹೆನ್ನಯ ಶ್ರೀ ನಿಧಿಯೆ
ಮಾಮನೋಹರ ಮನ್ನಿಸೆನ್ನ ನೀ
ನೇಮದಿಂದಲಿ ಹೊರೆವದನುದಿನ
ಕಾಮಧೇನಾಗಿಹ ಕರುಣದಿ ದೀನಮಹಿಪತಿಗೆ 6
ಕುಂದ ನೋಡದೆ
ಬಂದು ಸಲಹೆನ್ನಯ್ಯ ಪೂರ್ಣನೆ
ಇಂದಿರಾವಲ್ಲಭನೆ ತಂದಿ ತಾಯಿ ನೀ ಎನಗೆ
ಬಂಧು ಬಳಗೆಂದೆಂದು ನಿನ್ನನೆ
ಹೊಂದಿ ಕೊಂಡಾಡುವ ಮೂಢ ನಾ
ಬಂದ ಜನ್ಮವು ಚಂದಮಾಡು ನೀ ಕಂದ ಮಹಿಪತಿಗೆ 7
ದೀನಬಂದು ದಯಾಬ್ಧಿ ಸದ್ಗುರು
ಭಾನುಕೋಟಿ ತೇಜಪೂರ್ಣನೆ
ನ್ಯೂನ ನೋಡದೆ ಪಾಲಿಸೆನ್ನ ನೀ ಘನಕರುಣದಲಿ
ನೀನೆ ತಾಯಿತಂದೆಗೆ
ನೀನೆ ಬಂಧುಬಳಗ ಪೂರಣ
ನೀನೆ ನೀನಾಗ್ಹೊರೆವದನುದಿನ ದೀನಮಹಿಪತಿಗೆ 8